Thursday, July 29, 2010

ನಿಮ್ಮ ರೋಲ್ ಮಾಡೆಲ್ ಯಾರು?

ನಿಮ್ಮ ರೋಲ್ ಮಾಡೆಲ್ ಯಾರು ಎಂದು ತಿಳಿದುಕೊಳ್ಳಬೇಕೆ? ಹಾಗಾದರೆ ಈ ರೀತಿ ಮಾಡಿ,

  • ಮೊದಲು 1 ರಿಂದ 9ರವರೆಗಿನ ನಿಮಗೆ ಇಷ್ಟ ಬಂದ ಅಂಕಿಯನ್ನು ಇಟ್ಟುಕೊಳ್ಳಿ.
  • ಅದನ್ನು 3ರಿಂದ ಗುಣಿಸಿ,
  • ಬಂದ ಉತ್ತರಕ್ಕೆ 3ನ್ನು ಸೇರಿಸಿ 3ರಿಂದ ಗುಣಿಸಿ (ನೀವು ಕ್ಯಾಲ್ಕ್ಯುಲೇಟರ್‍ ಹುಡುಕುವ ವರೆಗೆ ನಾನು ಕಾಯುತ್ತೇನೆ.) ,
  • ನೀವೀಗ 2 ಅಥವಾ 3 ಅಂಕಿಗಳುಳ್ಳ ಸಂಖ್ಯೆಯನ್ನು ಪಡೆಯುತ್ತೀರಿ(ಉದಾ:31). ಆ ಸಂಖ್ಯೆಯ ಎಲ್ಲ ಅಂಕಿಗಳನ್ನು ಕೂಡಿರಿ(ಉದಾ 3+1). ನೀವೀಗ ಒಂದು ಒಂಟಿ ಅಂಕಿ [ಸಿಂಗಲ್ ಡಿಜಿಟ್ ನಂಬರ್‍] ಪಡೆದಿರುತ್ತೀರಿ (ಉದಾ:4) . ಈಗ ಕೆಳಗಡೆ ಆ ಅಂಕಿಯಲ್ಲಿ ಯಾರ ಹೆಸರು ಇದೆ ಎಂದು ನೋಡಿ, ಅವರೇ ನಿಮ್ಮ ರೋಲ್ ಮಾಡೆಲ್ ಆಗಿರುತ್ತಾರೆ. 

.

.
.
.
.
.
.
.
.
.
.
.
.
.
.
.
.
.

1. ಐನ್‌‌ಸ್ಟೈನ್
2. ನೆಲ್ಸನ್ ಮಂಡೇಲ
3. ಸದ್ದಾಂ ಹುಸೇನ್
4. ಸಚಿನ್ ತೆಂಡೂಲ್ಕರ್‍
5. ಬಿಲ್ ಗೇಟ್ಸ್
6. ಮಹಾತ್ಮಾ ಗಾಂಧಿ
7. ಅಲೆಕ್ಸಾಂಡರ್‍
8. ಹಿಟ್ಲರ್‍
9. ಪ್ರಸನ್ನ.ಎಸ್.ಪಿ
10. ಬರಾಕ್ ಒಬಾಮ


Tuesday, July 27, 2010

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?


(ಇದು ನನ್ನ ಮೊದಲ ಕವನ)

ಏಕೆ ಇಲ್ಲಿ ಸಿಕ್ಕಿಹಾಕಿಕೊಂಡೆ ನೀನು?

ಛತ್ರಿ ಹಿಡಿದು ಹೋದರೆ ನಡೆಯಲು ಬಿಡದ ಮಳೆ-ಗಾಳಿ
ದಾರಿ ಬಿಟ್ಟು ಇಳಿದರೆ ಮುತ್ತಿಕ್ಕಿ ರಕ್ತ ಹೀರುವ ಇಂಬಳಗಳು
ಮುಳುಗಿದ ಸೇತುವೆಯಾಚೆ ನಿಲ್ಲುವ ಅಸಹಾಯಕ ಬಸ್ಸುಗಳು
ಸೊಂಟದ ಮೂಳೆ ಮುರಿಸುವ ಪಾಚಿಗಟ್ಟಿದ ಅಂಗಳ
ಇಲ್ಲಿಗೇಕೆ ಬಂದು ಸಿಕ್ಕಿಹಾಕಿಕೊಂಡೆ ನೀನು?

ಗಾಳಿಗೆ ಬಾಲ ತುಂಡರಿಸಿಕೊಂಡು ಸಾಯುವ ಫೋನು
ಗುಡುಗಿನ ಶಬ್ಧಕ್ಕೆ ಹೆದರಿ ಓಟ ಕೀಳುವ ಕರೆಂಟು
ನೀರು ಬೀಳಿಸಿಕೊಂಡು ಸುಟ್ಟುಹೋಗುವ ಮೂರ್ಖ(ರ) ಪೆಟ್ಟಿಗೆಗಳು
ತೂತು ಮಾಡಿನ ಕೆಳಗಿಟ್ಟ ಪಾತ್ರೆಗಳ ಅಹೋರಾತ್ರಿ ಸಂಗೀತ
ಇದನನುಭವಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

ದುಡ್ಡು ಕೊಟ್ಟರೂ ಗದ್ದೆ ಕೆಲಸಕ್ಕೆ ಬಾರದ ಕೆಲಸಗಾರರು
ಅಡಿಕೆಯ ಚಿಗುರನ್ನೂ ಸುಮ್ಮನೆ ಬಿಡದ ವಾನರ ಸೈನ್ಯ
ಎರಡು ತಿಂಗಳಿಗೋಸ್ಕರ ವರ್ಷವಿಡೀ ಸಾಕಬೇಕಾದ ಎತ್ತುಗಳು
ಮಳೆ ಬಂದರೆ ಮಣ್ಣಿನ ಮುದ್ದೆಯಾಗುವ ಗೋಡೆ-ಅಡಿಪಾಯಗಳು
ಈ ಕಷ್ಟವ ನೋಡಲೆಂದೇ ಇಲ್ಲಿಗೆ ಬಂದೆಯಾ ನೀನು?

ಕಾಯಿ ಬೀಳಿಸಿ ಹೆಂಚು ಒಡೆಯುವ ತೆಂಗಿನಮರ
ಹೊಂಡ ತಪ್ಪಿಸುವ ಸೈಕಲ್ಲುಗಳಿಗೆ ಚರಂಡಿ ತೋರಿಸುವ ರಸ್ತೆಗಳು
ಸಂಜೆಗೆ ಬರುವ ಬೆಳಗ್ಗಿನ ಹಳಸಲು ನ್ಯೂಸ್ ಪೇಪರ್ರು
ಬಿಸಿಲಿಗೆ ಬಟ್ಟೆ ಹಾಕುವುದನ್ನೇ ಕಾಯುವ ಮಾಯಕಾರ ಮಳೆ
ಇದನ್ನೆಲ್ಲಾ ತಾಳಿಕೊಳ್ಳಲೆಂದೇ ಇಲ್ಲಿಗೆ ಬಂದೆಯಾ ನೀನು?

ಮಳೆ-ಗಾಳಿ, ಕೊಟ್ಟಿಗೆಯ ಥಂಡಿಗೆ ನರಳುವ ಜಾನುವಾರುಗಳು
ಹಜಾರದಲ್ಲಿಟ್ಟ ಮರದ ಅಕ್ಕಿಯ ಪಥಾಸನ್ನೂ ಬಿಡದ ಹೆಗ್ಗಣ
ತನ್ನ ಮುಂದೆ ಹೋದ ಇಲಿಯನ್ನು ನೋಡಿ ಸುಮ್ಮನಾದ ಸೋಮಾರಿ ಬೆಕ್ಕು
ಹಾವು ಇಲಿ ಹಲ್ಲಿ ಕಪ್ಪೆಗಳ ಮಿನಿ ಮೃಗಾಲಯದಲ್ಲಿ,
ವಾಸಿಸಲೆಂದೇ ಇಲ್ಲಿಗೆ ಬಂದೆಯಾ ನೀನು?

(ಕೊನೆಯವರೆಗೆ ತಾಳ್ಮೆಯಿಂದ ಓದಿದ್ದಕ್ಕೆ ನಿಮಗೆ ಧನ್ಯವಾದಗಳು. ಪೂರ್ತಿ ಕವನ ಇಷ್ಟವಾಗದಿದ್ದರೂ ಕೆಲವೊಂದು ಸಾಲುಗಳು ನಿಮಗೆ ಮೆಚ್ಚುಗೆಯಾಗುತ್ತವೆ ಎಂದು ನಂಬಿದ್ದೇನೆ. ನಿಮಗೆ ಇಷ್ಟವಾದ ಸಾಲುಗಳನ್ನು ತಿಳಿಸಿ. ಇದು ನನ್ನ ಕವನ ಬರೆಯುವ ಮೊದಲ ಪ್ರಯತ್ನವಾದ್ದರಿಂದ ನಿಮ್ಮೆಲ್ಲರ ಸಲಹೆ ಸೂಚನೆಗಳು ನನಗೆ ಅಮೂಲ್ಯ. ಅದನ್ನು ತಿಳಿಸುವಿರೆಂಬ ನಂಬಿಕೆಯಲ್ಲಿರುವ,
-ಪ್ರಸನ್ನ.ಶಂಕರಪುರ  )

ಹುರುಳಿಸಾರು+ಸ್ವಲ್ಪ ಬೆಣ್ಣೆ+ಒಂದು ಹಪ್ಪಳ= ಅದ್ಭುತ ರುಚಿ!


ಹುರುಳಿ ಕಟ್ಟಿನ ಸಾರು ಮಲೆನಾಡಿಗರಿಗೆ ಮುಂಗಾರಿನ ಸಮಯದಲ್ಲಿ ಸಾಮಾನ್ಯ ಅಡುಗೆ. ದಿನವಿಡೀ ಗದ್ದೆಯನ್ನು ಹೂಟೆ (ಉಳುಮೆ) ಮಾಡುವ ಎತ್ತುಗಳಿಗೆ ಹುರುಳಿಯನ್ನು ಬೇಯಿಸಿ ಕೊಡುತ್ತಾರೆ. ಎತ್ತುಗಳಿಗೆ ಹೆಚ್ಚಿನ ಶಕ್ತಿ ಸಿಗಲಿ ಹಾಗೂ ಥಂಡಿಯ ವಾತಾವರಣದಿಂದ  ತೊಂದರೆಯಾಗದಿರಲಿ ಎಂಬುದೇ ಹುರುಳಿ ನೀಡುವ ಉದ್ದೇಶ. ಹಾಗೆ ಹುರುಳಿಯನ್ನು  ಬೇಯಿಸುವಾಗ ಸಿಗುವ ಕಂದು ರಸವೇ ಈ ಹುರುಳಿ ಕಟ್ಟು. ದಿನವಿಡೀ ತಣ್ಣನೆಯ ನೀರಿನಲ್ಲಿರುವ ಎತ್ತುಗಳ ಪಾದ ಮೆದುವಾಗಿರುತ್ತದೆ ಎಂಬ ಕಾರಣಕ್ಕಾಗಿ ಬಿಸಿಯಾಗಿರುವ ಹುರುಳಿಕಟ್ಟನ್ನು ಎತ್ತುಗಳ ಕಾಲಿಗೆ ಕೊಯ್ಯುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಹುರುಳಿಕಟ್ಟು ಸಾರು ಮಾಡುವುದಕ್ಕೆ ಬಳಕೆಯಾಗುತ್ತದೆ. ಅನ್ನ, ಬಿಸಿ ಬಿಸಿ ಹುರುಳಿ ಸಾರು, ಒಂದು ಮುದ್ದೆ ಬೆಣ್ಣೆ, ಮೇಲೊಂದು ಹಲಸಿನಕಾಯಿ ಹಪ್ಪಳವಿದ್ದರೆ, ಆಹಾ! ಅದಕ್ಕಿಂತ ರುಚಿಕರ ಊಟ ಯಾವುದೇ ಸ್ಟಾರ್‍ ಹೋಟೆಲ್‌ಗಳಲ್ಲೂ ದೊರೆಯುವುದಿಲ್ಲ. ಹುರುಳಿ ಬೇಯಿಸುವ ಮನೆಗಳಲ್ಲಿ ಪ್ರತಿದಿನ ಹುರುಳಿಕಟ್ಟಿಗಾಗಿ ಐದಾರು ಕ್ಯಾರಿಯರ್‌ಗಳು ಕಾದಿರುತ್ತವೆ ಎಂದರೆ ಅದರ ಬೇಡಿಕೆ ಎಷ್ಟಿರಬಹುದು ನೀವೇ ಊಹಿಸಿ. ಮಲೆನಾಡಿಗರು ಮಳೆಗಾಲದಲ್ಲಿ ದೇಹವನ್ನು ಥಂಡಿಯಿಂದ ಕಾಪಾಡಿಕೊಳ್ಳಲು ಹುರುಳಿ ಸಾರನ್ನು ಪ್ರಮುಖವಾಗಿ ಬಳಸುತ್ತಾರೆ. ಅಸ್ತಮಾ ಇರುವವರು ಹುರುಳಿ ಸಾರು ಬಳಸಿದರೆ ಒಳ್ಳೆಯದು ಎನ್ನುತ್ತಾರೆ ಹಿರಿಯರು.

