Wednesday, September 29, 2010

ಲಿನಕ್ಸ್ ಮತ್ತು ವಿಂಡೋಸ್ dual bootಗೆ ನನ್ನ ವಿಧಾನ

ಲಿನಕ್ಸ್ ಹಾಗೂ ವಿಂಡೋಸ್‌ನ್ನು ಒಟ್ಟಿಗೆ (dual boot) ಬಳಸುವಾಗ ಕೆಲವೊಮ್ಮೆ ಸಮಸ್ಯೆ ಉಂಟಾಗುತ್ತಿತ್ತು. ಲಿನಕ್ಸಿನಲ್ಲಿ ಏನೋ ಪ್ರಯೋಗ ಮಾಡುವುದಕ್ಕೆ ಹೋಗಿ grub ಹಾಳಾಗಿಬಿಟ್ಟರೆ ಅದನ್ನು ಸರಿಪಡಿಸುವ ತನಕ ಲಿನಕ್ಸೂ ಉಪಯೋಗಿಸುವುದಕ್ಕೆ ಆಗುತ್ತಿರಲಿಲ್ಲ, ವಿಂಡೋಸೂ ಬೂಟಾಗುತ್ತಿರಲಿಲ್ಲ. ಕೆಲವು ಸಲ ಈ ರೀತಿ ಕಿತಾಪತಿ ಮಾಡಿಟ್ಟು ಅಪ್ಪನಿಂದ ಬೈಸಿಕೊಳ್ಳುತ್ತಿದ್ದೆ. ಇದಕ್ಕೇನಾದರೂ ಪರಿಹಾರ ಇದೆಯೇ ಎಂದು ಯೋಚಿಸುತ್ತಿದ್ದಾಗ ಹೊಳೆಯಿತು ನೋಡಿ ಒಂದು ಐಡಿಯಾ! ನನ್ನ ಹತ್ತಿರ ಒಂದು ಹಳೆಯ ಹಾರ್ಡ್‌ಡಿಸ್ಕ್ ಇತ್ತು. ಆದರೆ ಅದರ ಜಂಪರ್‍ ಎಲ್ಲೋ ಕಳೆದು ಹೋಗಿತ್ತು. ಆಮೇಲೆ ಹಳೆಯ ಸಿಡಿ ಡ್ರೈವ್ ಒಂದರಿಂದ ಜಂಪರ್‍ ತೆಗೆದು ಇದಕ್ಕೆ ಹಾಕಿ ಮಾಸ್ಟರ್‍ ಡಿಸ್ಕ್ ಮಾಡಿದೆ. ನನ್ನ ಕಂಪ್ಯೂಟರ್‌ನ ಹೊಸ ಹಾರ್ಡ್‌ಡಿಸ್ಕ್ ಡಿಸ್‌ಕನೆಕ್ಟ್ ಮಾಡಿ ಈ ಡಿಸ್ಕ್‌ನ್ನು ಕನೆಕ್ಟ್ ಮಾಡಿದೆ. ನಂತರ ಅದರಲ್ಲಿ ಲಿನಕ್ಸ್ ಇನ್ಸ್ಟಾಲ್ ಮಾಡಿಕೊಂಡೆ. ಆಮೇಲೆ ಹೊಸ ಹಾರ್ಡ್‌ಡಿಸ್ಕ್‌‌ನ್ನೂ ಕನೆಕ್ಟ್ ಮಾಡಿದೆ. ಈಗ ವಿಂಡೋಸ್ ಬೂಟ್ ಆಗಬೇಕೆಂದರೆ BIOSನಲ್ಲಿ ಹಳೆಯ ಹಾರ್ಡ್‌ಡಿಸ್ಕ್ None ಎಂದು ಕೊಡುತ್ತೇನೆ. ಆಗ ಹೊಸ ಹಾರ್ಡ್‌ಡಿಸ್ಕಿನಿಂದ ವಿಂಡೋಸ್ ಬೂಟಾಗುತ್ತದೆ. ನನಗೆ ಲಿನಕ್ಸ್ ಉಪಯೋಗಿಸಬೇಕಿದ್ದರೆ BIOSನಲ್ಲಿ ಹಳೆಯ  ಹಾರ್ಡ್‌ಡಿಸ್ಕ್‌ನ್ನು ಮಾಸ್ಟರ್‍ ಡಿಸ್ಕ್ ಎಂದೂ, ಹೊಸ ಹಾರ್ಡ್‌ಡಿಸ್ಕ್‌ನ್ನು None ಎಂದೂ ಕೊಡುತ್ತೇನೆ. ಆಗ ಹಳೆಯ ಹಾರ್ಡ್‌ಡಿಸ್ಕ್‌ನಿಂದ ಲಿನಕ್ಸ್ ಬೂಟಾಗುತ್ತದೆ. ತಮಾಷೆ ಅಂದ್ರೆ ಒಂದು ಸಲ ಲಿನಕ್ಸ್ ಅಥವಾ ವಿಂಡೋಸ್ ಬೂಟಾದ ನಂತರ ಹೊಸದು ಮತ್ತು ಹಳೆಯದು ಎರಡೂ ಹಾರ್ಡ್‌ಡಿಸ್ಕ್‌ನ್ನು ತೋರಿಸುತ್ತದೆ. ಹಾಗಾಗಿ ಯಾವ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಯಾವ ಡಿಸ್ಕಿನ ಮಾಹಿತಿ ಬೇಕಾದರೂ ಪಡೆಯಬಹುದು. ಯಾವುದಾದರೂ ಒಂದು ಡಿಸ್ಕನ್ನು BIOSನಲ್ಲಿ None ಎಂದು ಕೊಡದಿದ್ದರೆ ಯಾವುದರಿಂದಲೂ ಬೂಟಾಗುತ್ತಿಲ್ಲ. ಅದಕ್ಕೂ ಒಂದು ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇನೆ.

ಈ ಐಡಿಯಾಗಳೆಲ್ಲಾ ಹೇಗೆ ಹೊಳೆಯುತ್ತವೆ ಅಂತ ಕೆಲವೊಮ್ಮೆ ನನಗೇ ಆಶ್ಚರ್ಯವಾಗುತ್ತದೆ. ನಾನು ಶಾಲೆಯಲ್ಲಾಗಲೀ, ಕಾಲೇಜಿನಲ್ಲಾಗಲೀ ಒಂದಕ್ಷರ ಕಂಪ್ಯೂಟರ್‍ ಸೈನ್ಸ್ ಓದಿಲ್ಲ. ಆದರೂ ಕಂಪ್ಯೂಟರ್‌ನ ಮೇಲಿನ ತುಡಿತ ನಾನಾಗಿಯೇ ಹೊಸ ವಿಷಯಗಳನ್ನು ಕಲಿತುಕೊಳ್ಳುವಂತೆ ಮಾಡಿದೆ.



