ದಯವಿಟ್ಟು ಎಲ್ಲರೂ ಈ ಕೆಳಗಿನ ಕಿರುಚಿತ್ರವನ್ನು ನೋಡಿ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಯ ಎಲ್ಲ ಮಕ್ಕಳಿಗೂ ಆದಿತ್ಯನದೇ ಪರಿಸ್ಥಿತಿ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಮತ್ತೊಮ್ಮೆ ಕೇಳಿಕೊಳ್ಳುತ್ತೇನೆ, ದಯವಿಟ್ಟು ಸ್ವಲ್ಪ ಬಿಡುವು ಮಾಡಿಕೊಂಡು ಈ ಕಿರುಚಿತ್ರವನ್ನು ನೋಡಿ. ಸುಮಾರು 16 ನಿಮಿಷ ಇದೆ ಅಷ್ಟೇ.
Friday, December 2, 2011
Monday, October 24, 2011
ಉಬುಂಟು 11.10ರಲ್ಲಿ ಕನ್ನಡ ಅಕ್ಷರ ಬರೆಯುವ ತೊಂದರೆ ಮತ್ತು ಪರಿಹಾರ
ಉಬುಂಟು 11.10ರಲ್ಲಿ ಕನ್ನಡ ಅಕ್ಷರಗಳನ್ನು ಬರೆಯಲು ಹೋದರೆ ಸ್ಪೇಸ್ ಇಲ್ಲೆಲ್ಲೋ ಬಂದು ವಾಕ್ಯಗಳು ಓದಲಾಗದಷ್ಟು ಹದಗೆಡುತ್ತದೆ. Unity desktopನಲ್ಲಿರುವ ಏನೋ ಒಂದು ತೊಂದರೆ ಇದಕ್ಕೆ ಕಾರಣ.
ಇದಕ್ಕೆ ಪರಿಹಾರವೂ ಇದೆ. GNOME Desktop ಹಾಕಿಕೊಂಡರೆ ನಂತರ ಕನ್ನಡವನ್ನು ಸರಿಯಾಗಿ ಟೈಪಿಸಲು ಆಗುತ್ತದೆ. GNOMEನ್ನು ಸ್ಥಾಪಿಸಿಕೊಳ್ಳಲು terminal ಓಪನ್ ಮಾಡಿ, ಈ ಕಮ್ಯಾಂಡನ್ನು ಓಡಿಸಿ,
sudo apt-get install gnome-panel
ನಂತರ ಲಾಗ್‌ಔಟ್ ಆಗಿ. ಮತ್ತೊಮ್ಮೆ ಲಾಗಿನ್ ಆಗುವಾಗ ಯೂಸರ್ ನೇಮಿನ ಪಕ್ಕ ಒಂದು ಚಕ್ರ ಕಾಣುತ್ತದೆ. ಅಲ್ಲಿ GNOME ಅಥವಾ GNOME Classic ಆರಿಸಿಕೊಳ್ಳಿ.
ಈಗ ಕನ್ನಡವನ್ನು ಟೈಪಿಸಿದರೆ ಸರಿಯಾಗಿ ಬರುತ್ತದೆ!
-ಪ್ರಸನ್ನ.ಎಸ್.ಪಿ

Saturday, October 22, 2011
ಪದ್ಯ: ಗುಬ್ಬಿ
(ಹಾಡನ್ನು ಕೇಳಲು ಮೇಲೆ Play ಬಟನ್ ಒತ್ತಿ. ವಾಲ್ಯುಮ್ ಸ್ವಲ್ಪ ಜೋರಾಗಿ ಇಡಿ)
ಗುಬ್ಬಿಯೊಂದು
ಹಾರಿಬಂದು
ಮನೆಯ ಮೇಲೆ ಕುಳಿತಿತು ||೧||
ಅತ್ತ ಇತ್ತ
ಸುತ್ತ ಮುತ್ತ
ಕತ್ತುತಿರುಗಿ ನೋಡಿತು ||೨||
ಚೀಂವ್ ಚೀಂವ್
ಚೀಂವ್ ಎಂದು
ಚೆಂದದಿಂದ ಹಾಡಿತು ||೩||
ಅದನು ಕಂಡು
ಪುಟ್ಟ ಪಾಪ
ಅಲ್ಲೆ ನೋಡಿ ನಿಂತಿತು ||೪||
(ಬರೆದವರು ಯಾರು ಅಂತ ಗೊತ್ತಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟಿದ್ದು.. ಹಾಡಿರುವುದು ಶ್ರೀದೇವಿ)
(ಇದು ಅಂತಃಸ್ಫುರಣದಲ್ಲಿ ನೂರನೆಯ ಬರಹ!!)
Tuesday, October 4, 2011
ಕನ್ನಡ ಟ್ವಿಟರ್ ತಂತ್ರಾಂಶ:
ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕನ್ನಡ ಬಲ್ಲವರಿಗೆ ಟ್ವಿಟರನ್ನು ಬಳಸಲು ಸುಲಭವಾಗುತ್ತದೆ ಎಂದು ನನ್ನ ನಂಬಿಕೆ. ಕನ್ನಡ ಟ್ವಿಟರನ್ನು http://prasannasp.net/twitter ತಾಣಕ್ಕೆ ಹೋಗುವ ಮೂಲಕ ಬಳಸಬಹುದು.
ಏನಿದು "ಕನ್ನಡ ಟ್ವಿಟರ್"?
ಅಂತರ್ಜಾಲದಲ್ಲಿ ಸಾಕಷ್ಟು ಕನ್ನಡ ತಾಣಗಳಿದ್ದರೂ ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬಳಕೆ ಕಡಿಮೆಯೇ. ಇನ್ನು ಸಾಮಾಜಿಕ ತಾಣಗಳೂ ಕೂಡ ಮೊದಲು ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಗೊಂಡು ನಂತರ ಯಾವುದೋ ಕಾಲದಲ್ಲಿ ಕನ್ನಡಕ್ಕೆ ಬರುತ್ತಿವೆ. ಟ್ವಿಟರ್ ಕೂಡಾ ಇದಕ್ಕೆ ಹೊರತಾಗಿಲ್ಲ. ಟ್ವಿಟರ್ ಈಗಾಗಲೇ ಹಿಂದಿಯಲ್ಲಿ ಲಭ್ಯವಿದೆ. ಆದರೆ ಅದು ಕನ್ನಡಕ್ಕೆ ಯಾವಾಗ ಬರುತ್ತದೆಂದು ಹೇಳಲು ಈಗಲೇ ಸಾಧ್ಯವಿಲ್ಲ. ಈ ಬಗ್ಗೆ ಯೋಚಿಸಿದಾಗ ನಾನೇ ಏಕೆ ಟ್ವಿಟರಿಗೆ ಕನ್ನಡದ ಹೊದಿಕೆ ಹೊದಿಸಬಾರದು ಎಂದೆನಿಸಿತು. ಆಗ ಹುಟ್ಟಿದ್ದೇ ಈ ಕನ್ನಡ ಟ್ವಿಟರ್ ತಂತ್ರಾಂಶ
ಉಪಯೋಗಿಸುವುದು ಹೇಗೆ?