ಇಷ್ಟೆಲ್ಲಾ ಕೇಳಿದ ನಂತರ ನಿಮಗೂ ಹುರುಳಿ ಸಾರು ತಿನ್ನಬೇಕೆನ್ನುವ ಆಸೆ ಉಂಟಾಗಿದ್ದರೆ ಈಗಲೇ ಹುರುಳಿ ಬೇಯಿಸಲು ಶುರುಮಾಡಿ. ಸಾರು ಮಾಡುವುದನ್ನು ನಾನು ಹೇಳಿಕೊಡುತ್ತೇನೆ.

ಹುರುಳಿಕಟ್ಟು ತಯಾರಿಸುವ ವಿಧಾನ:
ಮೊದಲು ಕ್ಲೀನ್ ಮಾಡಿದ ಹುರುಳಿಯನ್ನು ನೀರು ಹಾಕಿ ಬೇಯಿಸಿಕೊಳ್ಳಿ. ಹುರುಳಿಯನ್ನು ಕುಕ್ಕರ್‌ನಲ್ಲಿ ಬೇಯಿಸಬಹುದು ಅಥವಾ ಹಾಗೆಯೇ ಬೇಯಿಸಬಹುದು. ಕುಕ್ಕರ್‌ನಲ್ಲಿ ಬೇಯಿಸುವುದಾದರೆ ಮೊದಲು ಹುರುಳಿಗೆ ನೀರು ಸೇರಿಸಿ ನಾಲ್ಕು ಕೂಗು ಕೂಗಿಸಬೇಕು. ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮತ್ತೊಂದು ನಾಲ್ಕು ಕೂಗು ಕೂಗಿಸಬೇಕು. ಹಾಗೆಯೇ ಬೇಯಿಸುವುದಾದರೆ ಉಪ್ಪು ಹಾಕುವುದು ಬೇಡ. ಆದರೆ ತುಂಬ ಹೊತ್ತು ಬೇಯಿಸಬೇಕು. ನಂತರ ಕಂಡಿ ಇರುವ ಪಾತ್ರೆ ಬಳಸಿ ಹುರುಳಿ ಹಾಗೂ ಕಟ್ಟನ್ನು ಬೇರ್ಪಡಿಸಬಹುದು. ಹುರುಳಿ ಕಟ್ಟು ಗಾಢ ಕಂದು ಬಣ್ಣವಿರುತ್ತದೆ.

ಹುರುಳಿ ಸಾರು ಮಾಡುವ ವಿಧಾನ:
ಮೊದಲು ಕೊತ್ತಂಬರಿ(ಧನಿಯಾ), ಜೀರಿಗೆ, ಸ್ವಲ್ಪ ಮೆಂತ್ಯ, ಇಂಗು, ಸಾಸಿವೆ, ಕರಿಬೇವು, ಮೆಣಸಿನಕಾಯಿ ಹುರಿದುಕೊಳ್ಳಿ. ಅದನ್ನು ತೆಂಗಿನತುರಿಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಿ.(ಬೆಳ್ಳುಳ್ಳಿ ತಿನ್ನುವವರು ಅದನ್ನೂ ಸೇರಿಸಬಹುದು). ನಂತರ ಹುರುಳಿಕಟ್ಟಿಗೆ ಉಪ್ಪು, ಬೆಲ್ಲ, ಹುಣಸೆ ಹಣ್ಣು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ರುಬ್ಬಿಕೊಂಡ ಮಿಶ್ರಣವನ್ನು(ಮಸಾಲೆಯನ್ನು) ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದ್ದ ನಂತರ ಅದಕ್ಕೆ ತುಪ್ಪದಲ್ಲಿ ಸಾಸಿವೆಯೊಂದಿಗೆ ಒಗ್ಗರಣೆ ನೀಡಬೇಕು. ಇಷ್ಟು ಮಾಡಿದರೆ ಹುರುಳಿ ಸಾರು ರೆಡಿ. ನಂತರ ಅನ್ನಕ್ಕೆ ಈ ಸಾರು ಹಾಗೂ ಒಂದು ಸ್ವಲ್ಪ ಬೆಣ್ಣೆ ಸೇರಿಸಿ ಊಟ ಮಾಡಿದರೆ ಸೊಗಸಾಗಿರುತ್ತದೆ. ಜೊತೆಗೊಂದು ಹಲಸಿನಕಾಯಿ ಹಪ್ಪಳವಿದ್ದರೆ ಅದರ ಮಜಾನೇ ಬೇರೆ.

ಹುರುಳಿ ಪಲ್ಯ ಮಾಡುವ ವಿಧಾನ:
ಹುರುಳಿಕಟ್ಟು ತೆಗೆಯುವಾಗ ಬೇಯಿಸಿದ ಹುರುಳಿಯನ್ನು ಪಲ್ಯ ಮಾಡಲು ಬಳಸಬಹುದು. ಪಲ್ಯ ಮಾಡಲು ಮೊದಲು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಬಾಣಲೆಯಲ್ಲಿ ಬಾಡಿಸಿಕೊಳ್ಳಬೇಕು. ಅದಕ್ಕೆ ಸಕ್ಕರೆ ಅಥವಾ ಬೆಲ್ಲ, ಉಪ್ಪು, ಹುಣಸೆಹಣ್ಣು, ಮೆಣಸಿನ ಪುಡಿ, ಕರಿಬೇವು ಸೇರಿಸಿ ಹುರಿಯಬೇಕು. ನಂತರ ಅದಕ್ಕೆ ಬೆಂದ ಹುರುಳಿಯನ್ನು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿದರೆ ಹುರುಳಿ ಪಲ್ಯ ತಯಾರು. ಇದನ್ನು ಚಪಾತಿ, ರೊಟ್ಟಿ, ದೋಸೆಯೊಂದಿಗೆ ಸೇರಿಸಿಕೊಂಡು ತಿನ್ನಬಹುದು. ಅನ್ನದೊಂದಿಗೂ ಸೇವಿಸಬಹುದು.

ನೀವೂ ಹುರುಳಿ ಸಾರು ತಯಾರಿಸಿ ಸವಿದು ನೋಡಿ. ಏನಾದರೂ ಅನುಮಾನಗಳಿದ್ದರೆ ಕೇಳಿ. ಹಾಗೆಯೇ ಸಾರು ಹೇಗಿತ್ತು ಎಂಬುದನ್ನು ನಮಗೂ ತಿಳಿಸಲು ಮರೆಯದಿರಿ. ಮುಂದಿನ ದಿನಗಳಲ್ಲಿ ಮಲೆನಾಡಿನ ಇನ್ನಷ್ಟು ಅಡುಗೆಗಳನ್ನು ಮಾಡುವುದು ಹೇಗೆಂದು ಹೇಳಿಕೊಡುತ್ತೇನೆ. ನೀವೂ ಅವುಗಳನ್ನು ತಯಾರಿಸಿಕೊಂಡು ಸವಿಯಬಹುದು.


ಧನ್ಯವಾದಗಳೊಂದಿಗೆ,
-ಪ್ರಸನ್ನ.ಶಂಕರಪುರ

ಟೆಕ್-ಕನ್ನಡ ಎಂಬ ಹೊಸ ತಾಣ


ಕನ್ನಡ ಭಾಷೆಯಲ್ಲಿ ಜನರಿಗೆ ಸರಳವಾಗಿ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲು ಹಾಗೂ ಲೇಖನಗಳನ್ನು ಬರೆಯಲು ಟೆಕ್-ಕನ್ನಡ (http://techkannada.blogspot.com) ಎಂಬ ತಾಣವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ವಿಜ್ಞಾನ-ತಂತ್ರಜ್ಞಾನದ ಬಗೆಗಿನ ಲೇಖನಗಳನ್ನು ಪ್ರಕಟಿಸುವ ಉದ್ದೇಶವಿದೆ. ಹಾಗೂ ಅಂತರ್ಜಾಲದಲ್ಲಿ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡುವ ತಾಣಗಳ ಲಿಂಕ್‌ನ್ನು ಟೆಕ್-ಕನ್ನಡದಲ್ಲಿ ನೀಡಲಾಗುತ್ತದೆ. ನೀವೂ ಕೂಡ ಈ ತಾಣದಲ್ಲಿ ಲೇಖನಗಳನ್ನು ಬರೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ನೋಡಿ.

ಧನ್ಯವಾದಗಳೊಂದಿಗೆ,

-ಪ್ರಸನ್ನ.ಶಂಕರಪುರ

ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್‌‌ನಲ್ಲಿ ನನಗಾಗುತ್ತಿರುವ ತೊಂದರೆ

ಈಚೆಗೆ ಯಾಕೋ ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್ ತುಂಬಾ ತೊಂದರೆ ಕೊಡುತ್ತಿದೆ. ಪದೇ ಪದೇ ಡಿಸ್‌‌ಕನೆಕ್ಟ್ ಆಗುತ್ತದೆ. ಒಂದು ನಿಮಿಷದಲ್ಲಿ ಐದಾರುಬಾರಿ ಹೀಗಾದರೆ ಏನನ್ನಿಸಬೇಡ. ಬ್ರಾಡ್‌ಬ್ಯಾಂಡ್ ಬಗ್ಗೆಯೇ ಜಿಗುಪ್ಸೆ ಬಂದುಬಿಟ್ಟಿದೆ. ಅಲ್ಲದೇ ಮುಂಚಿನಷ್ಟು ವೇಗವೂ ಇಲ್ಲ. ಹಳೆ ಗಂಡನ ಪಾದವೇ ಗತಿ ಅಂತ ಡಯಲ್-ಅಪ್ ಕನೆಕ್ಷನ್ ಉಪಯೋಗಿಸುತ್ತಿದ್ದೇನೆ. ಅದು ಸ್ವಲ್ಪ ನಿಧಾನವಾದರೂ ಪದೇ ಪದೇ ಡಿಸ್‌ಕನೆಕ್ಟ್ ಆಗುವ ತೊಂದರೆ ಇರುವುದಿಲ್ಲ. ಈ ಬಗ್ಗೆ ಇನ್ನೂ ಬಿ.ಎಸ್.ಎನ್.ಎಲ್‌ ಗೆ ದೂರು ನೀಡಿಲ್ಲ. ಇವತ್ತು ಅಪ್ಪ ದೂರು ನೀಡಬೇಕು ಎನ್ನುತ್ತಿದ್ದರು. ಇದು ನಮಗೆ ಮಾತ್ರ ಆಗಿರುವ ತೊಂದರೆಯೇ ಅಥವಾ ಬಿ.ಎಸ್.ಎನ್.ಎಲ್ ಬ್ರಾಡ್‌ಬ್ಯಾಂಡ್ ಬಳಸುತ್ತಿರುವ ಎಲ್ಲರಿಗೂ ಹೀಗಾಗುತ್ತಿದೆಯೇ ಎಂದು ಗೊತ್ತಿಲ್ಲ. ನಿಮಗೂ ಇದೇ ರೀತಿಯ ತೊಂದರೆಯಾಗುತ್ತಿದ್ದರೆ ತಿಳಿಸಿ. ಹಾಗು ಇದಕ್ಕೇನಾದರೂ ಪರಿಹಾರವಿದ್ದರೆ ಅದನ್ನೂ ಹೇಳಿ.

-ಪ್ರಸನ್ನ.ಶಂಕರಪುರ

Sunday, July 25, 2010

ನೋಡಿದ್ರಾ ಅವನ ಗಟ್ಸ್?

ಒಂದು ಸಮುದ್ರದ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಮೂರು ಬೇರೆ ಬೇರೆ ಕಂಪೆನಿಗಳ ಪ್ರಾಜೆಕ್ಟ್ ಮ್ಯಾನೇಜರ್‌ಗಳು ಪ್ರಯಾಣಿಸುತ್ತಿರುತ್ತಾರೆ. ಆಗ ಅವರಲ್ಲಿ ಯಾರ ಕಂಪೆನಿಯ ಉದ್ಯೋಗಿಗಳಿಗೆ ಹೆಚ್ಚು ಗಟ್ಸ್ ಇದೆ ಎಂಬ ಚರ್ಚೆ ಪ್ರಾರಂಭವಾಗುತ್ತದೆ.