-ಪ್ರಸನ್ನ.ಎಸ್.ಪಿ

Monday, September 27, 2010

ವರ್ಡ್‌ನಲ್ಲಿ ಯೂನಿಕೋಡ್ ಮತ್ತು ಚೌಕಚೌಕ ಅಕ್ಷರಗಳು

ವರ್ಡ್‌ನಲ್ಲಿ ಯೂನಿಕೋಡ್‌ನಲ್ಲಿ ಟೈಪಿಸುವಾಗ ಅಕ್ಷರಗಳೆಲ್ಲಾ ಚೌಕಚೌಕವಾಗಿ ಬರುತ್ತಿದೆಯೇ? ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಅದನ್ನು ಸರಿಪಡಿಸಿಕೊಳ್ಳಬಹುದು.


ಮೊದಲು ವರ್ಡ್‌ನಲ್ಲಿ ಒಂದೆರಡು ಅಕ್ಷರಗಳನ್ನು ಟೈಪಿಸಿ.


ಅದನ್ನು ಸೆಲೆಕ್ಟ್ ಮಾಡಿಕೊಂಡು Formatting ಬಾರ್‌ನಲ್ಲಿ (Style) Clear Formatting ಕೊಡಿ.


ಈಗ ನೋಡಿ ಅಕ್ಷರಗಳು ಸರಿಯಾಗಿ ಕಾಣಿಸುತ್ತದೆ. ಮುಂದೆ ಟೈಪಿಸಿದರೆ ಬಾಕ್ಸ್ ಬಾಕ್ಸ್ ಬರುವುದಿಲ್ಲ, ಸರಿಯಾಗಿ ಬರುತ್ತದೆ.

-ಪ್ರಸನ್ನ.ಎಸ್.ಪಿ

ವಿಂಡೋಸ್ ಮತ್ತು ಯೂಸರ್‍ ಅಕೌಂಟ್

ವಿಂಡೋಸ್ (ಎಕ್ಸ್‌ಪಿ) ಬಳಕೆದಾರರು ಅಡ್ಮಿನಿಸ್ಟ್ರೇಟರ್‍ ಹೆಸರಿನ (Administrator) ಯೂಸರ್‍ ಅಕೌಂಟ್‌ ಉಪಯೊಗಿಸುತ್ತಿದ್ದಾಗ, ಕಂಟ್ರೋಲ್ ಪ್ಯಾನಲ್‌ನ User accounts ಮೂಲಕ ಹೊಸ ಅಕೌಂಟ್ ಸೃಷ್ಠಿ ಮಾಡಿದರೆ, ಮುಂದಿನ ಬಾರಿ ವಿಂಡೋಸ್ ಪ್ರಾರಂಭವಾಗುವಾಗ ವೆಲ್‌ಕಮ್ ಸ್ಕ್ರೀನ್‌ನಲ್ಲಿ ಅಡ್ಮಿನಿಸ್ಟ್ರೇಟರ್‍ ಹೆಸರಿನ ಯೂಸರ್‍ ಅಕೌಂಟ್‌ ತೋರಿಸುವುದಿಲ್ಲ. ಬದಲಾಗಿ ನೀವು ಹೊಸದಾಗಿ ಸೃಷ್ಠಿಸಿದ ಯೂಸರ್‍ ಅಕೌಂಟನ್ನು ತೋರಿಸುತ್ತದೆ ಹಾಗೂ ಅದಕ್ಕೆ ಪಾಸ್‌ವರ್ಡ್ ನೀಡಿರದಿದ್ದರೆ ತಾನಾಗಿಯೇ ಲಾಗಿನ್ ಆಗುತ್ತದೆ. ನೀವು ಮತ್ತೆ ಅಡ್ಮಿನಿಸ್ಟ್ರೇಟರ್‍ ಅಕೌಂಟಿಗೆ ಲಾಗಿನ್ ಆಗಬೇಕಾದರೆ ಕಂಟ್ರೋಲ್ ಪ್ಯಾನಲ್‌ನಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅಡ್ಮಿನಿಸ್ಟ್ರೇಟರ್‍ ಅಕೌಂಟ್ ಜೊತೆಗೇ ಇನ್ನೊಂದು ಅಕೌಂಟ್ ಸೃಷ್ಠಿಸಲು ಒಂದು ದಾರಿಯಿದೆ.


ಮೊದಲು ಮೈ ಕಂಪ್ಯೂಟರ್‍ ಮೇಲೆ ರೈಟ್ ಕ್ಲಿಕ್ ಮಾಡಿ, ನಂತರ Manage ಆರಿಸಿ.


Computer Managementನ ಕೆಳಗೆ Local Users and Groups ಎಂದಿರುತ್ತದೆ. ಅದನ್ನು ಕ್ಲಿಕ್ ಮಾಡಿ, ನಂತರ ಬಲಬದಿಯಲ್ಲಿ Users ಫೋಲ್ಡರಿನ ಮೇಲೆ ಡಬಲ್ ಕ್ಲಿಕ್ ಮಾಡಿ.


ಆಮೇಲೆ ಬಲಬದಿಯಲ್ಲಿ ರೈಟ್ ಕ್ಲಿಕ್ ಮಾಡಿ, New User... ಆರಿಸಿ.


User name: ಇಲ್ಲಿ ಹೊಸ ಯೂಸರ್‍ ನೇಮ್ ಕೊಡಿ. ಉಳಿದ ವಿವರಗಳು ಹಾಗೂ ಪಾಸ್‌ವರ್ಡ್ ಬೇಕಿದ್ದರೆ ಕೊಟ್ಟು, User must change password at next logon ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ create ಒತ್ತಿ.


ನಂತರ ಮತ್ತೆ ಅದೇ ವಿಂಡೋ ಬರುತ್ತದೆ. ಆಗ Close ಒತ್ತಿ.


ಈಗ Log Off ಮಾಡಿದರೆ Administratorನ ಜೊತೆ ಹೊಸದಾಗಿ ಸೃಷ್ಠಿಸಿದ ಅಕೌಂಟ್ ಕೂಡಾ ದರ್ಶಿತವಾಗುತ್ತಿರುವುದನ್ನು ನೋಡಬಹುದು.