ಮೊದಲು http://prasannasp.net/twitter/oauth ತಾಣಕ್ಕೆ ಹೋಗಿ. ನಿಮ್ಮ ಟ್ವಿಟರ್ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು, "Authorize app" ಬಟನ್ ಒತ್ತಿ. (ಗಮನಿಸಿ: ನೀವು ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಅಕೌಂಟನ್ನು ಬಳಸಲು ಮಾತ್ರಾ ಅನುಮತಿ ಕೊಡುತ್ತಿದ್ದೀರ. ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಪಾಸ್‌ವರ್ಡ್ ಗೊತ್ತಾಗುವುದಿಲ್ಲ. ಹಾಗಾಗಿ ಧೈರ್ಯವಾಗಿ ನಿಮ್ಮ ಪಾಸ್‌ವರ್ಡ್ ಕೊಡಬಹುದು!)
ಈಗ ನೀವು ಕನ್ನಡ-ಟ್ವಿಟರನ್ನು ನೇರವಾಗಿ ಬಳಸಬಹುದು. ಇದರ ಒಂದು ದೊಡ್ಡ advantage ಎಂದರೆ ನೀವು ಒಮ್ಮೆ ಕನ್ನಡ-ಟ್ವಿಟರಿಗೆ ಲಾಗಿನ್ ಆಗಿ, ನಂತರ settings (http://prasannasp.net/twitter/settings) ಪುಟದಲ್ಲಿ ಒಂದು ಪಾಸ್‌ವರ್ಡ್ ಕೊಟ್ಟು ನಿಮ್ಮ ಪ್ರೊಫೈಲನ್ನು ಸೇವ್ ಮಾಡಿದರೆ, ಮುಂದಿನ ಸಲದಿಂದ ನೀವು ನೇರವಾಗಿ ಆ ಪಾಸ್‌ವರ್ಡ್ ಮೂಲಕ ಕನ್ನಡ-ಟ್ವಿಟರಿಗೆ ಲಾಗಿನ್ ಆಗಬಹುದು. ಇದರಿಂದ ನೀವು ಕನ್ನಡ-ಟ್ವಿಟರನ್ನು twitter.com ಬ್ಲಾಕ್ ಆಗಿರುವ ಕಡೆಯೂ ಬಳಸಲು ಸಾಧ್ಯವಾಗುತ್ತದೆ.
ಕನ್ನಡ-ಟ್ವಿಟರಿಗೆ ನೇರವಾಗಿ ಲಾಗಿನ್ ಆಗಲು http://prasannasp.net/twitter/login ಪುಟಕ್ಕೆ ಹೋಗಿ, ನಿಮ್ಮ ಟ್ವಿಟರ್ ಯೂಸರ್ ನೇಮ್ ಹಾಗೂ ನೀವು ಕನ್ನಡ-ಟ್ವಿಟರಿಗೆ ಆರಿಸಿಕೊಂಡ ಪಾಸ್‌ವರ್ಡ್ ನ್ನು ಕೊಟ್ಟು ಸೈನ್‌ಇನ್ ಆಗಿ.
ವೈಶಿಷ್ಟ್ಯತೆಗಳು:
ಅಪ್ಡೇಟ್‌ಗಳಿಗಾಗಿ ನನ್ನನ್ನು ಟ್ವಿಟರಿನಲ್ಲಿ ಹಿಂಬಾಲಿಸಿ: @prasannasp
Code credits: Dabr
ಧನ್ಯವಾದಗಳೊಂದಿಗೆ,
-ಪ್ರಸನ್ನ. ಎಸ್. ಪಿ

- ಕನ್ನಡ-ಟ್ವಿಟರ್ ಸಂಪೂರ್ಣವಾಗಿ ಯೂನಿಕೋಡ್‌ನಲ್ಲಿದೆ. ಹಾಗಾಗಿ ಇದನ್ನು ಯೂನಿಕೋಡ್ ಬೆಂಬಲಿತ ಎಲ್ಲಾ ಉಪಕರಣಗಳಲ್ಲಿ ಬಳಸಬಹುದು. (ಮೊಬೈಲ್ ಫೋನ್‌ಗಳಲ್ಲಿ ಸಹ ಬಳಸಬಹುದು).
- ಇದು OAuth ಮೂಲಕ ಕೆಲಸ ಮಾಡುವುದರಿಂದ ತುಂಬಾ ಸುರಕ್ಷಿತ. ನಿಮ್ಮ ಪಾಸ್‌ವರ್ಡ್ ಎಂದಿಗೂ ಬೇರೆಯವರಿಗೆ ತಿಳಿಯುವುದಿಲ್ಲ. ಹಾಗೂ ಯಾವಾಗ ಬೇಕಾದರೂ http://twitter.com/settings/applications ಪುಟಕ್ಕೆ ತೆರಳಿ ಈ ತಂತ್ರಾಂಶಕ್ಕೆ access revoke ಮಾಡಬಹುದು.
- ಟ್ವಿಟ್‌ಪಿಕ್ ಮೂಲಕ ನೇರವಾಗಿ ಚಿತ್ರಗಳನ್ನು ಸೇರಿಸಬಹುದು.
- ಇದು open source ತಂತ್ರಾಂಶವಾಗಿರುವುದರಿಂದ ನೀವೂ ಇದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು. ವಿವರಗಳಿಗಾಗಿ ಈ ಪುಟವನ್ನು ನೋಡಿ.
- ಸಧ್ಯಕ್ಕೆ ಈ ತಂತ್ರಾಂಶ ನನ್ನ ವೆಬ್‌ಸೈಟ್‌ನಲ್ಲಿದೆ. ಯಾರಾದರೂ ಬೆಂಬಲಕ್ಕೆ ನಿಂತರೆ ಇದಕ್ಕೆ ಒಂದು ಡೊಮೈನ್ ಕೊಂಡು, ಬೇರೆ ತಾಣ ಮಾಡಬಹುದು.
- Google Transliteration ಬಳಸಿಕೊಂಡು ನೇರವಾಗಿ ಕನ್ನಡದಲ್ಲಿ ಟ್ವೀಟ್ ಮಾಡುವಂತೆ ಮಾಡಬಹುದು.
- Google Translation ಸೇವೆ ಬಳಸಿಕೊಂಡು ಬೇರೆ ಭಾಷೆಯಲ್ಲಿರುವ (ಉದಾ:English) ಟ್ವೀಟ್‌ಗಳನ್ನು ಕನ್ನಡಕ್ಕೆ ಭಾಷಾಂತರಿಸಿ ತೋರಿಸಬಹುದು.
- ಇದನ್ನು ಬಳಸಿ ನೋಡಿ, ಚೆನ್ನಾಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಆಗ ನಾನು ಹಾಕಿದ ಶ್ರಮ ಸಾರ್ಧಕವಾಗುತ್ತದೆ.