ಮೊದಲ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ಸಮುದ್ರಕ್ಕೆ ಹಾರಿ ಚಲಿಸುತ್ತಿರುವ ಹಡಗಿನ ಸುತ್ತ ಒಂದು ಸುತ್ತು ಈಜಿ ಬಾ’ ಎಂದು ಹೇಳುತ್ತಾನೆ. ಆತ ಅದನ್ನು ಪೂರೈಸಿದಾಗ ಆ ಮ್ಯಾನೇಜರ್ ಉಳಿದವರಿಗೆ ಕೇಳುತ್ತಾನೆ‍, "ನೋಡಿದ್ರಾ ಅವನ ಗಟ್ಸ್?"


ನಂತರ ಎರಡನೇ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ನೀನು ಎರಡು ಸುತ್ತು ಈಜಿ ಬಾ’ ಎನ್ನುತ್ತಾನೆ. ಆತ ಎರಡು ಸುತ್ತು ಈಜಿ ಬಂದಾಗ ಆ ಮ್ಯಾನೇಜರ್‍ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"


ಇದನ್ನೆಲ್ಲಾ ನೋಡುತ್ತಿದ್ದ ಮೂರನೇ ಕಂಪೆನಿಯ ಮ್ಯಾನೇಜರ್‍ ತನ್ನ ಟ್ರೈನಿಯನ್ನು ಕರೆದು ’ಇದೇ ರೀತಿಯ ಐದು ಸುತ್ತು ಈಜಿ ಬಾ’ ಎನ್ನುತ್ತಾನೆ.


ಆಗ ಆ ಟ್ರೈನಿ ತನ್ನ ಮ್ಯಾನೇಜರ್‌ಗೆ ಹೇಳುತ್ತಾನೆ, "ಏಯ್ ಅದೆಲ್ಲ ಆಗಲ್ಲ, ನಾನ್ಯಾಕೆ ಈಜಲಿ?"


ಮೂರನೇ ಕಂಪೆನಿಯ ಮ್ಯಾನೇಜರ್‍ ಉಳಿದವರಿಗೆ ಕೇಳುತ್ತಾನೆ, "ನೋಡಿದ್ರಾ ಅವನ ಗಟ್ಸ್?"


(ಆಂಗ್ಲ ನಗೆಹನಿಯೊಂದರ ಕನ್ನಡ ಅನುವಾದ)

ಸಗಣಿ ತಿನ್ನೋಕೆ ಕೆಚಪ್‌ ಬೇಕಾ?

ಒಬ್ಬಾತ ಹೊಸ ವ್ಯಾಕ್ಯೂಮ್‌ ಕ್ಲೀನರ್‍‌ನ ಮಾರಾಟಗಾರ ಒಂದು ಮನೆಯ ಬಾಗಿಲನ್ನು ತಟ್ಟಿದ. ಒಂದು ಮಹಿಳೆ ಆ ಮನೆಯ ಬಾಗಿಲನ್ನು ತೆಗೆದಳು. ಆಕೆ ಏನೆಂದು ಕೇಳುವ ಮೊದಲೇ ಆತ ಒಳಗೆ ನುಗ್ಗಿ ಪ್ಲಾಸ್ಟಿಕ್ ಚೀಲದಿಂದ ದನದ ಸಗಣಿ ತೆಗೆದು, ನೆಲಕ್ಕೆ ಹಾಕಿದ್ದ ಕಾರ್ಪೆಟ್ ಮೇಲೆ ಎರಚಿದ. ನಂತರ ಆಕೆಗೆ ಹೇಳಿದ, "ಮೇಡಂ, ನಮ್ಮ ಕಂಪೆನಿಯ ಹೊಸ ಶಕ್ತಿಶಾಲಿ ವ್ಯಾಕ್ಯೂಮ್ ಕ್ಲೀನರ್‌ ಬಳಸಿ ಇನ್ನು ಹತ್ತು ನಿಮಿಷದಲ್ಲಿ ಈ ಸಗಣಿಯನ್ನು ಸ್ವಲ್ಪವೂ ಉಳಿಯದಂತೆ ತೆಗೆಯುತ್ತೇನೆ. ಅದು ಸಾಧ್ಯವಾಗದಿದ್ದರೆ ನಾನೇ ಈ ಸಗಣಿಯನ್ನು ತಿನ್ನುತ್ತೇನೆ. ನಿಮಗೆ ನಂಬಿಕೆ ಬಂದ ನಂತರವೇ ಕೊಂಡುಕೊಳ್ಳಬಹುದು."


ಆಕೆ ಕೂಲಾಗಿ ಕೇಳಿದಳು, "ನಿಮಗೆ ಸಗಣಿ ತಿನ್ನೋಕೆ ಟೊಮ್ಯಾಟೋ ಕೆಚಪ್ ಬೇಕಾ?"

ಆತ ಆಶ್ಚರ್ಯದಿಂದ ಕೇಳಿದ, "ಏಕೆ ಮೇಡಂ?"

ಆಕೆಯ ಉತ್ತರ: "ಈಗ ಪವರ್‍ ಇಲ್ಲ. ಇನ್ನು ಅರ್ಧ ಗಂಟೆ ಆದ್ಮೇಲೇನೆ ಕರೆಂಟ್ ಬರೋದು!"


(ಆಂಗ್ಲ ನಗೆಹನಿಯೊಂದರ ಕನ್ನಡ ಅನುವಾದ)

Saturday, July 24, 2010

ಎಲ್ಲರೂ ಎಷ್ಟು ಕೊಡುತ್ತಿದ್ದಾರೆ?


ಒಂದು ಕಂಪೆನಿಯ ಎಲ್ಲಾ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದರು. ಕೆಲವರು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರೆ ಇನ್ನು ಕೆಲವರು ಜೋರುದನಿಯಲ್ಲಿ ಚರ್ಚಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ಹೊಸ ಟ್ರೈನಿಗಳು ಒಟ್ಟಾಗಿ ಬರುತ್ತಾರೆ. ಒಬ್ಬ ಟ್ರೈನಿಯು, ಹಿರಿಯ ಸಹೋದ್ಯೋಗಿಯ ಬಳಿ "ಇಲ್ಲಿ ಏನು ನಡೆಯುತ್ತಿದೆ?" ಎಂದು ಕೇಳುತ್ತಾನೆ.

ಆಗ ಆತ ಹೇಳುತ್ತಾನೆ, "ಭಯೋತ್ಪಾದಕರು ನಮ್ಮ ಬಾಸ್‌‌ನ್ನು ಅಪಹರಿಸಿದ್ದಾರೆ. ಅವರು ಒಂದು ಕೋಟಿ ಒತ್ತೆ ಹಣ ಕೇಳುತ್ತಿದ್ದಾರೆ. ಕೊಡದಿದ್ದರೆ ನಮ್ಮ ಬಾಸ್‌ ‌ಮೇಲೆ ಪೆಟ್ರೋಲ್‌‌ ಸುರಿದು ಬೆಂಕಿ ಹಚ್ಚುತ್ತಾರಂತೆ. ಅದಕ್ಕೆ ನಾವು ಸಂಗ್ರಹಣೆಗಾಗಿ ಪ್ರತಿಯೊಬ್ಬರ ಬಳಿ ಹೋಗುತ್ತಿದ್ದೇವೆ."

ಅವರಲ್ಲಿ ಒಬ್ಬ ಟ್ರೈನಿ ಕೇಳುತ್ತಾನೆ, "ನಾವೂ ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇವೆ. ಅಂದಹಾಗೆ ಪ್ರತಿಯೊಬ್ಬರೂ ಎಷ್ಟು ಕೊಡುತ್ತಿದ್ದಾರೆ? ನಮಗೆ ಸಾದ್ಯವಾದರೆ ನಾವೂ ಅಷ್ಟೇ ಕೊಡುತ್ತೇವೆ."

ಆಗ ಆ ಹಿರಿಯ ಉದ್ಯೋಗಿ ಹೇಳುತ್ತಾನೆ,........
.
.
.
.
.
.
.
.
.
.
.
.
.
.
.
.
.
.
.
.
.
.

          " ಸುಮಾರು ಒಂದು ಲೀಟರ್‍ "

    :)  ;-)  :-)  :D

Thursday, July 22, 2010

ಕಂಪ್ಯೂಟರ್‌‌ನಲ್ಲಿ ದಾಖಲೆಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸುವುದು


ನಿಮ್ಮ ಕಂಪ್ಯೂಟರ್‌‌ನ್ನು ಬಹಳ ಜನ ಬಳಸುತ್ತಿದ್ದು ಎಲ್ಲರಿಗೂ ಬೇರೆ ಬೇರೆ ಯೂಸರ್‍ ಅಕೌಂಟ್‌‌ಗಳಿದ್ದರೆ, ನೀವು ನಿಮ್ಮ ಖಾಸಗಿ ಅಥವಾ ಗುಪ್ತ ಫೋಲ್ಡರ್‌ಗಳನ್ನು ಬೇರೆಯವರಿಗೆ ಸಿಗದಂತೆ ರಕ್ಷಿಸಬಹುದು. ಅದಕ್ಕಾಗಿ ಹೀಗೆ ಮಾಡಿ. ಮೊದಲು ಕಂಟ್ರೋಲ್ ಪ್ಯಾನಲ್‌ಗೆ ಹೋಗಿ.




ಅಲ್ಲಿ Folder Options ಓಪನ್ ಮಾಡಿ. View ಟ್ಯಾಬ್ ಒತ್ತಿರಿ.




ಅದರಲ್ಲಿ ಕೆಳಗಡೆ Use simple file sharing (Recommended) ಎಂಬುದು ಆಯ್ಕೆಗೊಂಡಿರುತ್ತದೆ. ಅದನ್ನು ತೆಗೆದುಹಾಕಿ ನಂತರ Apply ಒತ್ತಿ.




ಇವಿಷ್ಟು ಮೊದಲನೇ ಹಂತದ ಕೆಲಸಗಳು.




ಈಗ ನೀವು ಯಾವ ಫೋಲ್ಡರ್‌ಗೆ ಸೆಕ್ಯುರಿಟಿ ನೀಡಬೇಕೋ ಆ ಫೋಲ್ಡರ್‌ ಮೇಲೆ ರೈಟ್‌‌ ಕ್ಲಿಕ್ ಮಾಡಿ Propertiesನ್ನು ಓಪನ್ ಮಾಡಿ. ನಂತರ Security ಟ್ಯಾಬ್ ಕ್ಲಿಕ್ ಮಾಡಿ.



Group or user names ಅನ್ನೋದರ ಕೆಳಗಿರುವ Add ಬಟನ್ ಒತ್ತಿರಿ. Enter the object names to select ಅನ್ನುವುದರ ಕೆಳಗಿನ ಬಾಕ್ಸ್‌‌ನಲ್ಲಿ ಯಾರಿಂದ ದಾಖಲೆಗಳನ್ನು ಮುಚ್ಚಿಡಬೇಕೋ ಅವರ ಯೂಸರ್‌ ನೇಮ್‌ನ್ನು ಕೊಟ್ಟು (ಉದಾ:Games) OK ಒತ್ತಿ.






ನಂತರ ಆ ಹೆಸರನ್ನು ಆಯ್ಕೆ ಮಾಡಿ ಕೆಳಗಿನ Full Control ಎದುರಿಗಿರೋ Deny ಅನ್ನೋದನ್ನು ಸೆಲೆಕ್ಟ್ ಮಾಡಿ Apply ಒತ್ತಿ. ಅದೇ ರೀತಿ ಯಾರ್ಯಾರಿಂದ ರಕ್ಷಿಸಬೇಕೋ  ಅವರೆಲ್ಲರ ಯೂಸರ್‌ ನೇಮ್‌ಗಳನ್ನು Add ಮಾಡಿ ಎಲ್ಲದಕ್ಕೂ Deny ಕೊಟ್ಟು OK ಒತ್ತಿರಿ.