ಆದರೆ ಈ ವಿಧಾನದ ಒಂದು ಕೊರತೆ ಎಂದರೆ ಹಾಗೆ ಸೃಷ್ಠಿಸಿದ ಅಕೌಂಟ್ "ಕಂಪ್ಯೂಟರ್‍ ಅಡ್ಮಿನಿಸ್ಟ್ರೇಟರ್‍" ಅಕೌಂಟ್ ಆಗಿರುವುದಿಲ್ಲ, ಬದಲಾಗಿ ಲಿಮಿಟೆಡ್ ಅಕೌಂಟ್ ಆಗಿರುತ್ತದೆ.




ಈಗ ವೆಲ್‌ಕಮ್ ಸ್ಕ್ರೀನ್‌ನಲ್ಲಿ Administrator ಅಕೌಂಟ್ ತೋರಿಸುತ್ತಿಲ್ಲವಾದ್ದಲ್ಲಿ, Administrator ಅಕೌಂಟಿಗೆ ಲಾಗಿನ್ ಆಗುವುದು ಹೇಗೆಂದು ನೋಡೋಣ.

ಮೊದಲು ಕಂಟ್ರೋಲ್ ಪ್ಯಾನಲ್‌ಗೆ ಹೋಗಿ(Start-->Control Panel). User Accounts ಓಪನ್ ಮಾಡಿ. Change the way users log on or off ಮೇಲೆ ಕ್ಲಿಕ್ ಮಾಡಿ.





ಅಲ್ಲಿ  Use the Welcome screen ಎನ್ನುವುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Apply Options ಒತ್ತಿ.


ಮುಂದಿನ ಬಾರಿ ವಿಂಡೋಸ್ ಪ್ರಾರಂಭವಾದಾಗ ವೆಲ್‌ಕಮ್ ಸ್ಕ್ರೀನ್ ಬದಲಿಗೆ ಕೆಳಗೆ ತೋರಿಸಿರುವ ವಿಂಡೋ ಬರುತ್ತದೆ. ಅಲ್ಲಿ ಯೂಸರ್‍ ನೇಮ್ Administrator ಎಂದು ಟೈಪಿಸಿ, ಪಾಸ್‌ವರ್ಡ್‌ ಇದ್ದರೆ ಕೊಟ್ಟು OK ಒತ್ತಿರಿ. ಅಷ್ಟೇ! ಈಗ ನೀವು ಅಡ್ಮಿನಿಸ್ಟ್ರೇಟರ್‍ ಅಕೌಂಟಿಗೆ ಲಾಗಿನ್ ಆಗಿರುತ್ತೀರ. :-) 


ಈ ಬರಹದಿಂದ ಏನು ಉಪಯೋಗ ಆಗುತ್ತೋ ಗೊತ್ತಿಲ್ಲ. ನಾಲ್ಕೈದು ದಿನದಿಂದ ಏನೂ ಬರೆದಿರಲಿಲ್ಲ, ಅದಕ್ಕೇ ಸುಮ್ಮನೆ ಇದನ್ನು ಬರೆದೆ. :-)

-ಪ್ರಸನ್ನ.ಎಸ್.ಪಿ 


Wednesday, September 22, 2010

ಸುಭಾಷಿತಗಳು-2


|||सुभाषितानि-2|||

कीटोऽपि सुमनस्सङ्गात्
आरोहति सतां शिरः |
अश्मापि याति देवत्वम्
महद्भिः सुप्रतिष्ठितः ||1||

महान्तो न विरोद्दव्याः
दुर्जया हि महाजनाः |
स्फुरन्तमपि नागेन्द्रम्
भक्षयन्ति पिपीलिकाः ||2||

असहायः पुमानेकः
कार्यान्तं नाधिगच्छति |
तुषेणापि विनिर्मुक्तः
तण्डुलो न प्ररोहति ||3||

परोपकारशून्यस्य
धिङ् मनुष्यस्य जीवितम् |
जीवन्तु पशवो येषाम्
चर्माप्युपकरिष्यति ||4||

विद्या विवादाय धनं मदाय
शक्तिः परेषां परिपीडनाय |
खलस्य, साधोः विपरीतमेतत्
ज्ञानाय, दानाय च रक्षणाय ||5||

वरं वनं व्याघ्रगजादिसेवितम्
जनेन हीनं बहुकण्टकावृतम् |
तृणानि शय्या परिधानवल्कलम्
न बन्धुमध्ये धनहीनजीवितम् ||6||

वने रणे शत्रुजलाग्निमध्ये
महार्णवे पर्वतमस्तके वा
सुप्तं प्रमत्तं विशमस्थितं वा
रक्षन्ति पुण्यानि पुराकृतानि ||7||

मनसि वचसि काये पुण्यपीयूषपूर्णाः
त्रिभुवनमुपकारश्रेणिभिः प्रीणयन्तः |
परगुणपरमाणून् पर्वतीकृत्य नित्यम्
निजहृदि विकसन्तः सन्ति सन्तः कियन्तः ||8||

-भर्तृहरिः


ಟೆಸ್ಟ್‌ಡಿಸ್ಕ್ ಎಂಬ ಆಪತ್ಬಾಂಧವ

ಏನೋ ಪ್ರಯೋಗ ಮಾಡೋಕೆ ಹೋಗಿ ನಿಮ್ಮ ಹಾರ್ಡ್‌ಡಿಸ್ಕ್‌‌ನ ಯಾವುದಾದರೂ ಅಮೂಲ್ಯ ಪಾರ್ಟಿಷನ್‌ ಅಳಿಸಿ ಹೋಗಿದೆಯೇ/ಮಾಯವಾಗಿದೆಯೇ? ಚಿಂತಿಸಬೇಡಿ, ಆ ಪಾರ್ಟಿಷನ್‌ ಮರಳಿ ಪಡೆಯಲು ಒಂದು ಸುಲಭದ ವಿಧಾನವಿದೆ. ಅದೇ ಟೆಸ್ಟ್‌ಡಿಸ್ಕ್ ಎಂಬ ಸಲಕರಣೆ. ಮೊದಲು ಟೆಸ್ಟ್‌ಡಿಸ್ಕ್‌‌ನ್ನು ನಿಮ್ಮ ಆಪರೇಟಿಂಗ್ ಸಿಸ್ಟಮ್‌ಗೆ ಅನುಗುಣವಾಗಿ ಇಲ್ಲಿಂದ ಇಳಿಸಿಕೊಳ್ಳಿ http://www.cgsecurity.org/wiki/TestDisk_Download

ಈಗ ಉಪಯೋಗಿಸುವುದು ಹೇಗೆ ನೋಡೋಣ.
(ಇಲ್ಲಿರುವ ಚಿತ್ರಗಳು ಗಾತ್ರದಲ್ಲಿ ಚಿಕ್ಕದಾಗಿದೆ. ಅದನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ.)

