ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿಯು ನಿಮ್ಮ ಮನೆ - ಮನಗಳನ್ನು ಬೆಳಗಿಸಲಿ ಎಂದು ಹಾರೈಸುತ್ತೇನೆ.
ದೀಪಾವಳಿ ಎಂದರೆ ದೀಪಗಳ ಹಬ್ಬ. ಅದು ದೀಪಗಳ ಹಬ್ಬ ಮಾತ್ರವೇ ಆಗಲಿ, ಬದಲಿಗೆ ಶಬ್ಧ ಹಾಗೂ ಹೊಗೆಯ ಹಬ್ಬ ಆಗುವುದು ಬೇಡ. ಆದ್ದರಿಂದ ದಯವಿಟ್ಟು ಪಟಾಕಿಗಳನ್ನು ಸುಡಬೇಡಿ. ಇದರಿಂದ ಪರಿಸರ ಮಾಲಿನ್ಯವಾಗುತ್ತದೆ ಹಾಗೂ ಎಲ್ಲರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಈ ಬಾರಿ ಪಟಾಕಿ ರಹಿತ ದೀಪಾವಳಿ ಆಚರಿಸಿ.
ಹಾಗೆಯೇ ಇನ್ನೊಂದು ವಿಚಾರ, ದೀಪಾವಳಿಯಲ್ಲಿ ದೀಪಗಳನ್ನು ಬೆಳಗಿಸುವುದು ಸಾಮಾನ್ಯ. ಆದರೆ ನಾವು ಯಾವುದರಲ್ಲಿ ದೀಪ ಬೆಳಗುತ್ತೇವೆ ಎನ್ನುವುದೂ ಮುಖ್ಯ. ದೀಪ ಉರಿಸಲು ಪಿಂಗಾಣಿ ಹಣತೆಗಳ ಬದಲಿಗೆ ಮಣ್ಣಿನ ಹಣತೆಗಳನ್ನು ಬಳಸಿ. ಇದರಿಂದ ಹಣತೆ ತಯಾರಿಸಿ ಜೀವನ ಸಾಗಿಸುವ ಕುಂಬಾರರಿಗೂ ಸಹಾಯವಾಗುತ್ತದೆ ಹಾಗೂ ನಾವು ಬೆಳಗಿಸಿದ ದೀಪಕ್ಕೂ ಒಂದು ಶ್ರೇಷ್ಠತೆ ಇರುತ್ತದೆ.
ಮತ್ತೊಮ್ಮೆ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
3 Comments:
ತಮಗೂ
ಪ್ರಿಯ ಪ್ರಸನ್ನ,
ದೀಪಾವಳಿ ಶುಭಾಶಯ.
ನಿಮ್ಮ ಬ್ಲಾಗ್ ನಲ್ಲಿ ಹಣಿಕಿದೆ. ವಯಸ್ಸಿನ ಪ್ರಭಾವವಿರಬಹುದು. ತಂತ್ರಾಶಗಳ ಮಾಹಿತಿ, ಅಳವಡಿಕೆ, ಇತ್ಯಾದಿಗಳ ಬಗ್ಗೆ ನನ್ನ ತಲೆ ಹೋಗಬಯಸಲಿಲ್ಲ. ನನ್ನ 'ಕವಿಮನ' ಬ್ಲಾಗಿನ ಟೆಂಪ್ಲೇಟ್, ಇತ್ಯಾದಿಗಳನ್ನು ಸಿದ್ಧಪಡಿಸಿಕೊಟ್ಟವರು ಹರಿಹರಪುರ ಶ್ರೀಧರರು. ನಾನು 'ನುಡಿ' ಬಳಸುತ್ತಿದ್ದು ಅದನ್ನು ಯೂನಿಕೋಡಿಗೆ ಪರಿವರ್ತಿಸಲು ಬರುತ್ತಿಲ್ಲ. ಯಾರಾದರೂ ನಿಮ್ಮಂತಹ ತಿಳುವಳಿಕಸ್ಥರು ನನಗೆ ಹೇಳಿಕೊಡಬೇಕು. ನಾನು ಮಾಡಬಹುದಾದ ಕೆಲಸ ಎಂದರೆ ಆಗಾಗ ಎರಡು ಸಾಲು ಗೀಚುವುದು. ನಿಮಗೆ ಶುಭವಾಗಲಿ. ಪುರುಸೊತ್ತಾದಾಗ ಹಾಸನಕ್ಕೆ ಬನ್ನಿ.
ಕವಿ ನಾಗರಾಜ್ ಸರ್, ಮೊಟ್ಟ ಮೊದಲನೆಯದಾಗಿ ನಿಮಗೆ ಅಂತಃಸ್ಫುರಣಕ್ಕೆ ಸ್ವಾಗತ ಹಾಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್ಗೆ ಬದಲಾಯಿಸುವಲ್ಲಿ ತುಂಬಾ ಜನಕ್ಕೆ ಗೊಂದಲವಿದೆ. ಬರಹ ತಂತ್ರಾಂಶದ ಜೊತೆ ಬರುವ Baraha Convert ಉಪಯೋಗಿಸಿಕೊಂಡು ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್ಗೆ ಪರಿವರ್ತಿಸಬಹುದು. ಅದರ ಬಗ್ಗೆ ಶೀಘ್ರದಲ್ಲಿಯೇ ಒಂದು ಚಿತ್ರಸಹಿತ ಲೇಖನ ಬರೆಯುತ್ತೇನೆ.
ಇನ್ನು ತಂತ್ರಾಶಗಳ ಮಾಹಿತಿ, ಅಳವಡಿಕೆ, ಇತ್ಯಾದಿಗಳ ಬಗ್ಗೆ ಗೊತ್ತಾಗಲಿಲ್ಲ ಎಂದಿದ್ದೀರಿ, ನಿಮ್ಮ ಅಮೂಲ್ಯ ಅಭಿಪ್ರಾಯಕ್ಕೆ ಕೃತಜ್ಞತೆಗಳು. ನನ್ನ ಮುಂದಿನ ಲೇಖನಗಳಲ್ಲಿ ವಿಷಯಗಳನ್ನು ಇನ್ನಷ್ಟು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಬರೆಯಲು ಪ್ರಯತ್ನಿಸುತ್ತೇನೆ.
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
Post a Comment