ಆದರೆ ಇಷ್ಟೆಲ್ಲಾ ಮಾಡಲು ನಿಮ್ಮದು "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿರಬೇಕು. ಹೀಗೆ ಮಾಡಿದ ನಂತರ ಬೇರೆಯವರು ನಿಮ್ಮ ಫೋಲ್ಡರ್‌ನ್ನು ಓಪನ್ ಮಾಡಲು ಹೋದರೆ "ನಿಮಗೆ ಇದನ್ನು ವೀಕ್ಷಿಸಲು ಅನುಮತಿಯಿಲ್ಲ" ಎಂಬ ಸಂದೇಶ ಬರುತ್ತದೆ. ಬೇರೆಯವರದು "ಲಿಮಿಟೆಡ್ ಅಕೌಂಟ್" ಆಗಿದ್ದರೆ ಏನೂ ಮಾಡಲಾಗುವುದಿಲ್ಲ, ಆದರೆ ಅವರದು "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿದ್ದರೆ, ಸ್ವಲ್ಪ ತಲೆ ಉಪಯೋಗಿಸಿದರೆ ನಿಮ್ಮ ಫೋಲ್ಡರ್‌ನ್ನು ಭೇಧಿಸಬಹುದು. ಆದರೂ ಅದು ಅಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಹಾಗೆಂದು ನಿಮ್ಮ ಗುಪ್ತ ದಾಖಲೆಗಳನ್ನು ಬೇರೆಯವರಿಂದ ರಕ್ಷಿಸಲು ಇದು ಅತ್ಯುತ್ತಮ ವಿಧಾನವೇನಲ್ಲ. ಬೇರೆಯವರಿಗೆ ಇದರ ಬಗ್ಗೆ ಗೊತ್ತಿಲ್ಲದಿದ್ದರೆ ಈ ವಿಧಾನ ಉಪಯುಕ್ತ.

ಆದರೆ ಒಂದು ವಿಷಯ ನೆನಪಿಡಿ, ಈ ಕಂಪ್ಯೂಟರ್‍ ಜಗತ್ತಿನಲ್ಲಿ ನೀವೆಷ್ಟೇ ದಾಖಲೆಗಳನ್ನು ಮುಚ್ಚಿಟ್ಟರೂ ಅದನ್ನು ಹ್ಯಾಕ್ ಮಾಡುವವರು ಇದ್ದೇ ಇರುತ್ತಾರೆ. ಆದ್ದರಿಂದ ರಹಸ್ಯ ಮಾಹಿತಿಗಳನ್ನು, ಎಲ್ಲರಿಗೂ ಉಪಯೋಗಿಸಲು ಸಿಗುವಂತಹ ಕಂಪ್ಯೂಟರ್‌ಗಳಲ್ಲಿ ಇಡದಿರುವುದೇ ಒಳಿತು.

-ಪ್ರಸನ್ನ.ಎಸ್.ಪಿ

ಒಂದಿಷ್ಟು ಜೋಕ್‌ಗಳು...

1. ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್‍ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!
*************************************

2. ನಮ್ಮ ಸ್ನೇಹದ ಪಯಣ ತುಂಬಾ ನಡೆದಷ್ಟು ದೂರವಿದೆ. ಎಲ್ಲಿಯವರೆಗೆ ನಡೆಯಬೇಕೋ ಗೊತ್ತಿಲ್ಲ. ಎರಡು ಹೆಜ್ಜೆ ನೀವು ಹಾಕಿ, ಎರಡು ಹೆಜ್ಜೆ ನಾನು ಹಾಕುವೆ, ಆಮೇಲೆ.....
.
.
.
.
ಆಟೋ ರಿಕ್ಷಾ ಮಾಡೋಣ. :-)
***********************************
 

3. ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.

ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!
***************************************************

4. ಸರ್ದಾರ್‍ ದೊಡ್ಡ ಸೈಂಟಿಸ್ಟ್‌ ಆದ. ಒಮ್ಮೆ ಅವನು ಕಪ್ಪೆಯ ಮೇಲೆ ಪ್ರಯೋಗ ಮಾಡಿದ.
ಕಪ್ಪೆಯ ಒಂದು ಕಾಲು ಕತ್ತರಿಸಿ ಹಾರು ಕಪ್ಪೆ ಎಂದು ಹೇಳಿದ, ಆಗ ಕಪ್ಪೆ ಹಾರಿತು.
ಆಮೇಲೆ ಎರಡನೆಯ ಕಾಲನ್ನು ಕತ್ತರಿಸಿ ಹಾರು ಕಪ್ಪೆ ಎಂದ, ಕಪ್ಪೆ ಸ್ವಲ್ಪ ದೂರಕ್ಕೆ ಹಾರಿತು.
ಮೂರನೆಯ ಕಾಲನ್ನೂ ಕತ್ತರಿಸಿ ಹಾರು ಕಪ್ಪೆ ಎಂದಾಗ ಹಾರಲು ಪ್ರಯತ್ನಿಸಿತು.
ಕೊನೆಗೆ ನಾಲ್ಕನೆಯ ಕಾಲನ್ನೂ ಕತ್ತರಿಸಿ ಹಾಕಿ ಹಾರು ಕಪ್ಪೆ ಎಂದಾಗ ಆ ಕಪ್ಪೆ ಹಾಗೇ ಬಿದ್ದುಕೊಂಡಿತ್ತು.
ಕಡೆಗೆ ಸರ್ದಾರ್‍ ತನ್ನ ತೀರ್ಮಾನವನ್ನು ಬರೆದ. "ಕಪ್ಪೆಯ ನಾಲ್ಕೂ ಕಾಲನ್ನು ಕತ್ತರಿಸಿದಾಗ ಅದಕ್ಕೆ ಕಿವಿ ಕೇಳೋಲ್ಲ".
*******************************************************

5. ಸರ್ದಾರ್‍  ಮೊಬೈಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಹೋದ. ಸಂದರ್ಶನದಲ್ಲಿ ಆತನಿಗೆ ಕೇಳಿದ ಮೊದಲನೇ ಪ್ರಶ್ನೆ, ತುಂಬಾ ಫೇಮಸ್ ನೆಟ್‌ವರ್ಕ್ ಯಾವ್ದು?

ಸರ್ದಾರ್‌‌ನ ಉತ್ತರ:- ಕಾರ್ಟೂನ್‌ ನೆಟ್‌‌ವರ್ಕ್!
*********************************************************
6. ಟೀಚರ್‍: ನಿಮ್ಗೆ ಇಂಗ್ಲೀಷ್ ಗ್ರಾಮರ್‍ ಬಗ್ಗೆ ಸಂಶಯ ಇದ್ರೆ ಕೇಳಿ.

ಸರ್ದಾರ್‍: "I don't know" ಅಂದ್ರೆ ಏನು?

ಟೀಚರ್‍: ನನಗೆ ಗೊತ್ತಿಲ್ಲ.

ಸರ್ದಾರ್‍: ನಿಮ್ಗೆ ಇದೇ ಗೊತ್ತಿಲ್ಲ, ಇನ್ನೇನು ಕೇಳೋದು? 
********************************************
7. ಒಂದು ಹಳ್ಳಿಗೆ ಕರೆಂಟ್ ಬರೋ ಸುದ್ದಿ ಕೇಳಿ ಜನ ಖುಶಿಯಿಂದ ಡ್ಯಾನ್ಸ್

ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.

ಸರ್ದಾರ್‍: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?

ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!

:-) 
************************************************

ಕನ್ನಡ ಫಾಂಟ್ ಇಲ್ಲದಿದ್ದರೂ ಕಡತ ಓದುವುದು

ಮೈಕ್ರೋಸಾಫ್ಟ್ ವರ್ಡ್‌‌ನಲ್ಲಿ ನುಡಿ ಅಥವಾ ಬರಹ ತಂತ್ರಾಂಶದ ಮೂಲಕ ಕನ್ನಡ ಫಾಂಟ್ ಬಳಸಿ(ಉದಾ: Nudi Akshar-01) ಬರೆದ ಕಡತಗಳನ್ನು ಆ ಫಾಂಟ್ ಇಲ್ಲದ ಕಂಪ್ಯೂಟರ್‌ಗಳಲ್ಲಿ ಓದುವುದಕ್ಕೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕನ್ನಡದಲ್ಲಿ ಬರೆದ ಕಡತಗಳನ್ನು ಬೇರೆಯವರಿಗೆ ಕಳುಹಿಸುವಾಗ, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಅವರು ನಿಮ್ಮ ಡಾಕ್ಯುಮೆಂಟನ್ನು ಓದುವಂತೆ ಮಾಡಲು ಹೀಗೆ ಮಾಡಿ. ನೀವು ವರ್ಡ್ ಕಡತವನ್ನು ಸೇವ್ ಮಾಡುವ ಮೊದಲು tools ಗೆ ಹೋಗಿ Options ಒತ್ತಿರಿ.



ನಂತರ Save ಟ್ಯಾಬ್ ಕ್ಲಿಕ್ ಮಾಡಿ. ಅಲ್ಲಿ Save options ಕೆಳಗೆ Embed TrueType fonts ಅನ್ನು ಸೆಲೆಕ್ಟ್ ಮಾಡಿ OK ಒತ್ತಿರಿ.



ಈಗ ನಿಮ್ಮ ಕಡತಗಳನ್ನು ಸೇವ್ ಮಾಡಿ ಕಳುಹಿಸಿದರೆ ಆ ಕಡತವು ಯಾವುದೇ ಫಾಂಟಿಲ್ಲಿ ಬರೆದಿದ್ದರೂ ಕೂಡ ಬೇರೆ ಕಂಪ್ಯೂಟರ್‌‌ಗಳಲ್ಲಿ ಅದನ್ನು ಓದಬಹುದು, ಅವರಲ್ಲಿ ಆ ಫಾಂಟ್ ಇಲ್ಲದಿದ್ದರೂ ಓದುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. Unicodeನಲ್ಲಿ ಇಂತಹ ಹೆಚ್ಚಿನ ತೊಂದರೆಗಳಿರುವುದಿಲ್ಲ. ಆದರೆ ANSIಯಲ್ಲಿ ಸಾಕಷ್ಟು ಫಾಂಟಿನ ರಗಳೆಗಳಿರುತ್ತವೆ. ಆದ್ದರಿಂದ Unicodeನ್ನೇ ಹೆಚ್ಚು ಬಳಸುವುದು ಸೂಕ್ತ.

-ಪ್ರಸನ್ನ.ಎಸ್.ಪಿ

ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ಮೈಕ್ರೋಸಾಫ್ಟ್ ವರ್ಡ್ ಹಾಗೂ ಓಪನ್ ಆಫೀಸ್ ರೈಟರ್‌‌ನಲ್ಲಿ ಸುಲಭವಾಗಿ ಟೇಬಲ್ ಡ್ರಾ ಮಾಡಲು ಒಂದು ತಮಾಷೆಯಾದ ಫೀಚರ್‍ ಇದೆ. ಸುಮ್ಮನೆ +-+-+-+-+-+ ಅಂತ ಕೊಟ್ಟು ಎಂಟರ್‍ ಒತ್ತಿದ್ರೆ ಆಯ್ತು ಟೇಬಲ್ ರೆಡಿ.


ಆಮೇಲೆ ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ. ಇಲ್ಲಿ ನೀವು ಎಷ್ಟು - ಗಳನ್ನು ಬಳಸುತ್ತೀರೋ ಅಷ್ಟು ಕಾಲಂಗಳನ್ನು ಪಡೆಯಬಹುದು. ಉದಾಹರಣೆಗೆ +--+--+--+ ಎಂದು ಕೊಟ್ಟರೆ ಮೂರು ಕಾಲಂಗಳು ಹಾಗೂ +--+--+--+--+ ಎಂದು ಕೊಟ್ಟರೆ ನಾಲ್ಕು ಕಾಲಂಗಳು ಬರುತ್ತವೆ. ಅಲ್ಲದೇ ಎರಡು + ಗಳ ನಡುವಿನ ಮಧ್ಯದಲ್ಲಿ - ಗಳ ಸಂಖ್ಯೆ ಹೆಚ್ಚಾದಷ್ಟೂ ಕಾಲಂನ ಅಗಲ ಹೆಚ್ಚಾಗುತ್ತದೆ. ಮೊದಲನೆಯ ಕಾಲಂ ಕಡಿಮೆ ಅಗಲ, ಎರಡನೆಯ ಕಾಲಂ ಸ್ವಲ್ಪ ದೊಡ್ಡದು ಹಾಗೂ ಮೂರನೆಯ ಕಾಲಂ ದೊಡ್ಡದಾಗಿ ಬೇಕಿದ್ದರೆ ಹೀಗೆ ಕೊಡಬಹುದು: +--+-----+--------+


-ಪ್ರಸನ್ನ.ಎಸ್.ಪಿ

ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಕನ್ನಡ ಫಾಂಟಿನ ತೊಂದರೆ


ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫಾಂಟ್‌ ಲಿಸ್ಟ್‌‌ನಲ್ಲಿ ಕನ್ನಡ ಫಾಂಟ್‌‌ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.



ಅಲ್ಲಿ List font names in their font ಎಂಬುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Close ಒತ್ತಿರಿ.



ನಂತರದಲ್ಲಿ ಫಾಂಟ್‌‌ಗಳು ಸರಿಯಾಗಿ ಕಾಣುತ್ತವೆ.



