Monday, November 15, 2010

ಗೂಗಲ್ ಸರ್ಚ್: ನಿರ್ಧಿಷ್ಟ ತಾಣಕ್ಕೆ ಸೀಮಿತಗೊಳಿಸುವ ವಿಧಾನ

ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ ವಿಷಯವಿರುವ ಎಲ್ಲಾ ತಾಣಗಳನ್ನೂ ತೋರಿಸುತ್ತದೆ. ಅಂತಹ ಸಂದರ್ಭದಲ್ಲಿ ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಲು ಗೂಗಲ್‌ನಲ್ಲಿ ಸಾಧ್ಯವಾಗುತ್ತದೆ. ಅದಕ್ಕಾಗಿ ಮೊದಲು ಗೂಗಲ್ ತಾಣಕ್ಕೆ ಹೋಗಬೇಕು. ನಂತರ ಸರ್ಚ್‌ಬಾಕ್ಸ್‌ನಲ್ಲಿ ಮೊದಲು "site:ವೆಬ್‌ಸೈಟ್ ವಿಳಾಸ {ಸ್ಪೇಸ್} ವಿಷಯ" ಈ ರೀತಿ ಕೊಟ್ಟು ನಂತರ ಸರ್ಚ್ ಕೊಡಬೇಕು. ಆಗ ನೀವು ಸೂಚಿಸಿದ ನಿರ್ಧಿಷ್ಟ ತಾಣದಿಂದ ಮಾತ್ರ ಫಲಿತಾಂಶಗಳನ್ನು ಗೂಗಲ್ ತೋರಿಸುತ್ತದೆ.

ಉದಾಹರಣೆಗೆ-- site:sampada.net ಲಿನಕ್ಸಾಯಣ ಎಂದು ಕೊಟ್ಟು ಸರ್ಚ್ ಒತ್ತಿದರೆ ಸಂಪದದಲ್ಲಿ ಮಾತ್ರ ಇರುವ ಲಿನಕ್ಸಾಯಣ ಪುಟಗಳನ್ನು ತೋರಿಸುತ್ತದೆ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)


(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ


12 Comments:

ಮಹೇಶ said...

ಉಪಯುಕ್ತ ಮಾಹಿತಿ. ಇದೇ ರೀತಿ ಒಂದಕ್ಕಿಂತ ಹೆಚ್ಚು ಅಂತರ್ಜಾಲ ತಾಣಗಳಲ್ಲಿ ಏಕಕಾಲದಲ್ಲಿ ಸರ್ಚ್ ಮಾಡಲು ಸಾಧ್ಯವಿದೆಯೇ

ಪ್ರಸನ್ನ ಶಂಕರಪುರ said...

ಬಹುಷಃ ಒಂದಕ್ಕಿಂತ ಹೆಚ್ಚು ಅಂತರ್ಜಾಲ ತಾಣಗಳಲ್ಲಿ ಏಕಕಾಲದಲ್ಲಿ ಸರ್ಚ್ ಮಾಡಲು ಸಾಧ್ಯವಿಲ್ಲ.

ಧನ್ಯವಾದಗಳು,
-ಪ್ರಸನ್ನ.ಎಸ್.ಪಿ

vedasudhe said...

ಉತ್ತಮ ಮಾಹಿತಿಗಾಗಿ ಧನ್ಯವಾದಗಳು

ಪ್ರಸನ್ನ ಶಂಕರಪುರ said...

ಪ್ರತಿಕ್ರಿಯೆಗಾಗಿ ಧನ್ಯವಾದಗಳು,

-ಪ್ರಸನ್ನ.ಎಸ್.ಪಿ

ಸುಬ್ರಮಣ್ಯ said...

ಧನ್ಯವಾದಗಳು

ಪ್ರಸನ್ನ ಶಂಕರಪುರ said...

@ಸುಬ್ರಮಣ್ಯ ಮಾಚಿಕೊಪ್ಪ,
ಧನ್ಯವಾದಗಳು, :-)

Unknown said...