- ಇದು open source ತಂತ್ರಾಂಶವಾದ್ದರಿಂದ ಯಾರು ಬೇಕಾದರೂ ಇದನ್ನು ಬಳಸಬಹುದು ಹಾಗೂ ಅಭಿವೃದ್ಧಿಪಡಿಸಬಹುದು. ವಿವರಗಳಿಗೆ ಈ ಪುಟ ನೋಡಿ. ನೀವು ಇದರಲ್ಲಿ ಆಸಕ್ತರಾಗಿದ್ದರೆ ನನಗೊಂದು ಸಂದೇಶ ಕಳಿಸಿ.
ಅಪ್ಡೇಟ್‌ಗಳಿಗಾಗಿ ನನ್ನನ್ನು ಟ್ವಿಟರಿನಲ್ಲಿ ಹಿಂಬಾಲಿಸಿ: @prasannasp
Code credits: Dabr
ಧನ್ಯವಾದಗಳೊಂದಿಗೆ,
-ಪ್ರಸನ್ನ. ಎಸ್. ಪಿ
Labels:
api,
FOSS,
Twitter,
web application,
ಕನ್ನಡ,
ಟ್ವಿಟರ್,
ತಂತ್ರಜ್ಞಾನ,
ತಂತ್ರಾಂಶ
Wednesday, September 7, 2011
ಮನುಷ್ಯ V/s. ಸಸ್ಯ
ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀವನದ ಸಾಕಷ್ಟು ಸಮಯವನ್ನು ಕಳೆಯುತ್ತೇವೆ. ಆದರೆ ಸಸ್ಯಗಳು ಹಾಗಲ್ಲ. ಅವು ಇರುವುದೇ ಒಂದೇ ಜಾಗದಲ್ಲಿಯಾದರೂ ಅದಕ್ಕೇ ಎಷ್ಟು ಸರಿಯಾಗಿ ಹೊಂದಿಕೊಳ್ಳುತ್ತವೆ ನೋಡಿ. ನಮಗೆ ಈ ಜಾಗ ಆಗುವುದಿಲ್ಲ, ನೆಲ ತಗ್ಗಾಗಿದೆ, ಬಿಸಿಲು ಜಾಸ್ತಿ ಬೀಳುತ್ತದೆ, ನೀರು ಸರಿಯಾಗಿಲ್ಲ ಎಂದು ದೂರುವುದೇ ಇಲ್ಲ. ಒಂದು ಮಳೆ ಬಿದ್ದರೆ ಸಾಕು ಎಲ್ಲೆಡೆ ಎದ್ದುನಿಲ್ಲುತ್ತವೆ. ಅವು ಹಾಗಿರುವುದರಿಂದಲೇ ನಾವು ಉಸಿರಾಡಲು ಆಗುತ್ತಿರುವುದು ಅಲ್ವಾ? ಇದೆಲ್ಲಾ ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಮೊನ್ನೆ ಹಬ್ಬಕ್ಕೆಂದು ಊರಿಗೆ ಹೋದಾಗ ಇದೇ ರೀತಿಯ ಕೆಲವು ಸಸ್ಯಗಳನ್ನು ಗಮನಿಸಿದೆ. ಕೆಳವು ಗೋಡೆಗಳ ಮೇಲೆ ಬೆಳೆದುಕೊಂಡಿದ್ದರೆ, ಇನ್ನು ಕೆಲವು ಹೆಂಚು, ದೋಣಿ (ನೀರು ಹೋಗಲು ಹೆಂಚಿನ ತುದಿಗೆ ಹಾಕಿರುವ ಅರ್ಧಚಂದ್ರಾಕಾರದ ಉದ್ದವಾದ ಪೈಪ್/ ದಬ್ಬೆಯ ತುಂಡು) ಇತ್ಯಾದಿ ಜಾಗಗಳಲ್ಲಿ ಬೆಳೆದುಕೊಂಡಿದ್ದವು. ಅದನ್ನು ನೋಡಿದ ಮೇಲೆ ನಮಗೆ ಬದುಕುವುದಕ್ಕೆ ಸಸ್ಯಗಳಿಗಿಂತ ಕಷ್ಟವೇ ಎಂದು ಕೇಳಿಕೊಳ್ಳುವಂತಾಯಿತು..
-ಚಿತ್ರಗಳು: ಪ್ರಸನ್ನ.ಎಸ್.ಪಿ
-ಚಿತ್ರಗಳು: ಪ್ರಸನ್ನ.ಎಸ್.ಪಿ
Saturday, September 3, 2011
ಚಾಮರಾಜನಗರ, ಅಧಿಕಾರ ಮತ್ತು ಮೂಢನಂಬಿಕೆ
ಚಾಮರಾಜನಗರಕ್ಕೆ ಬರುವ ರಾಜ್ಯದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ (ಮೂಢ)ನಂಬಿಕೆಯಿದೆ. ಮುಖ್ಯಮಂತ್ರಿಗಳಿರಲಿ, ಮಂತ್ರಿಗಳು ಹಾಗೂ ಅಧಿಕಾರಿಗಳೂ ಸಹ ಅಲ್ಲಿಗೆ ಕಾಲಿಡಲು ಹೆದರುತ್ತಾರೆ. ಈಗ ಅಲ್ಲಿಗೆ ತಗುಲಿರುವ ಶಾಪ(?)ವನ್ನು ಕಳೆಯಲು ಅಷ್ಟಮಂಗಳ ಪ್ರಶ್ನೆ ನಡೆಸಿ, ತೊಂದರೆಗಳನ್ನು ಪರಿಹರಿಸಿ ನಂತರ ಸದಾನಂದಗೌಡರನ್ನು ಚಾಮರಾಜನಗರಕ್ಕೆ ಕರೆಸುವ ಯೋಜನೆಗಳು ನಡೆಯುತ್ತಿದೆ. ಇದರ ಜೊತೆಗೇ ಕೇಳಿ ಬರುತ್ತಿರುವ ಇನ್ನೊಂದು ಸುದ್ದಿಯೆಂದರೆ ಶ್ರೀರಾಮುಲು ಅವರಿಂದ ಹೊಸ ಪಕ್ಷ ರಚನೆ. ಹೌದು, ಸುದ್ದಿಮೂಲಗಳ ಪ್ರಕಾರ ಶ್ರೀರಾಮುಲು ಅವರು ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಬಹುತೇಕ ಖಚಿತ. ಅಲ್ಲದೇ ಸಧ್ಯದಲ್ಲಿಯೇ ಹೊಸ ಪಕ್ಷವನ್ನೂ ಕಟ್ಟಲಿದ್ದಾರಂತೆ. ಅದು ನಿಜವೇ ಆದರೆ ಶ್ರೀರಾಮುಲು ಬೆಂಬಲಿಗ ಶಾಸಕರೂ ಕೂಡ ಬಿಜೆಪಿ ತೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾದಲ್ಲಿ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಡಿ.ವಿ.ಸದಾನಂದಗೌಡ ನೇತೃತ್ವದ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನದೊಂದು ವಿನಂತಿ, ನಿಮ್ಮ ಚಾಮರಾಜನಗರ ಭೇಟಿಯನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡಿ. ಒಂದು ವೇಳೆ ನೀವು ಚಾಮರಾಜನಗರಕ್ಕೆ ಭೇಟಿ ನೀಡಿದ ಸಮಯದಲ್ಲಿಯೇ ಶ್ರೀರಾಮುಲು ಮತ್ತವರ ಬೆಂಬಲಿಗ ಶಾಸಕರಿಂದ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ಆಗ ಚಾಮರಾಜನಗರದ ಬಗ್ಗೆ ಇರುವ ಮೂಢನಂಬಿಕೆ ಮತ್ತೊಮ್ಮೆ ನಿಜವಾಗುತ್ತದೆ. ಹಾಗಾಗದಿರಲಿ ಎನ್ನುವುದು ಎಲ್ಲರ ಆಶಯ.