-ಪ್ರಸನ್ನ.ಎಸ್.ಪಿ

Wednesday, July 21, 2010

ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ URL

 ನಿಮ್ಮ ಜಾಲತಾಣಕ್ಕೆ ಕನ್ನಡ ಲಿಪಿಯಲ್ಲಿ  URL

ನಿಮ್ಮ ಬಳಿ ಈಗಾಗಲೇ ಒಂದು ಜಾಲತಾಣ ಅಥವಾ ಬ್ಲಾಗ್ ತಾಣ ಇದ್ದರೆ ಅದಕ್ಕೆ ಕನ್ನಡ ಲಿಪಿಯಲ್ಲಿ URL ಕೊಡಬಹುದು. ಇದಕ್ಕಾಗಿ ನೀವು http://co.cc ತಾಣಕ್ಕೆ Sign In ಆಗಬೇಕಾಗುತ್ತದೆ. ನಂತರ ಅಲ್ಲಿರುವ ಸೂಚನೆಗಳನ್ನು ಪಾಲಿಸಿದರೆ ಉಚಿತವಾಗಿ ನಿಮ್ಮ ತಾಣಕ್ಕೆ ಕನ್ನಡ ಲಿಪಿಯಲ್ಲಿ ಒಂದು URL ಪಡೆಯಬಹುದು. ಆ URL ಈ ರೀತಿ ಇರುತ್ತದೆ- http://ನಿಮ್ಮಹೆಸರು.co.cc.

ಉದಾಹರಣೆಗೆ ನೋಡಿ, ನಾನು ನನ್ನ ಕನ್ನಡ ಬ್ಲಾಗ್ ತಾಣ http://prasannakannada.blogspot.com ಗೆ http://ಪ್ರಸನ್ನ.co.cc ಎಂಬ URL ಪಡೆದಿದ್ದೇನೆ. ಪ್ರಸನ್ನ.co.cc ಎಂದು ಕೊಟ್ಟರೆ ಸೀದಾ ನನ್ನ ಕನ್ನಡ ಬ್ಲಾಗಾದ http://prasannakannada.blogspot.com ಗೆ redirect ಆಗುತ್ತದೆ. ಇದರ ಉಪಯೊಗವೆಂದರೆ ಕನ್ನಡದಲ್ಲಿಯೂ URL ಗಳನ್ನು ಪಡೆಯಬಹುದು ಹಾಗೂ ಉದ್ದವಾದ ತಾಣಗಳಿಗೆ ಸಣ್ಣದಾದ ನೆನಪಿಟ್ಟುಕೊಳ್ಳಲು ಸುಲಭವಾಗುವ URL ಹೊಂದಬಹುದು.

ಇನ್ನೇಕೆ ತಡ? ಬೇರೆಯವರು ನಿಮ್ಮ ಹೆಸರನ್ನು ಪಡೆಯುವ ಮೊದಲು ನೀವೇ ಕನ್ನಡ ಲಿಪಿಯಲ್ಲಿ ನಿಮ್ಮ ತಾಣಕ್ಕೆ URL ಪಡೆದುಕೊಳ್ಳಿ.

ಏನಾದರೂ ಸಂದೇಹವಿದ್ದರೆ ದಯವಿಟ್ಟು ಹೇಳಿ. ಸಹಾಯಕ್ಕೆ ಸದಾ ಸಿಧ್ಧ. ಒಟ್ಟಿನಲ್ಲಿ ಅಂತರ್ಜಾಲದಲ್ಲಿ ಹೆಚ್ಚೆಚ್ಚು ಕನ್ನಡವನ್ನು ನಾವು ಉಪಯೋಗಿಸಬೇಕು.

-ಪ್ರಸನ್ನ.ಎಸ್.ಪಿ

ಬಾಳೆ ದಿಂಡಿನ ತೆಪ್ಪ










ತೆಪ್ಪದಲ್ಲಿರುವವನು ನಾನು.
ಚಿತ್ರಗಳು: ಮಹೇಶ.ಶಂ.ಶಂ

ನಂದು ಸಾರ್‍ ಆ ಜಾಗ...

ನಂದು ಸಾರ್‍ ಆ ಜಾಗ...

"ಏನಯ್ಯಾ, ಬಾಬು ಅವ್ರು ಮನೇಲಿದಾರಾ?"

’ಇದಾರೆ, ಏನಾಗ್ಬೇಕಾಗಿತ್ತು?’

"ನನ್ಹೆಸ್ರು ಗೋಪಾಲ್ ಅಂತ, ಬಾಬು ಅವ್ರನ್ನು ನೋಡ್ಬೇಕಿತ್ತು"

’ಏನ್ ವಿಷ್ಯ ಹೇಳಿ, ಅಣ್ಣಂಗೆ ಹೇಳ್ಬೇಕು’

"ಅವ್ರ ಹೊಸ ಅಪಾರ್ಟ್‌ಮೆಂಟ್ ಬಗ್ಗೆ ಮಾತಾಡ್ಬೇಕಿತ್ತು"

’ಸರಿ ಒಂದ್ನಿಮ್ಷ ಇಲ್ಲೇ ಇರಿ. ಅಣ್ಣನ್ನ ಕೇಳ್ಕಂಡು ಬರ್ತೀನಿ’
    
                     *****


"ಅಣ್ಣಾ, ಯಾರೋ ಗೋಪಾಲ್ ಅನ್ನೋರು ಬಂದಿದಾರೆ. ನಿಮ್ಮನ್ನು ನೋಡ್ಬೇಕಂತೆ"

’ಇಲ್ಲಿ ಆಗಲ್ಲ, ಆಫೀಸ್‌ಗೆ ಬಾ ಅಂತ ಹೇಳಿ ಕಳ್ಸು’

"ಅಣ್ಣಾ... ಅವ್ರು ನಿಮ್ ಹೊಸಾ ಅಪಾರ್ಟ್‌ಮೆಂಟ್ ಬಗ್ಗೆ ಮಾತಾಡ್ಬೇಕಂತೆ"

’ಹೌದಾ... ಗೋಪಾಲ್‌ ಅಂತನಾ?... ಸರಿ ಕಳ್ಸು’
    
                     *****


’ಸರಿ ಹೋಗಿ, ಅಣ್ಣ ಕರೀತಿದಾರೆ’

"ಆಯ್ತು ಕಣಪ್ಪ, ಥ್ಯಾಂಕ್ಸ್"
    
                   *****


"ಸರ್‍, ನಾನು ಗೋಪಾಲ್ ಅಂತ"

’ಸರಿ.. ಸರಿ.. ಬಂದಿದ್ ಏನಕ್ಕೆ ಅದನ್ ಮೊದ್ಲು ಹೇಳು’

"ಅದು... ಅದು..."

’ಸುಮ್ನೆ ಟೈಂ ವೇಸ್ಟ್ ಮಾಡ್ಬೇಡ. ಬಂದಿದ್ದೇನಕ್ಕೆ ಅಂತ ಮೊದ್ಲು ಹೇಳು’

"ಸರ್‍, ನೀವು ರಿಂಗ್ ರೋಡ್ ಜಂಕ್ಷನ್‌ ಹತ್ರ ಹೊಸ ಅಪಾರ್ಟ್‌ಮೆಂಟ್ ಕಟ್ಟಿಸ್ತಿದೀರಲ್ಲ, ಆ 60x100 ಸೈಟ್ ನಂದು. ಒಂದ್ ವರ್ಷದಿಂದ ನಾನು ಅಮೇರಿಕದಲ್ಲಿದ್ದೆ. ಈಗ್ ಬಂದ್ ನೋಡಿದ್ರೆ ನನ್ ಜಾಗ್ದಲ್ಲಿ ನೀವು ಅಪಾರ್ಟ್‌ಮೆಂಟ್ ಕಟ್ತಿದೀರಲ್ಲ, ಇದ್ಯಾವ ನ್ಯಾಯ ನೀವೇ ಹೇಳಿ"

’ಲೇ ಗೂಳಿ ಗುರು, ಆ ಅಪಾರ್ಟ್‌ಮೆಂಟಿನ ಜಾಗದ್ ಡಾಕ್ಯುಮೆಂಟನ್ನ ತಗೊಂಡು ಬಾ’



’ಇದನ್ನೆಲ್ಲಾ ಒಂದ್ಸಲ ಸರಿಯಾಗ್ ನೋಡು’



"ಏನ್ಸಾರ್‍ ಇದು? ಆ ಜಾಗ ನಿಮ್ ಹೆಸ್ರಲ್ಲಿದೆ. ಆದ್ರೆ ನಾನು ಆ ಸೈಟನ್ನು ಹತ್ ವರ್ಷದ್ ಹಿಂದೆ ತಗೊಂಡಿದ್ದು, ಇನ್ನೂ ಯಾರಿಗೂ ಮಾರಿಲ್ಲ. ಇಲ್ನೋಡಿ ನನ್ಹತ್ರ ಆ ಜಾಗದ ಆಸ್ತಿ ಪತ್ರದ ಜೆರಾಕ್ಸ್ ಕಾಪಿ ಇದೆ"

’ಸರಿ, ಅದಕ್ಕೆ ನಾನೇನ್ಮಾಡಕ್ಕಾಗತ್ತೆ? ನನ್ಹತ್ರನೂ ಆಸ್ತಿ ಪತ್ರ ಇದೆ’

"ಹಿಂಗಂದ್ರೆ ಹೇಗೆ ಸಾರ್‍? ನಾನು ಕಷ್ಟ ಪಟ್ಟು ಕೊಂಡಿದ್ದ ಸೈಟು ಅದು"

’ನೋಡು ನೀನೀಗ ನಾನ್ ಹೇಳೋ ಡೀಲ್‌ಗೆ ಗಲಾಟೆ ಮಾಡ್ದೆ ಒಪ್ಕಂಡ್ರೆ ಈ ಮನೆಯಿಂದ ಹೊರ್ಗೆ ಹೋಗ್ತೀಯ, ಇಲ್ಲಾಂದ್ರೆ ಉಳ್ದಿದ್ ವಿಷ್ಯ ನಿಂಗೆ ಬಿಟ್ಟಿದ್ದು ’

"ಏನದು ಸಾರ್‍?"

’ನೋಡು ನಿಂಗೆ ಎಂಟು ಲಕ್ಷ ಕೋಡ್ತೀನಿ. ಇದಕ್ಕೆ ಒಪ್ಕಂಡು ಜಾಗ ಖಾಲಿ ಮಾಡು’

"ಸಾರ್‍, ಎಂಟು ಲಕ್ಷ ತುಂಬಾ ಕಡ್ಮೆ ಆಯ್ತು. 60x100ರ ಸೈಟು ಸಾರ್‍ ಅದು"

’ಏನು... ಇದು ಕಡ್ಮೆನಾ? ಹತ್ ವರ್ಷದ್ ಹಿಂದೆ ಆ ಜಾಗ ತಗೋಬೇಕಾದ್ರೆ ನೀನು ಬರೀ 2 ಲಕ್ಷ ಕೊಟ್ಟಿದ್ದೆ, ಈಗ ನಿಂಗೆ 8 ಲಕ್ಷ ಕೊಡ್ತಿದೀನಿ. 6 ಲಕ್ಷ  ಜಾಸ್ತಿ ಕೊಡ್ತಿಲ್ವ? ಬೇಕಿದ್ರೆ 8 ಲಕ್ಷ ತಗೋ, ಇಲ್ದಿದ್ರೆ  ಏನೂ ಸಿಕ್ಕಲ್ಲ. ಡಾಕ್ಯುಮೆಂಟೆಲ್ಲಾ ನಮ್ ಕಡೆ ಇದೆ. ಏನೋ ಪಾಪ ಗೌರವಸ್ಥರು ಅಂತ ಮರ್ಯಾದೆಯಿಂದ ಮಾತಾಡ್ಸಿದ್ರೆ ನಂಗೇ ಎದ್ರುತ್ರ ಕೊಡ್ತೀಯಾ?’

