ವಿಂಡೋಸ್ ಹಾಗೂ ಉಬುಂಟು dual bootನಲ್ಲಿ, ಮೊದಲು ವಿಂಡೋಸ್ ಇನ್ಸ್‌ಟಾಲ್ ಮಾಡಿ ನಂತರ ಉಬುಂಟು ಇನ್ಸ್‌ಟಾಲ್ ಮಾಡಿದ್ದರೆ, ಉಬುಂಟು default ಆಪರೇಟಿಂಗ್ ಸಿಸ್ಟಮ್ ಆಗಿರುತ್ತದೆ. ಹಾಗಾಗಿ ಪ್ರತಿ ಸಲ ಕಂಪ್ಯೂಟರ್ ಆನ್ ಮಾಡಿದಾಗ default OS ಆದ ಉಬುಂಟು ಬೂಟ್ ಆಗುತ್ತದೆ. ನಿಮಗೆ ವಿಂಡೋಸ್ ಬೂಟ್ ಆಗಬೇಕೆಂದರೆ, ಉಬುಂಟು ಬೂಟ್ ಆಗುವ ಮೊದಲೇ ವಿಂಡೋಸ್‌ನ್ನು ಆಯ್ಕೆ ಮಾಡಬೇಕಾಗುತ್ತದೆ. ಪ್ರತೀ ಸಲ ವಿಂಡೋಸ್‌ನ್ನು ಸೆಲೆಕ್ಟ್ ಮಾಡುವ ಬದಲು ವಿಂಡೋಸ್‌ನ್ನು default OS ಆಗಿ ಸೆಲೆಕ್ಟ್ ಮಾಡಲು menu.lst ಫೈಲ್‌ನ್ನು ಎಡಿಟ್ ಮಾಡಬಹುದು. ಆದರೆ ಅದರಲ್ಲಿ ಸ್ವಲ್ಪ ಎಡವಟ್ಟಾದರೂ ಆಮೇಲೆ ಯಾವ ಆಪರೇಟಿಂಗ್ ಸಿಸ್ಟಮ್ ಕೂಡಾ ಬೂಟ್ ಆಗುವುದಿಲ್ಲ. ಹಾಗಾಗಿ ವಿಂಡೋಸ್‌ನ್ನು default OS ಆಗಿ ಆರಿಸಲು ಒಂದು ಸರಳ ಹಾಗೂ ಸುರಕ್ಷಿತ ವಿಧಾನವಿದೆ.
ನಿಮ್ಮ ಉಬುಂಟು ಸಿಸ್ಟಮ್‌ನ್ನು ಇಂಟರ್‌ನೆಟ್‌ಗೆ ಕನೆಕ್ಟ್ ಮಾಡಿ. ನಂತರ ಟರ್ಮಿನಲ್ ಓಪನ್ ಮಾಡಿ ಈ ಕೆಳಗಿನ ಕಮ್ಯಾಂಡನ್ನು ರನ್ ಮಾಡಿ :
$ sudo apt-get install startupmanager
startup manager ಇನ್ಸ್‌ಟಾಲ್ ಆದ ನಂತರ, ಆ ತಂತ್ರಾಂಶವನ್ನು ಉಪಯೋಗಿಸಿ ವಿಂಡೋಸ್‌ನ್ನು default OS ಆಗಿ ಆರಿಸಬಹುದು.
(ಶೀಘ್ರದಲ್ಲೇ ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಹಾಕುವ ಪ್ರಯತ್ನ ಮಾಡುವೆ)
0 Comments:
Post a Comment