ನನ್ನ ಕಂಪ್ಯೂಟರ್‌ನಲ್ಲಿ Prasanna ಎಂಬ ಪಾರ್ಟಿಷನ್ ಇದೆ.





ಈಗ ಅದನ್ನು ಅಳಿಸಿಹಾಕುತ್ತೇನೆ. ನೋಡಿ Unallocated space ಎಂದು ತೋರಿಸುತ್ತಿದೆ.





ಈಗ ಟೆಸ್ಟ್‌ಡಿಸ್ಕ್ ರನ್ ಮಾಡಿ. Log file ಬೇಕಿದ್ದರೆ Create ಒತ್ತಿರಿ.





ನಂತರ ನಿಮ್ಮ ಹಾರ್ಡ್‌ಡಿಸ್ಕ್‌ನ್ನು ಸೆಲೆಕ್ಟ್ ಮಾಡಿ Proceed ಒತ್ತಿ. 





ನಂತರ ನಿಮ್ಮ ಪಾರ್ಟಿಷನ್ ಟೇಬಲ್ ಟೈಪ್ ಯಾವುದು ಎಂದು ನೋಡಿಕೊಂಡು ಎಂಟರ್‍ ಒತ್ತಿರಿ. (ಸಾಮಾನ್ಯವಾಗಿ Intel ಆಗಿರುತ್ತದೆ.)





ಮುಂದೆ Analyse ಒತ್ತಿ.



ನಂತರ ಈಗಿರುವ ಪಾರ್ಟಿಷನ್‌ ವಿನ್ಯಾಸ ತೋರಿಸುತ್ತದೆ. ಕೆಳಗೆ Quick Searchನ್ನು ಆರಿಸಿ ಎಂಟರ್‍ ಒತ್ತಿ.


ಮುಂದಿನ ವಿಂಡೋನಲ್ಲಿ N ಗುಂಡಿ ಒತ್ತಿ.




ಈಗ ಟೆಸ್ಟ್‌ಡಿಸ್ಕ್ ನಿಮ್ಮ ಎಲ್ಲಾ ಪಾರ್ಟಿಷನ್‌ಗಳನ್ನು ತೋರಿಸುತ್ತದೆ. ಅಲ್ಲಿ Primary bootable(ಸಿ ಡ್ರೈವ್) ಎಕ್ಸ್‌ಟೆಂಡೆಡ್ ಹಾಗೂ Logical ಡ್ರೈವ್‌ಗಳನ್ನು ಸರಿಯಾಗಿ ಗುರುತಿಸಿ ಎಂಟರ್‍ ಒತ್ತಿ.





ಈಗ ಎಲ್ಲಾ ಸರಿಯಿದೆಯೇ ಎಂದು ನೋಡಿಕೊಳ್ಳಲು ಕೊನೆಯ ಅವಕಾಶ. ಪರ್ಟಿಷನ್‌ಗಳೆಲ್ಲಾ ಸರಿಯಾಗಿ ತೋರಿಸುತ್ತಿದೆ ಎಂದು ಅನಿಸಿದರೆ ಕೆಳಗೆ Write ಸೆಲೆಕ್ಟ್ ಮಾಡಿ ಎಂಟರ್‍ ಒತ್ತಿ.





Write partition table, confirm? ಎಂದು ಕೇಳುತ್ತದೆ. ಆಗ Y ಒತ್ತಿರಿ.





You will have to reboot for the change to take effect ಎಂದು ಬರುತ್ತದೆ. Ok ಒತ್ತಿ.





ನಂತರ  Quit ಒತ್ತಿ.



ಮತ್ತೊಮ್ಮೆ Quit ಒತ್ತಿ, ಆಮೇಲೆ ಸಿಸ್ಟಮ್ reboot ಮಾಡಿ.



ಈಗ ನಿಮ್ಮ ಪಾರ್ಟಿಷನ್‌‌ಗಳೆಲ್ಲಾ ರಿಕವರ್‍ ಆಗಿರುತ್ತದೆ.(ನಾನು ಅಳಿಸಿ ಹಾಕಿದ್ದ ಪಾರ್ಟಿಷನ್ ಮರಳಿ ಬಂದಿದೆ ನೋಡಿ.)





ನಾನು ತಿಳಿಸಿರುವ ಸೆಟ್ಟಿಂಗ್‌ಗಳು ವಿಂಡೋಸ್ ಎಕ್ಸ್‌ಪಿಗೆ ಸಂಬಂಧಿಸಿದಂತೆ ಇದೆ. ಬೇರೆ ಆಪರೇಟಿಂಗ್‌ ಸಿಸ್ಟಮ್‌ಗಳಾದರೆ ಅಲ್ಪ ಸ್ವಲ್ಪ ಬದಲಾವಣೆಗಳಿರುತ್ತದೆ. ಇನ್ನು ಎಲ್ಲಾ ಪಾರ್ಟಿಷನ್‌ಗಳೂ ಮಾಯವಾಗಿ ವಿಂಡೋಸ್‌‌ ಕೂಡ ಬೂಟ್ ಆಗದಿದ್ದರೆ ಲಿನಕ್ಸ್ ಲೈವ್ ಸಿಡಿ ಬಳಸಿ ಪಾರ್ಟಿಷನ್ ರಿಕವರ್‍ ಮಾಡಬಹುದು. ಅದರ ಬಗ್ಗೆ ಓಂಶಿವಪ್ರಕಾಶ್ ಈ ಹಿಂದೆಯೇ ಒಂದು ಲೇಖನ ಬರೆದಿದ್ದಾರೆ, ಅದನ್ನು ಇಲ್ಲಿ ಓದಬಹುದು : http://sampada.net/blog/omshivaprakash/20/10/2008/12811


-ಪ್ರಸನ್ನ.ಎಸ್.ಪಿ
ಅಂತಃಸ್ಫುರಣ

Monday, September 20, 2010

ಫೀಡ್ ಬರ್ನರ್‍ ಮತ್ತು Email Subscription

ನಿಮ್ಮ ಬ್ಲಾಗ್ ಓದುಗರಿಗೆ ಪ್ರತೀ ಬಾರಿ ನಿಮ್ಮ ಬ್ಲಾಗಿಗೆ ಬಂದು ಹೊಸ ಬರಹಗಳನ್ನು ಓದುವುದಕ್ಕೆ ತೊಂದರೆಯಾಗುತ್ತಿರಬಹುದು. ಅದಕ್ಕಾಗಿ ನೀವು ಅವರಿಗೆ ನಿಮ್ಮ ಹೊಸ ಬರಹಗಳನ್ನು ಇ-ಮೇಲ್ ಮೂಲಕ ತಲುಪಿಸಬಹುದು. ಅದಕ್ಕಾಗಿ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅದನ್ನೀಗ ವಿವರವಾಗಿ ನೋಡೋಣ.

