Tuesday, December 21, 2010

ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?

ನಮ್ಮ ಜೀವಶಾಸ್ತ್ರದ ಮೇಷ್ಟ್ರು ಒಂದು ಸಲ ಇದ್ದಕ್ಕಿದ್ದಂತೆ "ಇಂಗಾಲದ ಡೈ ಆಕ್ಸೈಡ್ ಅನಿಲ ಯಾವ ಬಣ್ಣ ಇರುತ್ತೆ?" ಅಂತ ಕೇಳಿದರು. ಬಸ್ಸು, ಲಾರಿಯಲ್ಲಿ ಬರುವ ಉತ್ಸರ್ಜಿತ ಹೊಗೆ (exhaust gas) ಇಂಗಾಲದ ಡೈ ಆಕ್ಸೈಡ್ (ಕಾರ್ಬನ್ ಡೈ ಆಕ್ಸೈಡ್) ಅಲ್ವಾ, ಅದು ಕಪ್ಪು ಬಣ್ಣ ಇರುತ್ತೆ. ಹಾಗಾಗಿ ಇಂಗಾಲದ ಡೈ ಆಕ್ಸೈಡ್ ಬಣ್ಣ ಕಪ್ಪು ಎಂದು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ "ಕಪ್ಪು" ಅಂತ ಕೂಗಿದ್ವಿ. ತಕ್ಷಣ ಅವರು , " ಹಾಗಾದರೆ ನಾವು ಉಸಿರು ಬಿಟ್ಟಾಗ ಮೂಗಿಂದ ಇಂಗಾಲದ ಡೈ ಆಕ್ಸೈಡ್ ಅನಿಲ ಹೊರಬರುತ್ತಲ್ಲ, ಅದು ಸಿಗರೇಟ್ ಹೊಗೆ ತರಹ ಕಪ್ಪಗೆ ಇರಬೇಕಿತ್ತು. ಏಕಿಲ್ಲ?" ಎಂದು ಕೇಳಿದರು. ಆಗ ನಾವು ಹೇಳಿದ್ದು ತಪ್ಪು ಉತ್ತರ ಎಂದು ಗೊತ್ತಾದರೂ, ಮೂಗಿಂದ ಕಪ್ಪು ಹೊಗೆ ಬರುವುದನ್ನು ಕಲ್ಪಿಸಿಕೊಂಡು ಎಲ್ಲರೂ ಜೋರಾಗಿ ನಕ್ಕಿದೆವು. :-)

8 Comments:

PaLa said...

:) ನೀವೇ ಯೋಚನೆ ಮಾಡೋ ಹಾಗೆ ಮಾಡಿದ್ರಲ್ಲ ನಿಮ್ ಮೇಷ್ಟ್ರು.. ಒಳ್ಳೇ ಮೇಷ್ಟ್ರು ಅವ್ರು.. ಮತ್ತೆ ನಿಮ್ದು ಒಳ್ಳೇ ಪಾಠ..

PaLa said...

simple but effective, short n sweet article.. there is no answer for the question in the article but it makes you think :) this is the ideal way to teach.. especially kids.. you may tag this under scientific article along with "ಹಾಸ್ಯ"..

Please do share some more facts like this in this way..

ವಿ.ರಾ.ಹೆ. said...

ಅದ್ಯಾವ ಸಿಗರೇಟ್ ಹೊಗೆ 'ಕಪ್ಪು' ಬಣ್ಣ ಇರತ್ತೆ ?! :)

ಜಲನಯನ said...

ಹಹಹ ಕೆಲವೊಮ್ಮೆ ಹಾಗೆನೇ ..?? ಆದ್ರೆ ಇಂಗಾಲದ ಡೈ ಆಕ್ಸೈಡ್ ಕಪ್ಪು ಇರೊಲ್ಲ ಅದ್ರಲ್ಲಿ ಬರುವ ಇಂಗಾಲದ ಬಹು ಸೂಕ್ಷ್ಮ ಕಣಗಳ ಕಾರಣ ಅದು ಕಪ್ಪಿರುತ್ತೆ ಅನ್ಸುತ್ತೆ...ನಮ್ಮ ಕೆಮಿಸ್ಟ್ರಿ ಸ್ನೇಹಿತ್ರು ಸೂಕ್ತ ಉತ್ತರ ಕೊಡಬಹುದು...

PaLa said...

@virahe, :D

Prasanna S P said...

@ಪಾಲಚಂದ್ರ,
ಪ್ರತಿಕ್ರಿಯೆ 1ಕ್ಕೆ ಉತ್ತರ:- ಹೌದು ನಮ್ ಮೇಷ್ಟ್ರು ತುಂಬಾ ಒಳ್ಳೆಯವರು, ತಲೆಗೆ ತುಂಬಾ ಕೆಲಸ ಕೊಡುತ್ತಾರೆ. ಉತ್ತರಗಳನ್ನು ನಾವೇ ಯೋಚಿಸುವಂತೆ ಮಾಡುತ್ತಾರೆ.

