ಇವತ್ತು ಉದಯವಾಣಿಯ ಮಣಿಪಾಲ್ ಎಡಿಷನ್ನನ್ನು ನೋಡಿದಾಗ ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಕಾರಣ ಅಶೋಕ್ ಕುಮಾರ್ ಅವರು ಉದಯವಾಣಿಯ ನಿಸ್ತಂತು ಸಂಸಾರ ಅಂಕಣದಲ್ಲಿ ನನ್ನ ಬ್ಲಾಗನ್ನು ಪರಿಚಯಿಸಿದ್ದಾರೆ. ಅವರಿಗೆ ಈ ಮೂಲಕ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಹಾಗೂ ಅದನ್ನು ನನ್ನ ಗಮನಕ್ಕೆ ತಂದು ಸಂಪದದಲ್ಲಿ ನನ್ನ ಹಾಗೂ ಅಶೋಕ್ರ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದಿರುವ ರಾಘವೇಂದ್ರ ನಾವಡರಿಗೂ ಧನ್ಯವಾದಗಳು. ನನ್ನ ಬರಹ ಹಾಗೂ ಲೇಖನಗಳನ್ನು ಸಂಪದ ಹಾಗೂ ಇಲ್ಲಿ ನೀವೆಲ್ಲರೂ ಓದಿ ಪ್ರೋತ್ಸಾಹಿಸಿದ್ದೀರಿ. ನಿಮಗೆಲ್ಲರಿಗೂ ನನ್ನ ಅನಂತ ಧನ್ಯವಾದಗಳು. ನಾನು ಬರೆಯಲು ಪ್ರಾರಂಭಿಸಿದಾಗ ನನ್ನ ಬರಹಗಳು ಇಷ್ಟು ಜನರಿಗೆ ತಲುಪುತ್ತದೆ ಎಂದು ಖಂಡಿತಾ ಯೋಚಿಸಿರಲಿಲ್ಲ. ಬ್ಲಾಗರ್ stats ನಲ್ಲಿ ದೊರೆತ ಮಾಹಿತಿಯಂತೆ ಜುಲೈ2010ರಿಂದ ಇಲ್ಲಿಯವರೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಜನ ನನ್ನ ಬ್ಲಾಗಿಗೆ ಭೇಟಿ ನೀಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ಜನ ನನ್ನ ಬ್ಲಾಗನ್ನು ನೋಡಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇನ್ನು ಸಂಪದದಲ್ಲಿಯೂ ಕೂಡ ನಾನು ಬರೆದ ಲೇಖನ/ಬ್ಲಾಗ್ಗಳಿಗೆ ಪ್ರತಿಕ್ರಿಯಿಸಿ ಸಲಹೆಗಳನ್ನು ನೀಡಿದ್ದೀರಿ, ನನ್ನ ಬರಹಗಳನ್ನು ಮೆಚ್ಚಿದ್ದೀರಿ. ಇದೆಲ್ಲವನ್ನೂ ನಾನು ನನ್ನ ಜೀವಮಾನದಲ್ಲಿಯೇ ಮರೆಯಲಾರೆ. ಮುಂದೆಯೂ ನೀವೆಲ್ಲರೂ ನನ್ನ ಬರಹಗಳಿಗೆ ಇದೇ ರೀತಿ ಪ್ರೋತ್ಸಾಹ ನೀಡುತ್ತೀರೆಂದು ನಂಬಿದ್ದೇನೆ.
ಧನ್ಯವಾದಗಳೊಂದಿಗೆ,
-ಪ್ರಸನ್ನ ಶಂಕರಪುರ
(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಬಾಹ್ಯ ಸಂಪರ್ಕಗಳು:
ಅಶೋಕ್ ವರ್ಲ್ಡ್: http://ashok567.blogspot.com
ಉದಯವಾಣಿ ನಿಸ್ತಂತು ಸಂಸಾರ: http://207.218.202.244/epaper/ViewPDf.aspx?Id=51874
ಸಂಪದ: http://sampada.net
ರಾಘವೇಂದ್ರ ನಾವಡರು ನಿಸ್ತಂತು ಸಂಸಾರದ ಬಗ್ಗೆ ಸಂಪದದಲ್ಲಿ ಬರೆದ ಬ್ಲಾಗ್: http://sampada.net/blog/ksraghavendranavada/06/09/2010/27810
4 Comments:
ಒಳ್ಳೆಯ ಪ್ರಯತ್ನ ನಿಮ್ಮದು,ಮುಂದುವರಿಸಿ :)
ಧನ್ಯವಾದಗಳು ಅಶೋಕ್, :-)
-ಪ್ರಸನ್ನ ಶಂಕರಪುರ
ಧನ್ಯವಾದಗಳು ಪ್ರಸನ್ನರೇ
ನಾನೂ ನಿಮ್ಮಷ್ಟೇ ಸಂಭ್ರಮ ಪಟ್ಟೆ
ಒಳ್ಳೆಯದಾಗಲಿ ನಿಮಗೆ.
ಧನ್ಯವಾದಗಳು ಗೋಪಿನಾಥರೆ, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ,
-ಪ್ರಸನ್ನ.ಎಸ್.ಪಿ
Post a Comment