(ಇಲ್ಲಿರುವ ಚಿತ್ರಗಳು ಚಿಕ್ಕದಾಗಿದೆ. ಅವುಗಳನ್ನು ಸ್ಪಷ್ಟವಾಗಿ ನೋಡಲು ಹಾಗೂ ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



ಮೊದಲಿಗೆ http://feedburner.google.com ತಾಣಕ್ಕೆ ಹೋಗಿ. ಅಲ್ಲಿ ನಿಮ್ಮ ಗೂಗಲ್ ಅಕೌಂಟ್ ಮೂಲಕ ಲಾಗಿನ್ ಆಗಿ.





Type your blog or feed address here: ಎಂದಿರುವಲ್ಲಿ ನಿಮ್ಮ ಬ್ಲಾಗ್ ವಿಳಾಸ ಅಥವಾ ಫೀಡ್ ವಿಳಾಸ ಕೊಡಿ. Next ಬಟನ್ ಒತ್ತಿರಿ.


 


Identify Feed Source ಕೇಳಿದಾಗ ಫೀಡ್ ಸೋರ್ಸ್ ಆರಿಸಿ (Atom ಅಥವಾ RSS feeds). Next ಬಟನ್ ಒತ್ತಿ.





ಫೀಡ್ ಟೈಟಲ್ ಹಾಗೂ ಫೀಡ್ ಅಡ್ರೆಸ್ ನೀಡಿ. (ಏನೂ ನೀಡದಿದ್ದರೂ ಪರವಾಗಿಲ್ಲ, ಮುಂಚೆಯೇ ಆ ಫೀಲ್ಡ್‌‌ಗಳು ತುಂಬಲ್ಪಟ್ಟಿರುತ್ತದೆ. ಬೇಕಿದ್ದರೆ ಬದಲಾಯಿಸಿಕೊಳ್ಳಬಹುದು.) ನಂತರ Next ಬಟನ್ ಒತ್ತಿ.


 



ಮುಂದಿನ ವಿಂಡೋನಲ್ಲಿ Skip directly to feed management ಒತ್ತಿ. ಅಥವಾ ನಿಮಗೆ ಇನ್ನಷ್ಟು ಸೌಲಭ್ಯಗಳು ಬೇಕಿದ್ದರೆ Next ಒತ್ತಿ. ಆದರೆ ಆ ಸೌಲಭ್ಯಗಳನ್ನು ನಂತರವೂ ಪಡೆಯಬಹುದು.





ಮುಂದಿನ ವಿಂಡೋನಲ್ಲಿ ಮೇಲೆ ಕಾಣುವ Publicize ಟ್ಯಾಬ್‌ನ್ನು ಒತ್ತಿ. (ಸಹಾಯ ಬೇಕಿದ್ದರೆ Blogger ಹಾಗೂ TypePad ಕೆಳಗೆ ಲಿಂಕ್‌ಗಳು ಇರುತ್ತದೆ. ಅದನ್ನು ಬಳಸಬಹುದು.)






Publicize ಟ್ಯಾಬ್‌ನ ಎಡಬದಿಯಲ್ಲಿ Email Subscriptions ಎಂಬ ಲಿಂಕ್ ಇರುತ್ತದೆ. ಅದನ್ನು ಒತ್ತಿ.






ನಂತರ Email Subscriptionsನಲ್ಲಿ "Activate" ಬಟನ್ ಒತ್ತಿ. 




ಮುಂದೆ ಬರುವ Subscription Management ವಿಂಡೋನಲ್ಲಿ "Subscription Form Code" ಇರುತ್ತದೆ. ಅದನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ಲಾಗ್ ಅಥವಾ ಇತರ ತಾಣದಲ್ಲಿ HTML code support ಮಾಡುವ widgetನಲ್ಲಿ ಪೇಸ್ಟ್ ಮಾಡಿ ಉಪಯೋಗಿಸಬಹುದು. ಅಥವಾ ನೀವು  TypePad/Blogger ಉಪಯೋಗಿಸುತ್ತಿದ್ದಲ್ಲಿ ಅದನ್ನು ಆರಿಸಿಕೊಂಡು Go ಬಟನ್ ಒತ್ತಿ.






ನಂತರ ಬ್ಲಾಗ್‌ನ್ನು ಸೆಲೆಕ್ಟ್ ಮಾಡಿ, ಅದಕ್ಕೊಂದು ಹೆಸರು ಕೊಡಿ. ಸಾಮಾನ್ಯವಾಗಿ ಟೈಟಲ್ "Subscribe via email" ಎಂದಿರುತ್ತದೆ. ಅದಾದ ನಂತರ ADD WIDGET ಬಟನ್ ಒತ್ತಿ. 





ಅಲ್ಲಿಗೆ Email Subscription Form ಸೇರಿಸಿಯಾಯಿತು. ಅದನ್ನು ನಿಮ್ಮ ಬ್ಲಾಗ್ ಡಿಸೈನ್‌ನಲ್ಲಿ ಎಲ್ಲಿ ಬೇಕೋ ಅಲ್ಲಿ ಇಟ್ಟು ಸೇವ್ ಮಾಡಿಕೊಳ್ಳಿ.





 ಈಗ ನಿಮ್ಮ ಬ್ಲಾಗ್ ನೋಡಿದರೆ ಅಲ್ಲಿ Email Subscription Form ಕಾಣಿಸುತ್ತದೆ.





ನಂತರ ಮತ್ತೆ ಫೀಡ್ ಬರ್ನರ್‌ಗೆ ಬನ್ನಿ. Delivery Options ಕ್ಲಿಕ್ ಮಾಡಿ. Select Timezoneನಲ್ಲಿ ನಿಮ್ಮ Timezone ಆರಿಸಿ. Schedule Email Delivery: ಎಂಬಲ್ಲಿ ಚಂದಾದಾರರಿಗೆ ಇ-ಮೇಲ್‌ನ್ನು ಯಾವ ಸಮಯದಲ್ಲಿ ಕಳುಹಿಸಬೇಕು (ನೀವು ನಿಮ್ಮ ಬ್ಲಾಗ್‌ನಲ್ಲಿ ಹೊಸ ಬರಹ ಸೇರಿಸಿದಾಗ ಅದು ಚಂದಾದಾರರಿಗೆ ಆ ದಿನದ ಯಾವ ಸಮಯದಲ್ಲಿ ತಲುಪಬೇಕು) ಎಂದು ಸೆಲೆಕ್ಟ್ ಮಾಡಿ Save ಒತ್ತಿ.