Saturday, August 27, 2011
ಬ್ಲಾಗನ್ನು Export/Import ಮಾಡುವ ವಿಧಾನ
ಬ್ಲಾಗರ್'ನಲ್ಲಿರುವ ನಿಮ್ಮ ಬ್ಲಾಗಿನ ಅಷ್ಟೂ ಹೂರಣವನ್ನು ಬೇರೆಡೆಗೆ ಸ್ಥಳಾಂತರಿಸಲು ಸಾಧ್ಯವಿದೆ. ಹಾಗೆಯೇ ನಿಮ್ಮ ಬ್ಲಾಗಿನ ವಿಷಯಗಳನ್ನು ನಿಮ್ಮ ಕಂಪ್ಯೂಟರಿನಲ್ಲಿ ಉಳಿಸಿಕೊಳ್ಳುವುದರಿಂದ ಮುಂದೆಂದಾದರೂ ನಿಮ್ಮ ಬ್ಲಾಗಿನ ಬರಹಗಳು ಅಳಿಸಿಹೋದರೆ, ಅದನ್ನು ಬಳಸಿಕೊಂಡು ಪುನಃ ಮೊದಲಿನ ರೂಪಕ್ಕೇ ತರಬಹುದು. ಅದಕ್ಕಾಗಿ ಮೊದಲು Dashboard--> Settings-->Basic ಇಲ್ಲಿಗೆ ಹೋಗಿ, Export blog ಮೇಲೆ ಕ್ಲಿಕ್ ಮಾಡಿ.
ನಂತರ Download Blog ಒತ್ತಿ.
ನಂತರ Save File ಆರಿಸಿ OK ಒತ್ತಿ. ಎಲ್ಲಿ ಬೇಕೋ ಅಲ್ಲಿ ಸೇವ್ ಮಾಡಿಕೊಳ್ಳಿ.
ಈಗ ನಿಮ್ಮ ಬ್ಲಾಗಿನ ವಿವರಗಳಿರುವ xml ಫೈಲ್ ಕಂಪ್ಯೂಟರ್ನಲ್ಲಿ ಸೇವ್ ಆಗಿರುತ್ತದೆ.
ಈಗ ಅದನ್ನು ಬೇರೆ ಕಡೆ ಬಳಸುವುದು ಹೇಗೆ ಅಥವಾ restore ಮಾಡುವುದು ಹೇಗೆಂದು ನೋಡೋಣ.
Dashboard--> Settings-->Basic ಇಲ್ಲಿಗೆ ಹೋಗಿ, Import blog ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಬ್ಲಾಗಿನ ವಿವಗಳಿರುವ xml ಫೈಲನ್ನು ಓಪನ್ ಮಾಡಿ.
ಸುರಕ್ಷಾ ಸಂಕೇತವನ್ನು ಸರಿಯಾಗಿ ನಮೂದಿಸಿ, ಹಾಗೂ Automatically publish all imported posts ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಮತ್ತು Import Blog ಒತ್ತಿ.
ನಂತರ ನಿಮ್ಮ ಬ್ಲಾಗನ್ನು ನೋಡಿದರೆ ನೀವು ಮಾಡಿದ ಬದಲಾವಣೆ ಗೋಚರಿಸುತ್ತದೆ.

ಬ್ಲಾಗರ್
Friday, August 26, 2011
#Kannada
A hash (#) followed by the word is called the hashtag (#tag). Hash tag is commonly used in Twitter to tell people what we are tweeting about. And it is also helpful in tracking all tweets of a particular subject. For example, if you are tweeting about India, add a hashtag "#India" in your tweet. So if anybody clicks on #India, they'll get all tweets with the hashtag India including your tweet.
Now I've created a twitter account called @hashKannada. It retweets all the tweets with the hashtag Kannada (#Kannada) on twitter. It helps to track the tweets in/about Kannada. So if you want to see Kannada tweets or tweets with #Kannada, you can follow @hashKannada on Twitter!
Thank you.

Wednesday, August 24, 2011
ನಗುವುದಕ್ಕೆ ಇನ್ನೊಂದು ಹೊಸ ದಾರಿ.
ಇತ್ತೀಚೆಗೆ ಬೇಸರವಾದರೆ, ಒಂದಿಷ್ಟು ನಗು ತರಿಸಿಕೊಳ್ಳಲು ಹೊಸದೊಂದು ವಿಧಾನ ಕಂಡುಕೊಂಡಿದ್ದೇನೆ. ಅದೇನು ಅಂತ ಕೇಳಿದ್ರಾ? ಮೊನ್ನೆ ಮೊನ್ನೆ ಗೂಗಲ್ ಕಂಪೆನಿ ಭಾಷಾಂತರ ಸೇವೆಗೆ ಚಾಲನೆ ಕೊಡ್ತು ನೆನಪಿದೆಯೇ? ಆ ತಾಣಕ್ಕೆ ಹೋಗುತ್ತೇನೆ. ನಂತರ ಯಾವುದಾದರೂ ಕನ್ನಡ ಪಠ್ಯವನ್ನು ಇಂಗ್ಲೀಷಿಗೆ ಭಾಷಾಂತರ ಮಾಡುವುದಕ್ಕೆ ಹೇಳುತ್ತೇನೆ. ಮುಂದೇನೇಗುತ್ತೆ ಎನ್ನುವುದನ್ನು ನಾನು ಹೇಳುವುದಿಲ್ಲ. ಗೂಗಲ್ ಭಾಷಾಂತರವನ್ನು ನೀವೇ ಒಮ್ಮೆ ಪ್ರಯತ್ನಿಸಿ ನೋಡಿ. (ಗೂಗಲ್ ಭಾಷಾಂತರಕ್ಕೆ ಇಲ್ಲಿ ಕ್ಲಿಕ್ಕಿಸಿ.)