"ಆಯ್ತು ಸಾರ್‍, ಅಷ್ಟೇ ಕೊಡಿ"

’ಸರಿ ನಾಳೇನೇ ಬಂದು ಕ್ಯಾಷ್ ತಗಂಡು ಹೋಗು. ಹಾಗೇ ಬರ್ತಾ ನಿನ್ಹತ್ರಿರೋ ಆ ಜಾಗದ್ ಡಾಕ್ಯುಮೆಂಟ್‌ಗಳನ್ನು ತಂಗೊಂಡ್ಬಾ. ನಾಳೆ ತರ್ಲಿಲ್ಲಾಂದ್ರೆ ನಾಡಿದ್ದಿಗೆ ನೀನೇ ಇರಲ್ಲ, ನೆನ್ಪಿಟ್ಕೋ’

"ಸರಿ ಸರ್‍, ನಾಳೇನೇ ಬರ್ತೀನಿ"

’ಹ್ಞೂಂ.. ಹ್ಞೂಂ.. ಈಗ ಜಾಗ ಖಾಲಿ ಮಾಡು’

                  *******

-ಪ್ರಸನ್ನ.ಎಸ್.ಪಿ

 

ಇಮೇಲ್ ಮೂಲಕ ಬ್ಲಾಗರ್‌ಗೆ ಪೋಸ್ಟ್ ಮಾಡುವುದು

ನೀವು ನಿಮಗೆ ಇಮೇಲ್‌ಗಳ ಮೂಲಕ ಬರುವ ಪ್ರಮುಖ ಮಾಹಿತಿಗಳನ್ನು ನಿಮ್ಮ ಬ್ಲಾಗ್‌ಗೆ ಹಾಕಬೇಕಿದ್ದರೆ ಅಥವಾ ಒಂದೇ ಲೇಖನವನ್ನು ಅನೇಕ ಬ್ಲಾಗ್‌ಗಳಿಗೆ ಪೋಸ್ಟ್‌ ಮಾಡಬೇಕಿದ್ದರೆ ಬ್ಲಾಗರ್‍ನಲ್ಲಿರುವ ಒಂದು ಸೌಲಭ್ಯ ನಿಮಗೆ ಉಪಯೋಗಕ್ಕೆ ಬರುತ್ತದೆ. ಮೊದಲು ಬ್ಲಾಗರ್‌ನಿಂದ ನಿಮ್ಮ ಅಕೌಂಟಿಗೆ ಲಾಗಿನ್ ಆಗಿ.

ನಿಮ್ಮ Dashboardನಲ್ಲಿ ಕಾಣುವ Settings ಲಿಂಕ್ ಒತ್ತಿರಿ.




ನಂತರ ಸೆಟ್ಟಿಂಗ್ಸ್‌ನಲ್ಲಿ Email & Mobile ಟ್ಯಾಬ್ ಒತ್ತಿರಿ.


ಅಲ್ಲಿ Posting Options ಕೆಳಗೆ Email Posting Address(Also known as Mail2Blogger) ಎಂದಿರುತ್ತದೆ.


ಅಲ್ಲಿ ಮೊದಲ ಅರ್ಧಭಾಗ ನಿಮ್ಮ ಗೂಗಲ್ ಐಡಿ ಇರುತ್ತದೆ. ಉತ್ತರಾರ್ಧದಲ್ಲಿ ಅಂದರೆ ಡಾಟ್ ಆದ ನಂತರ ಇರುವ ಬಾಕ್ಸ್‌‌ನಲ್ಲಿ ಒಂದು ಗುಪ್ತವಾದ ಪದ ನೀಡಿರಿ. ಆದರೆ ಆ ಪದ ಬೇರೆಯವರಿಗೆ ಗೊತ್ತಾಗದಂತೆ ಎಚ್ಚರವಹಿಸಿ. ನಂತರ ಅಲ್ಲಿ ಮೂರು ಆಯ್ಕೆಗಳಿರುತ್ತವೆ.
ಮೊದಲನೆಯದು "ಇಮೇಲ್‌ಗಳನ್ನು ತಕ್ಷಣವೇ ಪೋಸ್ಟ್ ಮಾಡಿ"
ಎರಡನೆಯದು "ಇಮೇಲ್‌ಗಳನ್ನು ಡ್ರಾಫ್ಟ್ ರೀತಿ ಸೇವ್ ಮಾಡಿ"
ಮೂರನೆಯದು "ಈ ಸೌಲಭ್ಯ ಬೇಡ"

ನಿಮ್ಮ ಮೇಲ್‌ಗಳು ತಕ್ಷಣವೇ ನಿಮ್ಮ ಬ್ಲಾಗ್‌ನಲ್ಲಿ ಬರಬೇಕೆಂದರೆ ಮೊದಲನೆಯದನ್ನು ಆರಿಸಿ. ನಂತರ Save Settings ಒತ್ತಿರಿ. ಅಲ್ಲಿಗೆ ನಿಮಗೊಂದು mail2blogger ಐಡಿ ಸಿದ್ಧವಾಗುತ್ತದೆ. ಉದಾ:yourgoogleID.secretword@blogger.com.



ನಂತರ ಈ ಮೇಲ್ ಐಡಿಗೆ ನಿಮ್ಮ ಮೇಲ್ ಕಳುಹಿಸಿದರೆ ಅದು ನಿಮ್ಮ ಬ್ಲಾಗ್‌ನಲ್ಲಿ ಪೋಸ್ಟಾಗುತ್ತದೆ. ಇದೇ ರೀತಿ ನಿಮ್ಮೆಲ್ಲಾ ಬ್ಲಾಗ್‌ಗಳಿಗೂ ಒಂದೊಂದು ಐಡಿ ಪಡೆದುಕೊಂಡರೆ ಎಲ್ಲಾ ಬ್ಲಾಗ್‌ಗಳಿಗೂ ಒಮ್ಮೆಲೇ ಲೇಖನಗಳನ್ನು ಪೋಸ್ಟ್ ಮಾಡಬಹುದು. ಆದರೆ ಈ ಇಮೇಲ್ ಐಡಿ ಯಾರಿಗೂ ದೊರಕದಂತೆ ನೋಡಿಕೊಳ್ಳಿ. ಏಕೆಂದರೆ ನಿಮ್ಮ ಈ ಐಡಿ ಗೊತ್ತಾದರೆ ಯಾರುಬೇಕಾದರೂ ನಿಮ್ಮ ಬ್ಲಾಗ್‌ನಲ್ಲಿ ಏನು ಬೇಕಾದರೂ ಬರೆಯಬಹುದು. ಆದ್ದರಿಂದ ಈ ಸೌಲಭ್ಯ ಬಳಸುವಾಗ ಸಾಕಷ್ಟು ಎಚ್ಚರಿಕೆಯಿಂದಿರುವುದು ಅವಶ್ಯ.

ಇನ್ನು ಮೇಲ್‌ ಕಳುಹಿಸುವಾಗ ಒಂದು ಸೂಚನೆ.  ನೀವು ನಿಮ್ಮ ಲೇಖನಗಳನ್ನು ಇಮೇಲ್‌ ಮೂಲಕ ಬ್ಲಾಗರ್‌ ಜೊತೆ ಬೇರೆಯವರಿಗೂ  ಹಳುಹಿಸುತ್ತಿದ್ದಲ್ಲಿ  ನಿಮ್ಮ ಬ್ಲಾಗರ್‍ ಐಡಿಯನ್ನು To address ಎಂಬಲ್ಲಿ ಬರೆಯದೇ BCC ಎಂಬಲ್ಲಿ ಬರೆಯಿರಿ. ಏಕೆಂದರೆ To address ಜಾಗದಲ್ಲಿ ಬರೆದರೆ ನಿಮ್ಮ ಐಡಿ ಬೇರೆಯವರಿಗೂ ದೊರೆಯಬಹುದು. ಒಂದುವೇಳೆ ಬೇರೆಯವರಿಗೆ ನಿಮ್ಮ ಬ್ಲಾಗರ್‍ ಐಡಿ ಗೊತ್ತಾಗಿದೆ ಎಂಬ ಅನುಮಾನ ಬಂದರೆ ಕೂಡಲೇ ಬ್ಲಾಗರ್‌ನ ಸೆಟ್ಟಿಂಗ್ಸ್‌‌ನಲ್ಲಿ ನಿಮ್ಮ ಸೀಕ್ರೆಟ್ ವರ್ಡ್ ಬದಲಾಯಿಸಿ.

-ಪ್ರಸನ್ನ.ಎಸ್.ಪಿ

Monday, July 19, 2010

ಹೈಬರ್ನೇಟ್ ಮಾಡಿ, ಸಮಯ ಉಳಿಸಿ.

ನೀವು ನಿಮ್ಮ ಕಂಪ್ಯೂಟರ್‌‌ನ್ನು ಟರ್ನ್ ಆಫ್‌ ಮಾಡುವ ಬದಲು Hibernate ಮಾಡಿದರೆ ನಿಮ್ಮ ಅಮೂಲ್ಯ ಸಮಯ ಹಾಗೂ ವಿದ್ಯುತ್ ಉಳಿಸಬಹುದು. ಹೈಬರ್ನೇಟ್ ಮಾಡಿಡುವುದರಿಂದ ವಿಂಡೋಸ್ ಲೋಡ್ ಆಗಲು ಕಡಿಮೆ ಸಮಯ ಸಾಕಾಗುತ್ತದೆ. ಇದರಿಂದ ಸಮಯ ಹಾಗೂ ವಿದ್ಯುತ್ ಉಳಿತಾಯವಾಗುತ್ತದೆ. ಅಲ್ಲದೇ ಹೈಬರ್ನೇಟ್ ಮಾಡಿಡುವುದರಿಂದ ಎಲ್ಲಾ ಅಪ್ಲಿಕೇಷನ್‌ಗಳನ್ನು ಮತ್ತೊಮ್ಮೆ ಪ್ರಾರಂಭ ಮಾಡಬೇಕಾಗುವುದಿಲ್ಲ.

ಈಗ ಹೈಬರ್ನೇಟ್ ಮಾಡುವುದು ಹೇಗೆಂದು ನೋಡೋಣ. ಮೊದಲು Control Panel (start-->Control Panel) ಗೆ ಹೋಗಿ.



ಅಲ್ಲಿ Power options ಓಪನ್‌ ಮಾಡಿ, ಅಲ್ಲಿ Hibernate ಟ್ಯಾಬ್‌‌ ಕ್ಲಿಕ್ ಮಾಡಿ. ಕೆಳಗೆ Enable Hibernation ಎಂಬುದನ್ನು ಸೆಲೆಕ್ಟ್ ಮಾಡಿ.  Disk space for Hibernation ಎಂಬಲ್ಲಿ ಸಾಕಷ್ಟು ಖಾಲಿ ಜಾಗ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಂತರ Apply ಬಟನ್ ಒತ್ತಿರಿ.





ಅದಾದಮೇಲೆ Advanced ಟ್ಯಾಬ್‌ ಕ್ಲಿಕ್ ಮಾಡಿ.



ಅಲ್ಲಿ When I press the power button on my computer ಎಂಬಲ್ಲಿ Hibernate ಆರಿಸಿ OK ಒತ್ತಿರಿ. ಜೊತೆಗೆ Prompt for password when computer resumes from standby ಎನ್ನುವುದು ಸೆಲೆಕ್ಟ್ ಆಗಿಲ್ಲ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇದು ಸೆಲೆಕ್ಟ್ ಆಗಿದ್ದರೆ Windows resume ಅದಮೇಲೆ ಪಾಸ್‌ವರ್ಡ್ ಇದ್ದರೆ ಅದನ್ನು ಕೊಡಬೇಕಾಗುತ್ತದೆ ಇಲ್ಲದಿದ್ದರೆ ಯೂಸರ್‌ನೇಮ್‌ನ್ನು ಕ್ಲಿಕ್‌ ಮಾಡಬೇಕಾಗುತ್ತದೆ.


ಇದಿಷ್ಟು ಮೊದಲನೇ ಹಂತದ ಕೆಲಸಗಳು. ಈಗ ಹೈಬರ್ನೇಟ್ ಹೇಗೆ ಮಾಡಬಹುದು ಎಂದು ನೋಡೋಣ. ಇದನ್ನು ಮೂರು ರೀತಿ ಮಾಡಬಹುದು.
ಮೊದಲನೇ ರೀತಿ: When I press the power button on my computer ಎಂಬಲ್ಲಿ Hibernate ಆಯ್ಕೆಯನ್ನು ಆರಿಸಿರುವುದರಿಂದ ನಿಮ್ಮ ಕಂಪ್ಯೂಟರ್‌ ಆನ್‌ ಆಗಿದ್ದಾಗ CPUನಲ್ಲಿ ಪವರ್‌ ಗುಂಡಿ ಒತ್ತಿದರೆ ಕಂಪ್ಯೂಟರ್‌ ಹೈಬರ್ನೇಟ್‌ ಆಗುತ್ತದೆ.

ಎರಡನೇ ರೀತಿ: Turn off computer ಕೊಟ್ಟ ನಂತರ ಕೀಬೋರ್ಡ್‌ನಲ್ಲಿ shift ಗುಂಡಿ ಒತ್ತಿ ಹಿಡಿಯಿರಿ, ಆಗ Stand By ಜಾಗದಲ್ಲಿ Hibernate ಎಂದು ಬರುತ್ತದೆ. ಅದನ್ನು ಕ್ಲಿಕ್ಕಿಸುವುದರ ಮೂಲಕ ಹೈಬರ್ನೇಟ್ ಮಾಡಬಹುದು.




ಮೂರನೆಯ ರೀತಿ: ಡೆಸ್ಕ್‌‌ಟಾಪ್‌ನಲ್ಲಿ ರೈಟ್‌ ಕ್ಲಿಕ್ ಮಾಡಿ, New-->Shortcut ಸೆಲೆಕ್ಟ್ ಮಾಡಿ.