ಸಧ್ಯಕ್ಕೆ ಇಷ್ಟು ಸಾಕು ಮುಂದಿನ ಭಾಗದಲ್ಲಿ ಫೀಡ್ ಬರ್ನರ್‌‌ನ ಇನ್ನಷ್ಟು ಸೌಲಭ್ಯಗಳನ್ನು ಪರಿಚಯಿಸುವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಏನಾದರೂ ಸಂದೇಹಗಳಿದ್ದರೆ ಕೇಳಿ, ಬಗೆಹರಿಸುವ ಪ್ರಯತ್ನ ಮಾಡುವೆ.

-ಪ್ರಸನ್ನ.ಎಸ್.ಪಿ

ಅಂತಃಸ್ಫುರಣ

Sunday, September 19, 2010

ಸುಭಾಷಿತಗಳು-1

|||सुभाषितानि-1|||

पृथिव्यां त्रीणि रत्नानि
जलमन्नं सुभाषितम् |
मूढैः पाषाणखण्डेषु
रत्नसंಜ್ಞಾ विधीयते ||1||

प्रियवाक्यप्रदानेन
सर्वे तुष्यन्ति जन्तवः |
तस्मात्तदेव वक्तव्यं
वचने का दरिद्रता ||2||

विहाय पौरुषं यो हि
दैवमेवावलंबते |
प्रासादसिम्हवत्तस्य
मूर्ध्नि तिष्टन्ति वायसाः ||3||

श्लोकस्तु श्लोकतां याति
यत्र तिष्टन्ति पण्डिताः |
लकारो लुप्यते तत्र
यत्र तिष्टन्त्यपण्डिताः ||4||

शिरसि धार्यमाणोऽपि
सोमः सोमेन शम्भुना |
तथापि कृशतां याति
कष्टः खलु पराश्रयः ||5||

दृष्टिपूतं न्यसेत्पादं
वस्त्रपूतं विबेज्जलम् |
सत्यपूतां वदेद्वाणीं
मनः पूतं समाचरेत् ||6||

निर्वनो वध्यते व्याघ्रः
निर्व्याघ्रं चिध्यते वनम् |
तस्माद्व्याघ्रो वनं रक्षेत्
वनं व्याघ्रं च पालयेत् ||7||

मक्षिकाः व्रणमिच्छन्ति
धनामिच्छन्ति पार्थिवाः |
नीचाः कलहमिच्छन्ति
शान्तिमिच्छन्ति साधवाः ||8||

काकः कृष्णः पिकः कृष्णः
को भेदः पिककाकयोः |
वसन्तसमये प्राप्ते
काकः काकः पिकः पिकः ||9||

पादपानां भयं वातः
पद्मानां शिशिरो भयम् |
पर्वतानां भयं वज्रः
साधूनां दुर्जनो भयम् ||10||

-भर्तृहरिः

Tuesday, September 14, 2010

2500 ಮೊಟ್ಟೆ, 5000 ರೂಪಾಯಿ!

ಇವತ್ತು ಮಧ್ಯಾಹ್ನ ನನ್ನ ಮೊಬೈಲಿಗೆ ಯಾವುದೋ ನಂಬರಿಂದ ಕಾಲ್ ಬಂತು. ಯಾರದಪ್ಪಾ ಈ ನಂಬರ್‍ ಅಂತ ಅಂದುಕೊಂಡು ರಿಸೀವ್ ಮಾಡಿದರೆ ಆ ಕಡೆಯಿಂದ "ನೀವು ನೀಡಿದ ಆರ್ಡರ್‍‌ನಂತೆ ನಿಮ್ಮ ಮನೆಗೆ 2500 ಮೊಟ್ಟೆ ಕಳುಹಿಸಿದ್ದೇವೆ, ಲಾರಿ ಡ್ರೈವರ್‍ ಹತ್ರ 5000 ರೂಪಾಯಿ ಕೊಟ್ಟುಬಿಡಿ" ಎಂದು ಹೇಳಿದರು. ನನಗೆ ಒಂದು ಸಲ ಏನು ಹೇಳಬೇಕೆಂದೇ ಗೊತ್ತಾಗಲಿಲ್ಲ. ನಾನು ಮೊಟ್ಟೇನೆ ತಿನ್ನಲ್ಲ, ಅಂತದರಲ್ಲಿ ಎರಡೂವರೆ ಸಾವಿರ ಮೊಟ್ಟೆಗೇಕೆ ಆರ್ಡರ್‍ ಮಾಡುತ್ತೇನೆ, ಬಹುಷಃ ರಾಂಗ್ ನಂಬರ್‍ ಡಯಲ್ ಮಾಡಿರಬೇಕು ಎಂದುಕೊಳ್ಳುತ್ತಿರುವಾಗಲೇ ಆ ಕಡೆಯಿಂದ ಮತ್ತೆ ಧ್ವನಿ ಕೇಳಿಬಂತು- "ನೀವೂ ನಿಮ್ಮ ಸ್ನೇಹಿತರನ್ನು ಇದೇ ರೀತಿ ಬೇಸ್ತು ಬೀಳಿಸಬೇಕೆ? ಹಾಗಾದರೆ ನಮ್ಮ ಕಾಲರ್‍ ಟ್ಯೂನ್ಸ್‌‌ಗೆ ಚಂದಾದಾರರಾಗಿ, ದರಗಳು ತಿಂಗಳಿಗೆ 28 ರೂಪಾಯಿ ಮಾತ್ರ. ಕಾಲರ್‍ ಟ್ಯೂನ್ ಸೆಟ್ ಮಾಡಿಕೊಳ್ಳುವುದಕ್ಕಾಗಿ ಸ್ಟಾರ್‍ ಹಾಗೂ ಒಂಭತ್ತನ್ನು ಒತ್ತಿ. ಕಂಡೀಷನ್ಸ್ ಅಪ್ಲೈ."