ಸ್ವಲ್ಪ ದಿನದ ಹಿಂದೆ "ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ" ಎನ್ನುವ ಒಂದು ಬರಹ ಬರೆದಿದ್ದೆ. ಅದರ ಇಂಗ್ಲೀಷ್ ಭಾಷಾಂತರದ ಚಿತ್ರವನ್ನು ಕೆಳಗೆ ಲಗತ್ತಿಸಿದ್ದೇನೆ. ಅದನ್ನು ಓದಿ, ಹಾಗೆಯೇ ಪ್ರಸ್ತುತ ಬ್ಲಾಗ್ ಬರಹವನ್ನೇ ಭಾಷಾಂತರಕ್ಕೆ ಕೊಟ್ಟು ನೋಡಿ. ಗೂಗಲ್ ಹೇಗೆ ಭಾಷಾಂತರ ಮಾಡುತ್ತೆ ಅಂತ ಗೊತ್ತಾಗುತ್ತದೆ.. :-)

Tuesday, August 23, 2011
How to tweet by sending a text message
You need not to have a computer with internet connection to post your tweets. Twitter allows you to tweet by sending a simple text message. What you've to do is just go to http://twitter.com/devices, register your mobile number and follow the instructions there. Then you can tweet using your simple mobile phone. But currently this service is supported by only 3 carriers in India, i.e Airtel, Videocon and Reliance. If you are not using the above connections, still you can update your tweets by using http://smstweet.in service. Go to http://www.smstweet.in/oauth/twitter/login, enter your twitter username and password if prompted, then press "Authorize app" button. (It will not ask for your twitter username and password if you're already logged in to twitter. So just press Authorize app button.) Then you'll be redirected back to http://smstweet.in.
Then press the profile link on the top of home page. Add your mobile number in the left column of your profile.
Done! Now you can tweet by sending the message to 09243000111. But your message should be prefixed with the command TWT. Eg: type "TWT <space> hello world!" from your mobile and send it to 09243000111. Your msg will be sent to your twitter profile. But don't forget to limit your tweets to 140 characters. :-)
The best part of smstweet.in is that you can add more than one mobile number in your profile. So if you have many connections, you can tweet by using any one of them. For more details visit, http://www.smstweet.in/usage and http://www.smstweet.in/faq
Thank you,
-Prasanna SP

Thursday, August 18, 2011
ಹೇರ್ ಕಟಿಂಗ್ ಶಾಪ್‌ನಲ್ಲಿ ಟಿವಿ..
ಸಾಮಾನ್ಯವಾಗಿ ಹೇರ್ ಕಟಿಂಗ್ ಶಾಪ್‌ಗಳಲ್ಲಿ ಟಿವಿ ಇಟ್ಟಿರ್ತಾರೆ. ಅದು ಬೆಳಿಗ್ಗೆಯಿಂದ ಸಂಜೆಯತನಕ ಉರಿಯುತ್ತಲೇ ಇರುತ್ತದೆ. ಒಬ್ಬರಿಗೆ ಕಟಿಂಗ್ ಮಾಡುವಾಗ ಇನ್ನೊಬ್ಬರು ಸುಮ್ಮನೆ ಕುಳಿತಿರಬೇಕಲ್ಲ, ಆವಾಗ ಅವರಿಗೆ ಬೇಸರ ಆಗದಿರಲಿ ಎನ್ನುವುದು ಅವರ ಉದ್ದೇಶ. ಆದರೆ ಇವತ್ತು ಒಂದು ಕಟಿಂಗ್ ಶಾಪಿಗೆ ಹೋಗಿದ್ದೆ. ಅಲ್ಲಿ ಟಿವಿಯೇನೋ ಇತ್ತು ಆದರೆ ಅದು ಆನ್ ಆಗಿರಲಿಲ್ಲ. ಯಾಕೆ ಇವತ್ತು ಟಿವಿ ಆನ್ ಮಾಡಿಲ್ಲ ಅಂತ ಕೇಳಿದೆ. ಅದಕ್ಕೆ ಅಂಗಡಿಯ ಮಾಲೀಕರು ಕೊಟ್ಟ ಉತ್ತರ ಅದ್ಭುತವಾಗಿತ್ತು. ಅದನ್ನು ಅವರ ಮಾತಿನಲ್ಲಿಯೇ ಕೇಳಿ..
“ಏನ್ಮಾಡೋದು ಸಾರ್, ಯಾವ್ದೂ ಸರಿಯಾದ ಚಾನಲ್ಲುಗಳೇ ಇಲ್ಲ. ಹಾಡಿನ ಚಾನಲ್ ಹಾಕೋಣ ಅಂದ್ರೆ ಈಗಿನ ಸಿನಿಮಾ ಹಾಡುಗಳು ನೋಡುವುದಿರಲಿ, ಕಣ್ಣುಮುಚ್ಚಿಕೊಂಡರೂ ಕೇಳುವುದಕ್ಕೆ ಆಗದಿರುವಷ್ಟು ಅಸಹ್ಯವಾಗಿರುತ್ತೆ. ನ್ಯೂಸ್ ಚಾನಲ್ ಹಾಕಿದ್ರೆ ಅದ್ರಲ್ಲಿ ಬರೀ ರಾಜಕೀಯನೇ ಬರುತ್ತೆ. ನಮ್ಮ ಶಾಪಿಗೆ ಬರೀ ಒಂದೇ ಪಾರ್ಟಿಯ ಜನ ಬರುವುದಿಲ್ಲವಲ್ಲ. ಟಿವಿಯಲ್ಲಿ ಬರುವ ರಾಜಕೀಯ ಸುದ್ದಿಗಳನ್ನು ನೋಡಿ ಶುರುವಾಗುವ ಅವರ ಚರ್ಚೆ, ಕೊನೆಕೊನೆಗೆ ಜಗಳದ ವರೆಗೂ ಹೋಗುತ್ತದೆ. ನಮ್ಮ ಅಂಗಡಿಗೆ ಬಂದು ಯಾವುದೋ ಕೆಲಸಕ್ಕೆ ಬಾರದ ವಿಷಯಕ್ಕೆ ಜಗಳ ಆಡ್ತಾರಲ್ಲಾ ಅಂತ ಬೇಜಾರಾಗುತ್ತೆ. ಇನ್ನು ಸಿನಿಮಾ ಹಾಕಿದ್ರೆ ಅದರದ್ದು ಇನ್ನೊಂದು ತೊಂದರೆ. ಸಿನಿಮಾ ಚೆನ್ನಾಗಿದ್ರೆ ಜನ ಕಟಿಂಗ್ ಆದ್ಮೇಲೂ ನೋಡ್ತಾ ಕೂರ್ತಾರೆ. ಇದರಿಂದ ಉಳಿದ ಗಿರಾಕಿಗಳು ಬಂದು ರಷ್ ಇದೆ ಅಂತ ವಾಪಾಸ್ ಹೋಗ್ತಾರೆ. ನಮಗೆ ತುಂಬಾ ಲಾಸ್ ಆಗುತ್ತೆ. ಅದಕ್ಕೇ ಈಗ ಟಿವಿ ಹಾಕೋದನ್ನೇ ಬಿಟ್ಟಿದ್ದೀನಿ. ಜನಗಳು ಒಂದು ಅರ್ಧ ಗಂಟೆನಾದ್ರೂ ನೆಮ್ಮದಿಯಿಂದ ಕೂರಲಿ. ಜೊತೆಗೆ ನನಗೆ ಕರೆಂಟ್ ಬಿಲ್ಲೂ ಉಳಿಯುತ್ತೆ, ಏನಂತೀರಿ?”