Type the location of the item ಎಂಬ ಜಾಗದಲ್ಲಿ ಈ ಕೆಳಗಿನ ಸಾಲುಗಳನ್ನು ಪೇಸ್ಟ್ ಮಾಡಿ.

rundll32.exe PowrProf.dll, SetSuspendState

ನಂತರ Next ಬಟನ್‌ ಒತ್ತಿರಿ.







Type a name for this shortcut ಜಾಗದಲ್ಲಿ Hibernate ಎಂದು ಕೊಟ್ಟು Finish ಒತ್ತಿರಿ.


ಈಗ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ Hibernate ಎಂಬ ಐಕಾನ್‌ ಇರುತ್ತದೆ. ಅದನ್ನು ಡಬಲ್ ಕ್ಲಿಕ್ ಮಾಡಿದರೆ ಕಂಪ್ಯೂಟರ್‍ ಹೈಬರ್ನೇಟ್ ಆಗುತ್ತದೆ.

ಅದೇ ರೀತಿ ಮೂರನೇ ವಿಧಾನದಲ್ಲಿ Type the location of the item ಎಂಬ ಜಾಗದಲ್ಲಿ

shutdownಗೆ   SHUTDOWN -s -t 01

ಹಾಗೂ restartಗೆ   SHUTDOWN -r -t 01

ಬಳಸಬಹುದು.


-ಪ್ರಸನ್ನ.ಎಸ್.ಪಿ

Sunday, July 18, 2010

ಅಡುಗೆ ಸಲಹೆಗಳು

  • ದೋಸೆ ಅಥವಾ ಇಡ್ಲಿ ಹಿಟ್ಟಿಗೆ ಒಂದು ಹೋಳು ಆಲೂಗಡ್ಡೆ ಹಾಕಿದರೆ ಚೆನ್ನಾಗಿ ಹುದುಗು ಬರುತ್ತದೆ.
  • ಹಲಸಿನಕಾಯಿ ಹಪ್ಪಳ ಮಾಡುವಾಗ ಹಿಟ್ಟು ನೀರಾದರೆ ಅದಕ್ಕೆ ಸ್ವಲ್ಪ ಅವಲಕ್ಕಿ ಪುಡಿ ಸೇರಿಸಿ ಹಪ್ಪಳ ಮಾಡಿದರೆ ಗಟ್ಟಿಯಾಗಿ ಬರುತ್ತದೆ ಹಾಗೂ ರುಚಿಯೂ ಚೆನ್ನಾಗಿರುತ್ತದೆ.
  • ಹೀರೇಕಾಯಿ ಬೋಂಡ ಮಾಡುವಾಗ ಹಿಟ್ಟಿಗೆ ಒಂದು ಚೂರು ಅರಿಶಿಣ ಪುಡಿ ಹಾಕಿದರೆ ಬೋಂಡ ಕೆಂಪು ಬಣ್ಣ ಬರುತ್ತದೆ.
  • ಬಾಳೇಕಾಯಿ ಅಥವಾ ಹಲಸಿನಕಾಯಿ ಚಿಪ್ಸ್ ಕರಿಯುವಾಗ ಎಣ್ಣೆಗೆ ಉಪ್ಪುನೀರು ಹಾಕಿದರೆ ಚಿಪ್ಸ್ ಗರಿಗರಿಯಾಗಿ ಬರುತ್ತದೆ.
  • ದೋಸೆ ಮಾಡುವಾಗ ಕಾವಲಿಗೆ ಈರುಳ್ಳಿ ಚೂರು ಉಜ್ಜಿದರೆ ದೋಸೆ ತಳ ಹಿಡಿಯುವುದಿಲ್ಲ.
  • ಈರುಳ್ಳಿ ಹೆಚ್ಚುವಾಗ ಚಾಕು ಬಿಸಿ ಮಾಡಿಕೊಂಡರೆ ಕಣ್ಣು ಉರಿಯುವುದಿಲ್ಲ.

ಹಳ್ಳಿಗೆ ಕರೆಂಟು!

ಒಂದು ಹಳ್ಳಿಗೆ ಕರೆಂಟ್ ಬರೋ ಸುದ್ದಿ ಕೇಳಿ ಜನ ಖುಶಿಯಿಂದ ಡ್ಯಾನ್ಸ್


ಮಾಡ್ತಿದ್ರು. ಒಂದು ನಾಯಿ ಸಹ ಖುಶಿಯಿಂದ ಡ್ಯಾನ್ಸ್ ಮಾಡ್ತಿತ್ತು.


ಸರ್ದಾರ್‍: ನೀನ್ಯಾಕೆ ಡ್ಯಾನ್ಸ್ ಮಾಡ್ತಿದೀಯ?


ನಾಯಿ: ಕರೆಂಟ್ ಜೊತೆ ಕಂಬನೂ ಬರುತ್ತಲ್ವ?, ಅದಕ್ಕೆ!


:-)

ಇಂಗ್ಲೀಷ್‌ ಗ್ರಾಮರ್

ಟೀಚರ್‍: ನಿಮ್ಗೆ ಇಂಗ್ಲೀಷ್ ಗ್ರಾಮರ್‍ ಬಗ್ಗೆ ಸಂಶಯ ಇದ್ರೆ ಕೇಳಿ.


ಸರ್ದಾರ್‍: "I don't know" ಅಂದ್ರೆ ಏನು?


ಟೀಚರ್‍: ನನಗೆ ಗೊತ್ತಿಲ್ಲ.


ಸರ್ದಾರ್‍: ನಿಮ್ಗೆ ಇದೇ ಗೊತ್ತಿಲ್ಲ, ಇನ್ನೇನು ಕೇಳೋದು?

ಸೂಜಿ

ಕೆಲವೊಮ್ಮೆ ಸಣ್ಣ ಸಣ್ಣ ವಸ್ತುಗಳು ತುಂಬಾ ನೋವನ್ನು ಕೊಡುತ್ತವೆ.


ನಂಬಿಕೆ ಇಲ್ಲದಿದ್ದರೆ ಸೂಜಿ ಮೇಲೆ ಕುಳಿತು ನೋಡಿ!!

ಸ್ನೇಹ

ನಮ್ಮ ಸ್ನೇಹದ ಪಯಣ ತುಂಬಾ ನಡೆದಷ್ಟು ದೂರವಿದೆ. ಎಲ್ಲಿಯವರೆಗೆ ನಡೆಯಬೇಕೋ ಗೊತ್ತಿಲ್ಲ. ಎರಡು ಹೆಜ್ಜೆ ನೀವು


ಹಾಕಿ, ಎರಡು ಹೆಜ್ಜೆ ನಾನು ಹಾಕುವೆ, ಆಮೇಲೆ....
.
.
.
.
ಆಟೋ ರಿಕ್ಷಾ ಮಾಡೋಣ. :-)

ಟೀಚರ್‌ಗೆ ಮರೆವು

ಗುಂಡ: ಅಮ್ಮ, ನಮ್ಮ ಟೀಚರ್‌ಗೆ ತುಂಬಾ ಮರೆವು.
ಅಮ್ಮ: ಯಾಕೋ ಗುಂಡ?
ಗುಂಡ: ನಮ್ ಟೀಚರ್‍ ಬೋರ್ಡಲ್ಲಿ "ಮಹಾಭಾರತ" ಎಂದು ಬರೆದು ತಿರುಗಿ ನಿಂತು ಕೇಳ್ತಾರೆ, ’ಮಹಾಭಾರತ ಬರೆದಿದ್ದು ಯಾರು?’ ಅಂತ!

ಫೇಮಸ್ ನೆಟ್‌ವರ್ಕ್

ಸರ್ದಾರ್‍ ಮೊಬೈಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಹೋದ. ಸಂದರ್ಶನದಲ್ಲಿ ಆತನಿಗೆ ಕೇಳಿದ ಮೊದಲನೇ ಪ್ರಶ್ನೆ,


ತುಂಬಾ ಫೇಮಸ್ ನೆಟ್‌ವರ್ಕ್ ಯಾವ್ದು?


ಸರ್ದಾರ್‌‌ನ ಉತ್ತರ:- ಕಾರ್ಟೂನ್‌ ನೆಟ್‌‌ವರ್ಕ್!

ಕಪ್ಪೆಗೆ ಕಿವಿ ಕೇಳೋಲ್ಲ

ಸರ್ದಾರ್‍ ದೊಡ್ಡ ಸೈಂಟಿಸ್ಟ್‌ ಆದ. ಒಮ್ಮೆ ಅವನು ಕಪ್ಪೆಯ ಮೇಲೆ ಪ್ರಯೋಗ ಮಾಡಿದ.
ಕಪ್ಪೆಯ ಒಂದು ಕಾಲು ಕತ್ತರಿಸಿ ಹಾರು ಕಪ್ಪೆ ಎಂದು ಹೇಳಿದ, ಆಗ ಕಪ್ಪೆ ಹಾರಿತು.
ಆಮೇಲೆ ಎರಡನೆಯ ಕಾಲನ್ನು ಕತ್ತರಿಸಿ ಹಾರು ಕಪ್ಪೆ ಎಂದ, ಕಪ್ಪೆ ಸ್ವಲ್ಪ ದೂರಕ್ಕೆ ಹಾರಿತು.
ಮೂರನೆಯ ಕಾಲನ್ನೂ ಕತ್ತರಿಸಿ ಹಾರು ಕಪ್ಪೆ ಎಂದಾಗ ಹಾರಲು ಪ್ರಯತ್ನಿಸಿತು.
ಕೊನೆಗೆ ನಾಲ್ಕನೆಯ ಕಾಲನ್ನೂ ಕತ್ತರಿಸಿ ಹಾಕಿ ಹಾರು ಕಪ್ಪೆ ಎಂದಾಗ ಆ ಕಪ್ಪೆ ಹಾಗೇ ಬಿದ್ದುಕೊಂಡಿತ್ತು.
ಕಡೆಗೆ ಸರ್ದಾರ್‍ ತನ್ನ ತೀರ್ಮಾನವನ್ನು ಬರೆದ. "ಕಪ್ಪೆಯ ನಾಲ್ಕೂ ಕಾಲನ್ನು ಕತ್ತರಿಸಿದಾಗ ಅದಕ್ಕೆ ಕಿವಿ ಕೇಳೋಲ್ಲ".

ಟೆಕ್ನಿಕಲಿ ಪರ್ಫೆಕ್ಟ್, ಆದರೆ.....


ಮೇಲಿನ ಉತ್ತರ ನೋಡಿ. ಎಷ್ಟು ಸುಲಭವಾಗಿ xನ್ನು ಕಂಡು ಹಿಡಿದಿದ್ದಾನೆ. ಯಾವನೋ ಅತೀ ಬುದ್ಧಿವಂತನೇ ಬರ್ದಿರ್ಬೇಕು! 
ಇದನ್ನು ನೋಡಿ ನನಗೊಂದು ಜೋಕ್ ನೆನಪಾಯಿತು....