ಇದನ್ನು ಕೇಳಿ ನಾನೂ ಬೇಸ್ತು ಬಿದ್ದೆನಲ್ಲಾ ಅಂತ ಸಿಕ್ಕಾ ಪಟ್ಟೆ ನಗು ಬಂತು. ನಿಮಗೂ  +919449056700 ನಂಬರಿಂದ ಕಾಲ್ ಬಂದರೆ ರಿಸೀವ್ ಮಾಡಿ, ತಮಾಷೆಯಾಗಿರುತ್ತದೆ. :-)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


ನನ್ನ ಹೊಸ ಬರಹಗಳನ್ನು ಇ-ಮೇಲ್ ಮುಖಾಂತರ ಪಡೆಯಲು ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ

Monday, September 13, 2010

ಅಂತಃಸ್ಫುರಣದ ಹೊಸ ಬರಹಗಳನ್ನು ಇ-ಮೇಲ್ ಮೂಲಕ ಪಡೆಯಿರಿ.

"ಅಂತಃಸ್ಫುರಣ"ದಲ್ಲಿ ಪ್ರಕಟವಾಗುವ ಹೊಸ ಬ್ಲಾಗ್ ಬರಹ ಹಾಗೂ ಲೇಖನಗಳನ್ನು ಓದಲು ಪ್ರತೀ ಸಲ ಈ ಬ್ಲಾಗಿಗೆ ಬರಲು ನಿಮಗೆ ತೊಂದರೆಯಾಗುತ್ತಿದ್ದರೆ, ನನ್ನ ಬರಹಗಳನ್ನು ಓದಲು ಇಲ್ಲೊಂದು ಸುಲಭದ ವಿಧಾನವಿದೆ. ಕೆಳಗೆ ಇರುವ ಬಾಕ್ಸ್‌‌ನಲ್ಲಿ ನಿಮ್ಮ ಇ-ಮೇಲ್ ವಿಳಾಸ ನಮೂದಿಸಿ, ನಂತರ "ಅಂತಃಸ್ಫುರಣಕ್ಕೆ ನಾನು ಚಂದಾದಾರನಾಗಬಯಸುತ್ತೇನೆ" ಬಟನ್ ಒತ್ತಿರಿ. Verification ವಿಂಡೋನಲ್ಲಿ ಬರುವ ಅಕ್ಷರಗಳನ್ನು ಟೈಪಿಸಿ verify ಮಾಡಿ. ನಂತರ ನಿಮ್ಮ ಇ-ಮೇಲ್ ಖಾತೆಗೆ kannadaprasanna[at]gmail.comನಿಂದ ಒಂದು  ಇ-ಮೇಲ್ ಬರುತ್ತದೆ, ಅದರಲ್ಲಿರುವ ಲಿಂಕ್‌‌ನ್ನು ಒತ್ತಿರಿ. ಇಷ್ಟು ಮಾಡಿದರೆ ಮುಂದೆ ಅಂತಃಸ್ಫುರಣದಲ್ಲಿ ಪ್ರಕಟವಾಗುವ ಎಲ್ಲ ಬ್ಲಾಗ್ ಬರಹ ಹಾಗೂ ಲೇಖನಗಳು ಇ-ಮೇಲ್ ಮುಖಾಂತರ ನಿಮಗೆ ತಲುಪುತ್ತದೆ. ಇದಕ್ಕೆ ಚಂದಾದಾರರಾದ ನಂತರ ನಿಮಗೆ ಈ ಸೌಲಭ್ಯ ಬೇಡ ಎನಿಸಿದರೆ unsubscribe ಮಾಡುವುದಕ್ಕೆ ಕೂಡ ಅವಕಾಶವಿದೆ, unsubscribe ಮಾಡುವ ವಿಧಾನವು ಅಂತಃಸ್ಫುರಣದಿಂದ ಬರುವ ಪ್ರತೀ ಇ-ಮೇಲ್ ಜೊತೆಗೆ ವಿವರಿಸಲ್ಪಟ್ಟಿರುತ್ತದೆ.


ಇಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ, ನಂತರ ಅದರ ಕೆಳಗಿನ ಬಟನ್ ಒತ್ತಿರಿ.


ನಿಮ್ಮ ಇ-ಮೇಲ್ ವಿಳಾಸವನ್ನು ಎಲ್ಲಿಯೂ ಬಹಿರಂಗಗೊಳಿಸಲಾಗುವುದಿಲ್ಲ. ಅಸಲಿಗೆ ನನಗೆ ಕೂಡಾ ನಿಮ್ಮ ಇ-ಮೇಲ್ ವಿಳಾಸ ಗೊತ್ತಾಗುವುದಿಲ್ಲ. ಹಾಗಾಗಿ ನೀವು ಧೈರ್ಯವಾಗಿ ನಿಮ್ಮ ಇ-ಮೇಲ್ ವಿಳಾಸ ಕೊಡಬಹುದು.



ಇದನ್ನು ನೋಡಿದ ನಂತರ ನಿಮ್ಮ ಬ್ಲಾಗ್ ಓದುಗರಿಗೂ ಇದೇ ರೀತಿಯ ಸೌಲಭ್ಯ ಒದಗಿಸಬೇಕು ಎಂದೆನಿಸುತ್ತಿದೆಯೇ? ಹಾಗಾದರೆ ನನ್ನ ಮುಂದಿನ ಲೇಖನವನ್ನು ನಿರೀಕ್ಷಿಸಿ, :-)

ಹ್ಞಾ... ನನ್ನ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ! :-)
 

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Wednesday, September 8, 2010

ನಮ್ಮ ಸಂಸಾರ ಆನಂದ ಸಾಗರ....

ನಮ್ಮ ಸಂಸಾರ..
(ಅರೆ! ಯಾವನೋ ಫೋಟೋ ತೆಗೀತಿದ್ದಾನಲ್ಲಾ, ಇರು ಉಳಿದವರಿಗೂ ಮುಖ ತೋರಿಸಲು ಹೇಳುತ್ತೇನೆ.)




(ಏಯ್, ಫೋಟೋ ಸರಿಯಾಗಿ ತೆಗೆಯಬೇಕು. ಇಲ್ಲದಿದ್ದರೆ ನಿನ್ನ ಕ್ಯಾಮೆರಾ ನೆಟ್ಟಗಿರುವುದಿಲ್ಲ, ಹುಷಾರ್‍!)





(ನಮ್ಮ ಸಂಸಾರ, ಆನಂದ ಸಾಗರ.....)




(ಫೋಟೋ ತೆಗ್ದಿದ್ದು ಸಾಕು ಹೋಗಯ್ಯೋ, ಮಕ್ಳು ಆಟ ಆಡ್ಬೇಕು!)


-ಚಿತ್ರ ಮತ್ತು ಬರಹ: ಪ್ರಸನ್ನ ಎಸ್.ಪಿ 





ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... 

ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.