ಮಹೇಶ..
ಬಹುಷಃ ನಿಮ್ಮ ಪ್ರಶ್ನೆಗೆ ಸ್ವಲ್ಪ ಮಟ್ಟಿನ ಉತ್ತರ ಇದರಲ್ಲಿದೆ.
ಕಸ್ಟಮ್ ಹುಡುಕಾಟ [http://www.google.com/cse/].
ಆದರೆ, ನಿಮ್ಮ ಬಹುಸಂಖ್ಯೆಯ ಅಂತರ್ಜಾಲ ತಾಣಗಳು ನಿರ್ದಿಷ್ಟವಾದದ್ದಾದರೆ ಮಾತ್ರ ಇದರ ಉಪಯೋಗ. ಅಂದರೆ, ಪ್ರತಿ ಬಾರಿ ಬೇರೆ, ಬೇರೆ ತಾಣಗಳಲ್ಲಿ ಹುಡುಕಲು ಇದು ರಗಳೆ. ನಿಮ್ಮ ಹುಡುಕಾಟ ನಿರ್ದಿಷ್ಟ ಅಂತಾದಲ್ಲಿ, ನಿಮಗೆ ಬೇಕಾದ ತಾಣಗಳನ್ನು ಸೇರಿಸಿ, ನಿಮ್ಮದೇ ಆದ "ಗೂಗಲ್ ಕಸ್ಟಮ್ ಹುಡುಕಾಟ" ಯಂತ್ರವನ್ನ ರಚಿಸಬಹುದು.

ಹಮ್‌ಮ್‌.. ಹೆಚ್ಚಿಗೆ ಮಾಹಿತಿಗೆ, ಪೂರ್ಣ ಲೇಖನ ಬರೆಯುವಷ್ಟು ಸಮಯ ಸಿಗುತ್ತಾ ನನಗೆ ಹೇಳಲಾರೆ..

ಪ್ರಸನ್ನ ಒಳ್ಳೇ ಮಾಹಿತಿ..
ಹಾಗೇ.. "ಗೂಗಲ್ ಮಲ್ಟಿಪಲ್ ಸೈನ್ ಇನ್" ಬಗ್ಗೆ ಒಂದು ಲೇಖನ ಬರೆಯೋ ಪ್ರಯತ್ನದಲ್ಲಿ ಇದ್ದೇನೆ.. ಬರೆದಾದ ಮೇಲೆ ನಿಮಗೆ ಕಳಿಸುವೆ.. "ಟೆಕ್ ಕನ್ನಡ"ಕ್ಕೆ ಉಪಯೋಗವಾಗುತ್ತಾ ನೋಡಿ.

ಧನ್ಯವಾದಗಳೊಂದಿಗೆ..
ನಿಮ್ಮೊಲವಿನ,
ಸತ್ಯ.. :-)

ಪ್ರಸನ್ನ ಶಂಕರಪುರ said...

ಧನ್ಯವಾದಗಳು ಸತ್ಯ,
"ಗೂಗಲ್ ಮಲ್ಟಿಪಲ್ ಸೈನ್ ಇನ್" ಬಗ್ಗೆ ಲೇಖನ ಬರೆದಾದ ಮೇಲೆ ಕಳುಹಿಸಿಕೊಡಿ. ಟೆಕ್-ಕನ್ನಡದಲ್ಲಿ ಪ್ರಕಟಿಸುವೆ.

-ಪ್ರಸನ್ನ.ಎಸ್.ಪಿ

ಮನಮುಕ್ತಾ said...

good info... thanks.

ಪ್ರಸನ್ನ ಶಂಕರಪುರ said...

@ಮನಮುಕ್ತಾ-- Thank you..

ವಿ.ರಾ.ಹೆ. said...

ಒಳ್ಳೇ ಮಾಹಿತಿ.

ಧನ್ಯವಾದಗಳು

ಪ್ರಸನ್ನ ಶಂಕರಪುರ said...

@ ವಿ.ರಾ.ಹೆ ಧನ್ಯವಾದಗಳು,

Post a Comment