ಅವ್ರ ಮಾತು ನೂರಕ್ಕೆ ನೂರು ಸತ್ಯ ಅಂದುಕೊಂಡು ಅಲ್ಲೇ ಇದ್ದ ನ್ಯೂಸ್ ಪೇಪರ್ ತೆಗೆದುಕೊಂಡೆ. ಆಮೇಲೆ ಬೇಡ ಎನ್ನಿಸಿ ಅಲ್ಲೇ ಇಟ್ಟೆ...
Friday, August 12, 2011
php ಔಟ್ ಡೇಟೆಡ್ಡು!!
"ಹ್ಹೆ .. ಹ್ಹೆ .. ಬನ್ನಿ,, ಕೂತ್ಕೊಳ್ಳಿ. ಏನಾಗ್ಬೇಕಾಗಿತ್ತು?”
'Unix ಕ್ಲಾಸಿಗೆ ಸೇರ್ಬೇಕಿತ್ತು, ಫೀ ಎಷ್ಟಾಗುತ್ತೆ ಅಂತ ವಿಚಾರಿಸೋಕೆ ಬಂದೆ.'
"ಹ್ಹೆ.. ಹ್ಹೆ.. ನಮ್ಹತ್ರ ಈಗ ಯೂನಿಕ್ಸ್ ಸಿಸ್ಟಮ್ ಇಲ್ಲ. ಇನ್ನೊಂದು ಸ್ವಲ್ಪ ದಿನದಲ್ಲಿ ಬರುತ್ತೆ. ಅಲ್ಲೀ ತನ್ಕ ವಿಂಡೋಸ್ ಕ್ಲಾಸಿಗೆ ಸೇರ್ಕೊಳ್ಳಿ"
'ಬೇಡ ಅದೇನೂ ನನಗೆ ಉಪಯೋಗಕ್ಕೆ ಬರೋಲ್ಲ.'
"ಯಾಕೆ ಸಾರ್? ವಿಂಡೋಸ್ ಕಲೀದೆ, ಕಂಪ್ಯೂಟರ್ ಉಪಯೋಗ್ಸಕ್ಕೆ ಆಗಲ್ಲ. ನಮ್ಹತ್ರ ಸೇರಿದ್ರೆ ಒಂದು ತಿಂಗ್ಳಲ್ಲಿ ವಿಂಡೋಸ್ ಎಕ್ಸ್ಪರ್ಟ್ ಆಗ್ತೀರ.”
'ಬೇಡ, ಬೇರೆ ಯಾವ ಯಾವ ಕೋರ್ಸ್ ಇದೆ?'
"ಟ್ಯಾಲಿಗೆ ಸೇರ್ಕೊಳ್ಳಿ,, ಅದಕ್ಕೆ ಒಳ್ಳೇ ಸ್ಕೋಪ್ ಇದೆ. ಹಂಡ್ರೆಡ್ ಪರ್ಸೆಂಟ್ ಪ್ಲೇಸ್ಮೆಂಟ್ ಗ್ಯಾರೆಂಟಿ."
'ಇಲ್ಲ, ಅದು ನನ್ನ ಕ್ಷೇತ್ರವೇ ಅಲ್ಲ. ಬೇರೆ ಯಾವ್ದಾದ್ರೂ ಉಪಯೋಗಕ್ಕೆ ಬರುವಂತಹ ಕೋರ್ಸ್ ಇದ್ರೆ ಹೇಳಿ. Java ಹೇಳ್ಕೊಡ್ತೀರಾ?'
"ಜಾವಾ ಯಾಕೆ ಸಾರ್? Visual Basicಗೆ ಸೇರಿಕೊಳ್ಳಿ, ತುಂಬಾ ಈಸಿಯಾಗಿ ಕಲೀಬೋದು.”
'Visual Basic ಬೇಡ, ಹೋಗ್ಲಿ phpನಾದ್ರೂ ಹೇಳಿಕೊಡ್ತೀರಾ?'
"php ಎಲ್ಲಾ outdated ಸಾರ್! MS FrontPage ಕಲೀರಿ, ಈಗ ಎಲ್ರೂ ಅದನ್ನೇ ಉಪಯೋಗಿಸೋದು.”
’(outdated ಯಾರು ಅಂತ ಗೊತ್ತಾಯ್ತು ಬಿಡಿ!)’
'ಸರಿ, ಇದರಲ್ಲಿ ನನಗೆ ಬೇಕಾದ ಕೋರ್ಸ್ ಯಾವ್ದೂ ಇಲ್ಲ. ಇನ್ನೊಂದ್ಸಲ ಬರ್ತೀನಿ'
"ಯಾವ್ದಾದ್ರೂ ಕೋರ್ಸಿಗೆ ಸೇರ್ಕೊಳ್ಳಿ ಸಾರ್, ಬೇಕಿದ್ರೆ ಫೀಸ್ ಸ್ವಲ್ಪ ಕಡ್ಮೆ ಮಾಡೋಣ. ಈ ಎಲ್ಲಾ ಕೋರ್ಸಿಗೆ ಭಾರೀ ಸ್ಕೋಪ್ ಇದೆ."
'ಧನ್ಯವಾದ, ಇನ್ನೊಮ್ಮೆ ಬರುತ್ತೇನೆ’..
:-)
Tuesday, August 2, 2011
BSNL BroadBand issues in Linux
Some people complains that BSNL Broadband doesn't work properly in Linux. I've noticed that with the default settings, it takes longer time load some websites. (like ಕಣಜ). But it is not Linux operating system's problem. The problem is with BSNL's name server. So the best solution for this is to use Google Public DNS (8.8.8.8) or Open DNS (4.2.2.2). Here in my system I use Google Public DNS as primary and OpenDNS as secondary servers. It works much better than BSNL name server.
(Before doing this changes, I suggest you to write down your current DNS server address so that if anything goes wrong, you can restore the previous settings.)
To change the current settings, Go to Preferences ---> Network Connections. Select your connection and press Edit. Type your password if asked. Then hit IPv4 or IPv6 tab whichever is used. Select Automatic (PPPoE) address only in the method. In the DNS servers column, type 8.8.8.8, 4.2.2.2 (GoogleDNS and OpenDNS separated by comma.) Then click Save. Close Network Connections.
Now connect to Internet and try to load sites which were not opening before. If it works, Great! enjoy the BroadBand. Or if you still having the same problem, restore the previous settings and contact your system administrator.

Monday, August 1, 2011
Dreams..
Akira Kurosawa's Dreams is one of my favorite movies. It has seven parts (7 dreams). The recent nuclear crisis happened in Fukushima, Japan made me to remember one of those Dreams "Mount Fuji in Red". Coincidentally he was also from japan. I found that part in YouTube, and you can watch it below. But don't miss an opportunity to watch the whole movie..
Friday, July 29, 2011
My Documents ಫೋಲ್ಡರಿನ target ಬದಲಿಸುವುದು
ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ ಹಾನಿಯಾದರೆ "My Documents" ಫೋಲ್ಡರಿನರುವ ದಾಖಲೆಗಳನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ನಿಮಗೆ "My Documents"ನಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವ ಅಭ್ಯಾಸವಿದ್ದರೆ, ಅದರ Target ಬದಲಾಯಿಸಿಕೊಳ್ಳುವುದು ಒಳ್ಳೆಯದು.