ನಾನು
ತೆಳ್ಳಗೇ ಇರಬಯಸುತ್ತೇನೆ,
ಏಕೆಂದರೆ
ನಾನು ಸತ್ತಾಗ
ಹೆಣ ಎತ್ತುವವರಿಗೆ
ಭಾರವಾಗಬಾರದು ಅಲ್ಲವೇ?

:-) :D ;-)

-ಪ್ರಸನ್ನ.ಎಸ್.ಪಿ

Monday, September 6, 2010

ನನ್ನ ಬರವಣಿಗೆಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆಗಳು

ಇವತ್ತು ಉದಯವಾಣಿಯ ಮಣಿಪಾಲ್ ಎಡಿಷನ್ನನ್ನು ನೋಡಿದಾಗ ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಕಾರಣ ಅಶೋಕ್ ಕುಮಾರ್‌ ಅವರು ಉದಯವಾಣಿಯ ನಿಸ್ತಂತು ಸಂಸಾರ ಅಂಕಣದಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ್ದಾರೆ. ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಹಾಗೂ ಅದನ್ನು ನನ್ನ ಗಮನಕ್ಕೆ ತಂದು ಸಂಪದದಲ್ಲಿ ನನ್ನ ಹಾಗೂ ಅಶೋಕ್‌‌ರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದಿರುವ ರಾಘವೇಂದ್ರ ನಾವಡರಿಗೂ ಧನ್ಯವಾದಗಳು. ನನ್ನ ಬರಹ ಹಾಗೂ ಲೇಖನಗಳನ್ನು ಸಂಪದ ಹಾಗೂ ಇಲ್ಲಿ ನೀವೆಲ್ಲರೂ ಓದಿ ಪ್ರೋತ್ಸಾಹಿಸಿದ್ದೀರಿ. ನಿಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. ನಾನು ಬರೆಯಲು ಪ್ರಾರಂಭಿಸಿದಾಗ ನನ್ನ ಬರಹಗಳು ಇಷ್ಟು ಜನರಿಗೆ ತಲುಪುತ್ತದೆ ಎಂದು ಖಂಡಿತಾ ಯೋಚಿಸಿರಲಿಲ್ಲ. ಬ್ಲಾಗರ‍್ stats ನಲ್ಲಿ ದೊರೆತ ಮಾಹಿತಿಯಂತೆ ಜುಲೈ2010ರಿಂದ ಇಲ್ಲಿಯವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ನನ್ನ ಬ್ಲಾಗಿಗೆ ಭೇಟಿ ನೀಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಜನ ನನ್ನ ಬ್ಲಾಗನ್ನು ನೋಡಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇನ್ನು ಸಂಪದದಲ್ಲಿಯೂ ಕೂಡ ನಾನು ಬರೆದ ಲೇಖನ/ಬ್ಲಾಗ್‌ಗಳಿಗೆ ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಿದ್ದೀರಿ, ನನ್ನ ಬರಹಗಳನ್ನು ಮೆಚ್ಚಿದ್ದೀರಿ. ಇದೆಲ್ಲವನ್ನೂ ನಾನು ನನ್ನ ಜೀವಮಾನದಲ್ಲಿಯೇ ಮರೆಯಲಾರೆ. ಮುಂದೆಯೂ ನೀವೆಲ್ಲರೂ ನನ್ನ ಬರಹಗಳಿಗೆ ಇದೇ ರೀತಿ ಪ್ರೋತ್ಸಾಹ ನೀಡುತ್ತೀರೆಂದು ನಂಬಿದ್ದೇನೆ. 

ಧನ್ಯವಾದಗಳೊಂದಿಗೆ,
-ಪ್ರಸನ್ನ ಶಂಕರಪುರ



(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ) 

ಬಾಹ್ಯ ಸಂಪರ್ಕಗಳು:
ಅಶೋಕ್ ವರ್ಲ್ಡ್: http://ashok567.blogspot.com
ಉದಯವಾಣಿ ನಿಸ್ತಂತು ಸಂಸಾರ: http://207.218.202.244/epaper/ViewPDf.aspx?Id=51874
ಸಂಪದ: http://sampada.net 
ರಾಘವೇಂದ್ರ ನಾವಡರು ನಿಸ್ತಂತು ಸಂಸಾರದ ಬಗ್ಗೆ ಸಂಪದದಲ್ಲಿ ಬರೆದ ಬ್ಲಾಗ್: http://sampada.net/blog/ksraghavendranavada/06/09/2010/27810

ಗೂಗಲ್ stats

ಬ್ಲಾಗರ್‌‌ನಲ್ಲಿ ಹೊಸದಾಗಿ stats ಸೌಲಭ್ಯ ಬಂದಿದೆ. ಇದರಿಂದ ನಮ್ಮ ಬ್ಲಾಗಿಗೆ ಎಷ್ಟು ಜನ ಭೇಟಿ ನೀಡಿದ್ದಾರೆ, ಯಾವ ಯಾವ ದೇಶದವರು ಬಂದಿದ್ದಾರೆ, popular referrer ಸೈಟ್ ಯಾವುದು ಮುಂತಾದ ಹಲವಾರು ಮಾಹಿತಿಗಳು ಸಿಗುತ್ತದೆ. ನನ್ನ ಬ್ಲಾಗಿಗೆ ಜುಲೈ 2010ರಿಂದ ಇಲ್ಲಿಯವರೆಗೆ ಒಟ್ಟು 1740 ಜನ ಭೇಟಿ ನೀಡಿದ್ದಾರೆ, ಹಾಗೂ ಸಂಪದದಿಂದ ಹೆಚ್ಚು ಜನ ಬಂದಿದ್ದಾರೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)



Wednesday, September 1, 2010

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ಧಿಕ ಶುಭಾಶಯಗಳು. ದೇವರು ನಿಮಗೆಲ್ಲರಿಗೂ ಆಯಸ್ಸು, ಆರೋಗ್ಯ, ಐಶ್ವರ್ಯಾದಿಗಳನ್ನು ನೀಡಿ, ಒಳಿತನ್ನು ಮಾಡಲಿ ಎಂದು ಹಾರೈಸುತ್ತೇನೆ.


ಚಿತ್ರ ಕೃಪೆ: http://www.geetasaar.com

ನಾವಡರಿಗೆ ಜನ್ಮದಿನದ ಶುಭಾಶಯಗಳು

ಕಾಲದ ಕನ್ನಡಿಯ ಬರಹಗಾರ ರಾಘವೇಂದ್ರ ನಾವಡರಿಗೆ ಇಂದು ಜನುಮದಿನ. ಅವರಿಗೆ ದೇವರು ಅಷ್ಟೈಶ್ವಯಾ೵ದಿಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.