ಪ್ರತಿಕ್ರಿಯೆ 2ಕ್ಕೆ ಉತ್ತರ:- ಪ್ರಶ್ನೆಗೆ ಲೇಖನದಲ್ಲಿ ನಾನೇ ಉತ್ತರ ಬರೆಯಬಹುದಿತ್ತು, ಆದರೆ ಬೇರೆಯವರೂ ಸ್ವಲ್ಪ ಯೋಚಿಸಲಿ ಎಂದು ಉತ್ತರ ಬರೆಯಲಿಲ್ಲ. ಆದರೆ ಈಗ ಬರೆಯುತ್ತಿದ್ದೇನೆ.- ಬಸ್ಸು, ಲಾರಿಗಳಲ್ಲಿ ಬರುವ ಹೊಗೆ ಕಾರ್ಬನ್ ಡೈ ಆಕ್ಸೈಡ್ ಅನಿಲವೇ ಆದರೂ ಕೂಡ ಇಂಜಿನ್ನಿನಲ್ಲಿ ಇಂಧನ ಸರಿಯಾಗಿ ದಹನವಾಗದ ಕಾರಣ (ಅಪೂರ್ಣ ದಹನ) ಅದರಲ್ಲಿ ಇಂಗಾಲದ ಸಣ್ಣ ಕಣಗಳು ಹಾಗೆಯೇ ಉಳಿದುಕೊಂಡಿರುತ್ತದೆ. ಅದು ಬಸ್ಸಿನ ಹೊಗೆ ಕಪ್ಪು ಬಣ್ಣವಾಗಲು ಕಾರಣವಾಗುತ್ತದೆ. ಆದರೆ ಮನುಷ್ಯನ ಜೀವಕೋಶದ ಒಳಗೆ (inside the cells) ನಡೆಯುವುದು ಪೂರ್ಣ ದಹನ ಕ್ರಿಯೆ, ಹಾಗಾಗಿ ಅಲ್ಲಿ ಇಂಗಾಲದ ಸಣ್ಣ ಸಣ್ಣ ಕಣಗಳು ಉತ್ಪತ್ತಿಯಾಗುವುದಿಲ್ಲ. ಹಾಗಾಗಿ "ಇಂಗಾಲದ ಡೈ ಆಕ್ಸೈಡ್ ಬಣ್ಣರಹಿತ ಅನಿಲ" ಮತ್ತು ಮೂಗಿನಿಂದ ಕಪ್ಪು ಹೊಗೆ ಬರುವುದಿಲ್ಲ ಎಂದು ಗೊತ್ತಾಗುತ್ತದೆ. ಅಲ್ಲದೇ ನಾವು ಮೂಗಿನಿಂದ ಹೊರಹಾಕುವ ಗಾಳಿಯಲ್ಲಿ ಕಾರ್ಬನ್ ಡೈ ಆಕ್ಸೈಡ್ ಇದ್ದರೂ, ಬಹುಪಾಲು ಅದರಲ್ಲಿ ಆಮ್ಲಜನಕವೇ (oxygen) ಇರುತ್ತದೆ. ನಾವು ತೆಗೆದುಕೊಂಡ ಗಾಳಿಯಲ್ಲಿನ ಅಷ್ಟೂ ಆಮ್ಲಜನಕವನ್ನು ಶ್ವಾಸಕೋಶಗಳು (lungs) ಹೀರಿಕೊಳ್ಳುವುದಿಲ್ಲ.

ನೀವು ಹೇಳಿದಂತೆ ಇನ್ನಷ್ಟು ಈ ರೀತಿಯ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Prasanna S P said...

@ವಿ.ರಾ.ಹೆ - ಗೊತ್ತಿಲ್ಲ, ಸುಮ್ಮನೆ ತಮಾಷೆಗೆ ಸಿಗರೇಟ್ ಹೊಗೆ ತರ ಮೂಗಿಂದ ಕಪ್ಪು ಹೊಗೆ ಬರಬೇಕಿತ್ತಲ್ಲ ಎಂದು ಹೇಳಿರಬಹುದು. :-)

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Prasanna S P said...

@ಜಲನಯನ, ನೀವು ಹೇಳಿದ್ದು ಸರಿ, ಇಂಗಾಲದ ಡೈ ಆಕ್ಸೈಡ್ ಕಪ್ಪು ಬಣ್ಣ ಇರಲ್ಲ. ಅದೊಂದು ಬಣ್ಣರಹಿತ ಅನಿಲ. ಹೆಚ್ಚಿನ ವಿವರಣೆ ಮೇಲಿನ ಕಾಮೆಂಟಿನಲ್ಲಿ ಬರೆದಿದ್ದೇನೆ.

ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ

Post a Comment