ಬಿಎಸ್ಎನ್ಎಲ್ ಕಂಪೆನಿಯು ತನ್ನ ಪ್ರೀಪೇಡ್ ಗ್ರಾಹಕರಿಗೆ "ಬಿಎಸ್‌ಎನ್‌ಎಲ್ ಲೈವ್" ಹಾಗೂ "ಬಿಎಸ್‌ಎನ್‌ಎಲ್ ನೆಟ್" ಎಂಬ ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದೆ. ಇದರ ಮೂಲಕ ಮೊಬೈಲ್‌ನಲ್ಲಿ ಅಂತರ್ಜಾಲವನ್ನು ಜಾಲಾಡಬಹುದು, ಹಾಡು, ಗೇಮ್ಸ್, ವಾಲ್ ಪೇಪರ್‌ಗಳು, ವಿಡಿಯೋಗಳು ಮುಂತಾದವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅಲ್ಲದೇ ಈ ಆಗಸ್ಟ್ 16ರಿಂದ 31ರವರೆಗೆ "ಬಿಎಸ್‌ಎನ್‌ಎಲ್ ಲೈವ್" ಸೇವೆಯನ್ನು ಉಚಿತವಾಗಿ ಉಪಯೋಗಿಸಬಹುದು! ನಾನು ಕಳೆದೆರಡು ದಿನಗಳಿಂದ ಟ್ವಿಟರ್‌ನ್ನು ಇದರ ಮೂಲಕವೇ ಬಳಸುತ್ತಿದ್ದೇನೆ. ನನಗಂತೂ ಈ ಸೇವೆ ತೃಪ್ತಿಕರ ಅನಿಸುತ್ತಿದೆ.
ಈ ಸೇವೆಯನ್ನು ಉಪಯೋಗಿಸಲು ನಿಮ್ಮ ಮೊಬೈಲ್‌ನಲ್ಲಿ ಜಿಪಿಆರ್‌ಎಸ್ ಸೌಲಭ್ಯವಿರಬೇಕು. ನಂತರ ಸೆಟ್ಟಿಂಗ್‌ಗಳನ್ನು ಪಡೆಯಲು ನಿಮ್ಮ ಮೊಬೈಲ್‌ನಿಂದ ಈ ರೀತಿ ಒಂದು ಮೆಸೇಜ್ ಸೃಷ್ಟಿಸಿ: ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್ ಕಂಪೆನಿಯ ಹೆಸರು[space] ಮಾಡೆಲ್ ನಂಬರ್ .ನಂತರ ಇದನ್ನು 58355ಗೆ ಕಳುಹಿಸಿ. ಉದಾಹರಣೆಗೆ- NOKIA N72 . ಸ್ವಲ್ಪ ಸಮಯದ ನಂತರ ನಿಮ್ಮ ಮೊಬೈಲ್‌ಗೆ ಎರಡು ಸೆಟ್ಟಿಂಗ್‌ಗಳು ಬರುತ್ತವೆ, ಒಂದು "ಬಿಎಸ್‌ಎನ್‌ಎಲ್ ಲೈವ್"ದು ಹಾಗೂ ಇನ್ನೊಂದು "ಬಿಎಸ್‌ಎನ್‌ಎಲ್ ನೆಟ್"ದು. ಬೇಕಾದರೆ ಎರಡನ್ನೂ ಇನ್ಸ್ಡಾಲ್ ಮಾಡಿಕೊಂಡು ಉಪಯೋಗಿಸಬಹುದು. ಆದರೆ ಬಿಎಸ್‌ಎನ್‌ಎಲ್ ಲೈವನ್ನಾದರೆ ಈ ತಿಂಗಳ ಕೊನೆಯವರೆಗೆ ಉಚಿತವಾಗಿ ಉಪಯೋಗಿಸಬಹುದು. "ಬಿಎಸ್‌ಎನ್‌ಎಲ್ ನೆಟ್"ಗಾದರೆ 10 KB ಉಪಯೋಗಿಸಿದರೆ ಐದು ಪೈಸೆ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ತಾಣವನ್ನು ಸಂಪರ್ಕಿಸಿ.
-ಪ್ರಸನ್ನ.ಎಸ್.ಪಿ
ಹೆಚ್ಚಿನ ಮಾಹಿತಿಗಾಗಿ ಈ ತಾಣವನ್ನು ಸಂಪರ್ಕಿಸಿ.
-ಪ್ರಸನ್ನ.ಎಸ್.ಪಿ
0 Comments:
Post a Comment