ಅದಕ್ಕಾಗಿ ಮೊದಲು "My Documents" ಮೇಲೆ ರೈಟ್ ಕ್ಲಿಕ್ ಮಾಡಿ, Properties ಆರಿಸಿ.
ನಂತರ Target ಎಂಬಲ್ಲಿ ಹೊಸ ವಿಳಾಸ ಕೊಡಿ. ಅದು ಕಷ್ಟವಾದರೆ ಅಲ್ಲೇ ಕೆಳಗಿರುವ "Move" ಬಟನ್ ಒತ್ತಿ. ನಂತರ ಬೇರೆ ಡ್ರೈವ್ ಸೆಲೆಕ್ಟ್ ಮಾಡಿ, ಉದಾಹರಣೆಗೆ D: "Make New Folder" ಒತ್ತಿ.
ಅದಕ್ಕೆ "My Documents" ಅಂತ ಹೆಸರು ಕೊಟ್ಟು "OK" ಬಟನ್ ಒತ್ತಿ.
ಮತ್ತೆ ಕೆಳಗೆ "OK" ಅಥವಾ "Apply" ಬಟನ್ ಒತ್ತಿ. ನಂತರ ಈಗಿರುವ ನಿಮ್ಮ ದಾಖಲೆಗಳನ್ನು ಹೊಸ ಫೋಲ್ಡರಿಗೆ ಕಳುಹಿಸಬೇಕೇ ಎಂದು ಕೇಳುತ್ತದೆ. ಆಗ Yes ಒತ್ತಿ. ನಂತರ ನಿಮ್ಮ ಎಲ್ಲಾ ದಾಖಲೆಗಳನ್ನು ಹೊಸ ಫೋಲ್ಡರಿಗೆ ಸ್ಥಳಾಂತರಿಸುತ್ತದೆ. (ಅಲ್ಲಿರುವ ದಾಖಲೆಗಳ ಗಾತ್ರಕ್ಕನುಗುಣವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ).
ಈಗ ನೀವು "My Documents" ಸೇವ್ ಮಾಡುವ ಎಲ್ಲಾ ದಾಖಲೆಗಳೂ ಬೇರೆ ಡ್ರೈವ್‌ನಲ್ಲಿರುತ್ತದೆ. ಆದ್ದರಿಂದ ಒಂದು ವೇಳೆ ವಿಂಡೋಸ್ ಕೈಕೊಟ್ಟರೂ ನಿಮ್ಮ ದಾಖಲೆಗಳು ಸುರಕ್ಷಿತವಾಗಿರುತ್ತದೆ.

ವಿಂಡೋಸ್
Tuesday, July 26, 2011
ಶ್ರೀ ಗುರು ರಾಘವೇಂದ್ರ ಸ್ತೋತ್ರ
ಶ್ರೀ ಗುರು ಜೈ ಗುರು ರಾಘವೇಂದ್ರ
ಶ್ರಿತ ಜನ ಪಾಲಕ ರಾಘವೇಂದ್ರ ..... ||ಪ||
ದೀನ ದಯಾಪರ ರಾಘವೇಂದ್ರ
ಜ್ಞಾನ ನಿಧಿಯೇ ಶ್ರೀ ರಾಘವೇಂದ್ರ
ಗಾನ ಲೋಲ ಶ್ರೀ ರಾಘವೇಂದ್ರ
ಗಾನ ವಿಶಾರದ ಶ್ರೀ ರಾಘವೇಂದ್ರ .... ||1||
ದ್ವಿಜವರ ವಂದಿತ ರಾಘವೇಂದ್ರ
ಸುಜನರ ಪಾಲಕನೆ ರಾಘವೇಂದ್ರ
ಕಮನೀ ಯಾನನ ರಾಘವೇಂದ್ರ
ವಿಮಲ ಮಾನಸನೆ ರಾಘವೇಂದ್ರ ..... ||2||
ವೀಣಾ ಚತುರನೆ ರಾಘವೇಂದ್ರ
ವೇಣುಗಾನ ಪ್ರಿಯ ರಾಘವೇಂದ್ರ
ಪರಿಮಳ ರಚಿಸಿದ ರಾಘವೇಂದ್ರ
ಪರಿಹರಿಸೈಭವ ರಾಘವೇಂದ್ರ ....... ||3||
ಪ್ರಹ್ಲಾದಂಶನೆ ರಾಘವೇಂದ್ರ
ಆಹ್ಲಾದವ ಕೊಡು ರಾಘವೇಂದ್ರ
ವಾಸುಕಿಯೆಂಶನ ರಾಘವೇಂದ್ರ
ವ್ಯಾಸ ಯತಿಯು ನೀನೇ ರಾಘವೇಂದ್ರ ... ||4||
ಶ್ರೀ ಸುಧೀಂದ್ರ ಸುತ ರಾಘವೇಂದ್ರ
ದಾಶರಥಿಯ ಪ್ರಿಯ ರಾಘವೇಂದ್ರ
ಮೂಲ ರಾಮಾರ್ಚಕ ರಾಘವೇಂದ್ರ
ಬಾಲನ ಪೊರೆದೆಯೋ ರಾಘವೇಂದ್ರ .... ||5||
ಕಾಮಿತ ಫಲದನೆ ರಾಘವೇಂದ್ರ
ಪ್ರೇಮವಿದೆಯೆನ್ನೊಳು ರಾಘವೇಂದ್ರ
ಗಂಧಲೇಪ ಪ್ರಿಯ ರಾಘವೇಂದ್ರ
ಸುಂದರ ಮೂರುತಿ ರಾಘವೇಂದ್ರ ...... ||6||
ತಂದೆ ತಾಯಿ ನೀನೆ ರಾಘವೇಂದ್ರ
ಕಂದನೆಂದು ತಿಳಿ ರಾಘವೇಂದ್ರ
ಮೂಢಗಿತ್ತೆ ಜ್ಞಾನ ರಾಘವೇಂದ್ರ
ಅವನಾದಿಗೊಡೆಯನಾದ ರಾಘವೇಂದ್ರ .... ||7||
ಭಕ್ತ ಜನಾಶ್ರಯ ರಾಘವೇಂದ್ರ
ಶಕ್ತ ನೀನೆ ಸರಿ ರಾಘವೇಂದ್ರ
ಸಾಸಿರ ವಂದ್ಯನೆ ರಾಘವೇಂದ್ರ
ಕ್ಲೇಶದರಿಸಿ ಪೊರೆ ರಾಘವೇಂದ್ರ ....... ||8||
ಮಂತ್ರಾಲಯ ದೊರೆ ರಾಘವೇಂದ್ರ
ಸಂತಾಪವ ಕಳೆ ರಾಘವೇಂದ್ರ
ಸರ್ವಶಕ್ತ ನೀನೆ ರಾಘವೇಂದ್ರ
