ಬ್ಲಾಗರ್‌ನಲ್ಲಿರುವ ನಿಮ್ಮ ಬ್ಲಾಗ್‌ನಲ್ಲಿ ಏನೇ ಬದಲಾವಣೆ ಮಾಡಬೇಕಾದರೂ ಮೊದಲು ಈಗಿರುವ ಟೆಂಪ್ಲೇಟ್‌ನ್ನು ಸೇವ್ ಮಾಡಿಟ್ಟುಕೊಳ್ಳಿ, ಇದರಿಂದ ಬದಲಾವಣೆ ಮಾಡಿದ ಮೇಲೆ ಏನಾದರೂ ತೊಂದರೆಯಾದರೆ ಮೊದಲಿದ್ದ ರೂಪಕ್ಕೇ ಬ್ಲಾಗನ್ನು ಮರಳಿಸಬಹುದು.
(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಅದಕ್ಕಾಗಿ ಮೊದಲು ನಿಮ್ಮ ಬ್ಲಾಗರ್ ಡ್ಯಾಶ್‌ಬೋರ್ಡ್‌ನಲ್ಲಿ Design ಮೇಲೆ ಕ್ಲಿಕ್ ಮಾಡಿ, ನಂತರ Edit HTML ಒತ್ತಿ.
ಅಲ್ಲಿ Backup / Restore Template ಕೆಳಗೆ Download Full Template ಎಂದು ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
ನಂತರ ಫೈಲ್ ಓಪನ್ ಮಾಡಬೇಕೇ ಅಥವಾ ಸೇವ್ ಮಾಡಬೇಕೆ ಎಂದು ಕೇಳುತ್ತದೆ. ಆಗ Save File ಆಯ್ಕೆಯನ್ನು ಆರಿಸಿ, ನಂತರ Save ಬಟನ್ ಒತ್ತಿ. ಅಲ್ಲಿಗೆ ನಿಮ್ಮ ಕಂಪ್ಯೂಟರ್‌ನಲ್ಲಿ ನಿಮ್ಮ ಬ್ಲಾಗಿನ ಟೆಂಪ್ಲೇಟ್ ಕೋಡ್ ಇರುವ .xml ಫೈಲ್ ಸೇವ್ ಆಗಿರುತ್ತದೆ. ಅದನ್ನು ಜೋಪಾನವಾಗಿ ಇಟ್ಟುಕೊಳ್ಳಿ, ಮುಂದೆಂದಾದರೂ ಬ್ಲಾಗಿನ ಡಿಸೈನ್ ಬದಲಿಸಲು ಹೋಗಿ ತೊಂದರೆಯಾದರೆ ಹಿಂದಿದ್ದ ಟೆಂಪ್ಲೇಟನ್ನೇ restore ಮಾಡಬಹುದು.
ಈಗ ಟೆಂಪ್ಲೇಟ್ restore ಮಾಡುವುದು ಹೇಗೆಂದು ನೋಡೋಣ. ಮೊದಲು ಬ್ಲಾಗರ್‌ನ Dashboard--> Design--> Edit HTMLಗೆ ಹೋಗಿ, ಅಲ್ಲಿ Backup / Restore Template ಎಂಬುದರ ಕೆಳಗೆ Browse.. ಬಟನ್ ಇರುತ್ತದೆ, ಅದನ್ನು ಒತ್ತಿ.
ನಂತರ ನಿಮ್ಮ ಟೆಂಪ್ಲೇಟ್ ಕೋಡ್ ಇರುವ .xml ಫೈಲ್‌ನ್ನು ಆರಿಸಿ Open ಒತ್ತಿ.
ಆಮೇಲೆ Browse.. ಪಕ್ಕದಲ್ಲಿರುವ Upload ಬಟನ್ ಒತ್ತಿ.
ಕೊನೆಗೆ ಕೆಳಭಾಗದಲ್ಲಿ SAVE TEMPLATE ಎಂದು ಬರೆದಿರುವ ಕೇಸರಿ ಬಣ್ಣದ ಬಟನ್ ಇರುತ್ತದೆ. ಅದನ್ನು ಒತ್ತಿದರೆ ಆಯಿತು. ನಿಮ್ಮ ಮೊದಲಿದ್ದ ಟೆಂಪ್ಲೇಟ್ restore ಆಗುತ್ತದೆ.
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