ಒಂದು ನಗರದ ಮೇಲೆ ಹೆಲಿಕ್ಯಾಪ್ಟರ್‌ನಲ್ಲಿ ಪೈಲಟ್ ಹಾಗೂ ಸಹಪೈಲಟ್ ಹಾರಾಟ ನಡೆಸುತ್ತಿರುತ್ತಾರೆ. ಅವರಿಗೆ ವಿಮಾನ ನಿಲ್ದಾಣದೊಂದಿಗೆ ಸಂಪರ್ಕ ಕಡಿದು ಹೋದ ಕಾರಣ ತಾವೆಲ್ಲಿದ್ದೇವೆ ಎಂದು ತಿಳಿಯದೇ ಪೈಲಟ್ ಒಂದು ಕಟ್ಟಡದ ಸುತ್ತ ಒಂದು ಸುತ್ತು ಹಾಕಿ ಒಂದು ಹಾಳೆಯ ಮೇಲೆ "ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡದಾಗಿ ಬರೆದು ಆ ಕಟ್ಟಡದ ಎದುರಿಗೆ ಪ್ರದರ್ಶಿಸಿದ. ಅದನ್ನು ಓದಿ ಆ ಕಟ್ಟಡದಲ್ಲಿದ್ದ ಜನ ಒಂದು ಹಾಳೆಯ ಮೇಲೆ ದೊಡ್ಡ ಅಕ್ಷರಗಳಲ್ಲಿ ಹೀಗೆ ಬರೆದು ಪೈಲಟ್‌ನ ಕಡೆ ಪ್ರದರ್ಶಿಸಿದರು, "ನೀವೀಗ ಒಂದು ಹೆಲಿಕ್ಯಾಪ್ಟರ್‌‌ನಲ್ಲಿದ್ದೀರ". ಆ ಉತ್ತರವನ್ನು ನೋಡಿ ನಸುನಕ್ಕ ಆ ಪೈಲಟ್ ಮ್ಯಾಪ್ ತೆಗೆದ. ನಂತರ ಆ ಮ್ಯಾಪ್‌‌ನಲ್ಲಿ ವಿಮಾನ ನಿಲ್ದಾಣವನ್ನು ಗುರುತಿಸಿ ಹೆಲಿಕ್ಯಾಪ್ಟರ್‌‌ನ್ನು ಸೀದಾ ನಿಲ್ದಾಣದಲ್ಲಿ ಇಳಿಸಿದ. ಆಗ ಸಹಪೈಲಟ್ ಕೇಳಿದ, "ನೀವೀಗ ಒಂದು ಹೆಲಿಕ್ಯಾಪ್ಟರ್‌‌ನಲ್ಲಿದ್ದೀರ" ಎಂಬ ಉತ್ತರ ನಿಮಗೆ ನಿಲ್ದಾಣ ಹುಡುಕಲು ಹೇಗೆ ಸಹಾಯ ಮಾಡಿತು? ಆಗ ಪೈಲಟ್, ಆ ಉತ್ತರದಿಂದ ನಾನೀಗ ಮೈಕ್ರೋಸಾಫ್ಟ್‌ನ ಕಟ್ಟಡದ ಪಕ್ಕ ಇದ್ದೇನೆ ಎಂದು ತಿಳಿಯಿತು, ನಂತರ ಮ್ಯಾಪ್‌ನಲ್ಲಿ ನಿಲ್ದಾಣದ ಮಾರ್ಗ ಹುಡುಕಿ ಹೆಲಿಕ್ಯಾಪ್ಟರ್‌‌‌ ಇಳಿಸಿದೆ ಎಂದನು. ನಿಮಗೆ ಅದು ಮೈಕ್ರೋಸಾಫ್ಟ್‌ನ ಕಟ್ಟಡವೆಂದು ಹೇಗೆ ತಿಳಿಯಿತು ಎಂದು ಸಹಪೈಲಟ್‌ ಕೇಳಿದನು. ಅದಕ್ಕೆ ಪೈಲಟ್ "ಅವರು ನೀಡಿದ ಉತ್ತರ ಮೈಕ್ರೋಸಾಫ್ಟ್‌ನ ಹೆಲ್ಪ್ ಲೈನ್‌ನ ಉತ್ತರದಂತೆ ಟೆಕ್ನಿಕಲಿ ಪರ್ಫೆಕ್ಟ್, ಆದರೆ ಸಂಪೂರ್ಣವಾಗಿ ಅನುಪಯುಕ್ತವಾಗಿತ್ತು. ಅದರಿಂದಲೇ ತಿಳಿಯಿತು ನಾನಾಗ ಎಲ್ಲಿದ್ದೆ ಎಂದು"... :-)

Monday, July 12, 2010

Get your mails through SMS


If you are using hotmail or live mail, you can get your mails through your mobile free of cost. Just you have to do is visit “this” site and login to your live or hotmail account.




Type your mobile number there. Eg:9400024365
Then press Next.
Now you will get a verification code in your mobile. (Eg:4873) Put this verification code in the verification box and press Next.




In the next window select Hotmail. Then you will get a Pricing and terms of use window, there press I agree button.


 Finally press Save button.


Now you will get all of your mails through SMS which was sent to your hotmail or live mail inbox. But the whole message will not be sent through SMS, they will send only subject and some part of the matter free of cost. If you want more part of that mail reply M to that number. But remember that, they will charge approximately Rs.1.50 to reply message

-Prasanna SP

Saturday, July 10, 2010

ಹಾಟ್‌ಮೇಲ್‌ನಲ್ಲಿ ನಿಮ್ಮ Gmailನ ಮೇಲ್‌ಗಳನ್ನು ಓದಬಹುದು


ನೀವು ನಿಮ್ಮ ಹಾಟ್‌ಮೇಲ್‌ ಅಥವಾ ಲೈವ್ ಅಕೌಂಟ್‌ ಮೂಲಕ ನಿಮ್ಮ Gmailನ ಅಥವಾ ಇನ್ನೊಂದು ಹಾಟ್‌ಮೇಲ್‌ ಅಕೌಂಟ್‌ನ ಮೇಲ್‌ಗಳನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನಿಮ್ಮ ಹಾಟ್‌ಮೇಲ್ ಅಥವಾ ಲೈವ್ ಅಕೌಂಟಿಗೆ ಲಾಗಿನ್ ಆಗಿರಿ.


ನಂತರ ಎಡಬದಿಯಲ್ಲಿ ಕಾಣುವ Add an email account ಲಿಂಕ್ ಮೇಲೆ ಕ್ಲಿಕ್ ಮಾಡಿ.




ಈಗ E-mail address ಜಾಗದಲ್ಲಿ ನಿಮ್ಮ ಜಿಮೇಲ್ address ಟೈಪ್ ಮಾಡಿ. ಉದಾ: example123@gmail.com. ನಂತರ ಪಾಸ್‌ವರ್ಡ್ ಜಾಗದಲ್ಲಿ ನಿಮ್ಮ ಪಾಸ್‌‌ವರ್ಡ್ ನೀಡಿ Next ಬಟನ್ ಕ್ಲಿಕ್ ಮಾಡಿ. 



ಈಗ ನಿಮ್ಮ ಮೇಲ್‌ಗಳು ಎಲ್ಲಿ ಇರಬೇಕೆಂದು ಸೂಚಿಸಿ. ನಿಮ್ಮ Inboxನಲ್ಲಿಯೇ ಸಿಗಬೇಕೆಂದಾದರೆ Your inboxನ್ನು ಆಯ್ಕೆ ಮಾಡಿ. ಇಲ್ಲದಿದ್ದಲ್ಲಿ A separate folder, called ಎಂಬುದನ್ನು ಆಯ್ಕೆ ಮಾಡಿ ನಿಮಗಿಷ್ಟವಾದ ಹೆಸರು ನೀಡಿ. ಉದಾ: Gmail-1. ನಂತರ Save ಬಟನ್ ಕ್ಲಿಕ್ಕಿಸಿ.


  
ನಂತರ ನಿಮ್ಮ Gmail ಅಕೌಂಟಿಗೆ ಲಾಗಿನ್‌ ಆಗಿ ಹಾಟ್‌ಮೇಲ್‌ನಿಂದ ಬಂದಿರುವ ಒಂದು ಲಿಂಕ್ (URL) ಕ್ಲಿಕ್ ಮಾಡಿ. ಆಗ ನೀವು ಹಾಟ್‌ಮೇಲ್‌ನಿಂದಲೇ ಜಿಮೇಲ್‌ನ mailಗಳನ್ನು ನೋಡಲಿಕ್ಕೆ ಸಾದ್ಯವಾಗುತ್ತದೆ.


  
ನಿಮ್ಮ hotmail inboxನ ಕೆಳಬದಿಯಲ್ಲಿ ಕಾಣುವ ಫೋಲ್ಡರ್‍‌ನ್ನು(Gmail ಅಥವಾ ನೀವಿಟ್ಟ ಹೆಸರು) ಕ್ಲಿಕ್ ಮಾಡಿದರೆ ಆಯ್ತು, ನಿಮ್ಮ Gmail ಮೇಲ್‌ಗಳನ್ನು ನೋಡಬಹುದು.
ಈ ಸೌಲಭ್ಯವನ್ನು ಬಳಸಿ ನಿಮ್ಮ Yahoo! mail classic ನ ಮೇಲ್‌ಗಳನ್ನು ನೋಡಲು ಸಾಧ್ಯವಿಲ್ಲ. ಆದರೆ ನೀವು Yahoo! Mail Plus ಉಪಯೋಗಿಸುತ್ತಿದ್ದಲ್ಲಿ ನಿಮ್ಮ Yahoo! ಮೇಲ್‌ಗಳನ್ನು ಹಾಟ್‌ಮೇಲ್‌ ಮೂಲಕ ವೀಕ್ಷಿಸಬಹುದು.
ಇದೇ ರೀತಿ ನೀವು ಐದಾರು gmail ಅಥವಾ hotmail ಅಕೌಂಟ್‌ಗಳನ್ನು add ಮಾಡಬಹುದು.

 

SMS ಮೂಲಕ ಉಚಿತವಾಗಿ ನಿಮ್ಮ ಮೇಲ್ ಪಡೆಯಿರಿ

ನೀವು ಹಾಟ್‌ಮೇಲ್ ಅಥವಾ ಲೈವ್‌‌ಮೇಲ್ ಉಪಯೋಗಿಸುತ್ತಿದ್ದಲ್ಲಿ ನೀವು ನಿಮಗೆ ಬರುವ ಮೇಲ್‌ಗಳನ್ನು ನಿಮ್ಮ ಮೊಬೈಲ್‌ನ ಮುಖಾಂತರ ನೋಡಬಹುದು ಹಾಗೂ ಅದಕ್ಕಾಗಿ ನೀವು ಯಾವುದೇ ಶುಲ್ಕವನ್ನೂ ನೀಡುವುದು ಬೇಕಾಗಿಲ್ಲ.
ನೀವು ಮಾಡಬೇಕಾಗಿರುವುದು ಇಷ್ಟೇ, ಮೊದಲು ನೀವು ಇಲ್ಲಿ ನೀಡಿರುವ ಜಾಲತಾಣಕ್ಕೆ ಹೋಗಬೇಕು.

       ಅಲ್ಲಿ ನಿಮ್ಮ user name ಹಾಗೂ password ಕೊಟ್ಟು Sign in ಆಗಿ





ನಂತರ ಅಲ್ಲಿ ಕೊಟ್ಟಿರುವ ಜಾಗದಲ್ಲಿ ನಿಮ್ಮ ಮೊಬೈಲ್‌ ನಂಬರ್‍ ಟೈಪಿಸಿ. ಉದಾ: 9400024365
ನಂಬರ್‍ ಕೊಟ್ಟ ನಂತರ Next ಬಟನ್ ಒತ್ತಿರಿ.



ಈಗ ನಿಮ್ಮ ಮೊಬೈಲ್‌ಗೆ ಒಂದು ಸಂದೇಶ ಬರುತ್ತದೆ. ಅವರು ಕಳುಹಿಸಿರುವ ಸಂದೇಶದಲ್ಲಿ ಒಂದು verification code ಇರುತ್ತದೆ.(ಉದಾ:4873). ಅದನ್ನು ಮೇಲಿನ ಬಾಕ್ಸ್‌ನಲ್ಲಿ ಟೈಪಿಸಿ Next ಬಟನ್ ಕ್ಲಿಕ್ಕಿಸಿ.







ನಂತರ ಬರುವ ವಿಂಡೋನಲ್ಲಿ ಹಾಟ್‌ಮೇಲ್ ಎಂಬುದನ್ನು ಸೆಲೆಕ್ಟ್ ಮಾಡಿ, ಆಗ ಬರುವ Pricing and terms of use ಬಾಕ್ಸ್‌‌ನಲ್ಲಿ I agree ಬಟನ್ ಒತ್ತಿರಿ.






ನಂತರ Save ಬಟನ್ ಒತ್ತಿರಿ. ಈಗ ನಿಮ್ಮ inboxಗೆ ಬರುವ ಮೇಲ್‌ಗಳು ನಿಮ್ಮ ಮೊಬೈಲ್‌ಗೂ ಬರುತ್ತದೆ. ಆದರೆ ಪೂರ್ತಿ ಮೇಲ್‌ SMS ಮೂಲಕ ಬರುವುದಿಲ್ಲ. ಮೇಲ್‌ನ ವಿಷಯ ಹಾಗೂ matterನ ಒಂದೆರಡು ಲೈನ್‌ಗಳು ಮಾತ್ರ ಉಚಿತವಾಗಿ ಬರುತ್ತದೆ. ನೀವು ಆ ಮೇಲ್‌ನ್ನು ಇನ್ನೂ ನೋಡಬೇಕೆಂದರೆ ಆ ನಂಬರ್‌ಗೆ M ಎಂದು ರಿಪ್ಲೇ ಮಾಡಬೇಕು. ಆದರೆ ನೆನಪಿಡಿ ಹೀಗೆ ನೀವು ರಿಪ್ಲೇ ಮಾಡಿದಾಗ ಅವರು ಮತ್ತೊಂದು SMS ಕಳುಹಿಸುವುದಕ್ಕೆ ಸುಮಾರಾಗಿ 1.50 ರೂ. ದರ ವಿಧಿಸುತ್ತಾರೆ. ನೀವು ಇದನ್ನು ಯಾವುದಾದರೂ ತುರ್ತು ಸಂದೇಶಗಳನ್ನು ನೋಡಲು ಬಳಸಬಹುದು.