ಸರ್ವಜನ ಪ್ರಿಯ ರಾಘವೇಂದ್ರ ....... ||9||
ಶಾಂತ ಮೂರ್ತಿ ಶ್ರೀ ರಾಘವೇಂದ್ರ
ಭ್ರಾಂತಿಯ ಬಿಡಿಪುದು ರಾಘವೇಂದ್ರ
ಕೃಷ್ಣಮೂರ್ತಿ ಶ್ರೀ ರಾಘವೇಂದ್ರ
ಸಾಷ್ಠಾಂಗವು ನಿನಗೆ ರಾಘವೇಂದ್ರ ..... ||10||
ಅಗಣಿತ ಮಹಿಮನೆ ರಾಘವೇಂದ್ರ
ಸುಗುಣ ಗುಣಾರ್ಣವ ರಾಘವೇಂದ್ರ
ಶರಣರ ಸುರವರ ರಾಘವೇಂದ್ರ
ಪರಮ ಪುರುಷಪೊರೆ ರಾಘವೇಂದ್ರ ..... ||11||
ಪತಿತ ಪಾವನನೆ ರಾಘವೇಂದ್ರ
ಸತತ ಭಜಿತಪೊರೆ ರಾಘವೇಂದ್ರ
ಕರುಣಿಗಳರಸನೆ ರಾಘವೇಂದ್ರ
ವರಗುರು ರಾಜನೆ ರಾಘವೇಂದ್ರ ...... ||12||
ಚಿಂಚಿತಾರ್ಥಪ್ರದ ರಾಘವೇಂದ್ರ
ಶ್ರೀಕಾಂತ ವಿಠಲನಾಥ ರಾಘವೇಂದ್ರ
ಜಯ ಮಂಗಳ ಗುರು ರಾಘವೇಂದ್ರ
ಜಯ ಶುಭ ಮಂಗಳ ರಾಘವೇಂದ್ರ ..... ||13||
-ಸಂಗ್ರಹ
ಶ್ರಿತ ಜನ ಪಾಲಕ ರಾಘವೇಂದ್ರ ..... ||ಪ||
ದೀನ ದಯಾಪರ ರಾಘವೇಂದ್ರ
ಜ್ಞಾನ ನಿಧಿಯೇ ಶ್ರೀ ರಾಘವೇಂದ್ರ
ಗಾನ ಲೋಲ ಶ್ರೀ ರಾಘವೇಂದ್ರ
ಗಾನ ವಿಶಾರದ ಶ್ರೀ ರಾಘವೇಂದ್ರ .... ||1||
ದ್ವಿಜವರ ವಂದಿತ ರಾಘವೇಂದ್ರ
ಸುಜನರ ಪಾಲಕನೆ ರಾಘವೇಂದ್ರ
ಕಮನೀ ಯಾನನ ರಾಘವೇಂದ್ರ
ವಿಮಲ ಮಾನಸನೆ ರಾಘವೇಂದ್ರ ..... ||2||
ವೀಣಾ ಚತುರನೆ ರಾಘವೇಂದ್ರ
ವೇಣುಗಾನ ಪ್ರಿಯ ರಾಘವೇಂದ್ರ
ಪರಿಮಳ ರಚಿಸಿದ ರಾಘವೇಂದ್ರ
ಪರಿಹರಿಸೈಭವ ರಾಘವೇಂದ್ರ ....... ||3||
ಪ್ರಹ್ಲಾದಂಶನೆ ರಾಘವೇಂದ್ರ
ಆಹ್ಲಾದವ ಕೊಡು ರಾಘವೇಂದ್ರ
ವಾಸುಕಿಯೆಂಶನ ರಾಘವೇಂದ್ರ
ವ್ಯಾಸ ಯತಿಯು ನೀನೇ ರಾಘವೇಂದ್ರ ... ||4||
ಶ್ರೀ ಸುಧೀಂದ್ರ ಸುತ ರಾಘವೇಂದ್ರ
ದಾಶರಥಿಯ ಪ್ರಿಯ ರಾಘವೇಂದ್ರ
ಮೂಲ ರಾಮಾರ್ಚಕ ರಾಘವೇಂದ್ರ
ಬಾಲನ ಪೊರೆದೆಯೋ ರಾಘವೇಂದ್ರ .... ||5||
ಕಾಮಿತ ಫಲದನೆ ರಾಘವೇಂದ್ರ
ಪ್ರೇಮವಿದೆಯೆನ್ನೊಳು ರಾಘವೇಂದ್ರ
ಗಂಧಲೇಪ ಪ್ರಿಯ ರಾಘವೇಂದ್ರ
ಸುಂದರ ಮೂರುತಿ ರಾಘವೇಂದ್ರ ...... ||6||
ತಂದೆ ತಾಯಿ ನೀನೆ ರಾಘವೇಂದ್ರ
ಕಂದನೆಂದು ತಿಳಿ ರಾಘವೇಂದ್ರ
ಮೂಢಗಿತ್ತೆ ಜ್ಞಾನ ರಾಘವೇಂದ್ರ
ಅವನಾದಿಗೊಡೆಯನಾದ ರಾಘವೇಂದ್ರ .... ||7||
ಭಕ್ತ ಜನಾಶ್ರಯ ರಾಘವೇಂದ್ರ
ಶಕ್ತ ನೀನೆ ಸರಿ ರಾಘವೇಂದ್ರ
ಸಾಸಿರ ವಂದ್ಯನೆ ರಾಘವೇಂದ್ರ
ಕ್ಲೇಶದರಿಸಿ ಪೊರೆ ರಾಘವೇಂದ್ರ ....... ||8||
ಮಂತ್ರಾಲಯ ದೊರೆ ರಾಘವೇಂದ್ರ
ಸಂತಾಪವ ಕಳೆ ರಾಘವೇಂದ್ರ
ಸರ್ವಶಕ್ತ ನೀನೆ ರಾಘವೇಂದ್ರ
ಸರ್ವಜನ ಪ್ರಿಯ ರಾಘವೇಂದ್ರ ....... ||9||
ಶಾಂತ ಮೂರ್ತಿ ಶ್ರೀ ರಾಘವೇಂದ್ರ
ಭ್ರಾಂತಿಯ ಬಿಡಿಪುದು ರಾಘವೇಂದ್ರ
ಕೃಷ್ಣಮೂರ್ತಿ ಶ್ರೀ ರಾಘವೇಂದ್ರ
ಸಾಷ್ಠಾಂಗವು ನಿನಗೆ ರಾಘವೇಂದ್ರ ..... ||10||
ಅಗಣಿತ ಮಹಿಮನೆ ರಾಘವೇಂದ್ರ
ಸುಗುಣ ಗುಣಾರ್ಣವ ರಾಘವೇಂದ್ರ
ಶರಣರ ಸುರವರ ರಾಘವೇಂದ್ರ
ಪರಮ ಪುರುಷಪೊರೆ ರಾಘವೇಂದ್ರ ..... ||11||
ಪತಿತ ಪಾವನನೆ ರಾಘವೇಂದ್ರ
ಸತತ ಭಜಿತಪೊರೆ ರಾಘವೇಂದ್ರ
ಕರುಣಿಗಳರಸನೆ ರಾಘವೇಂದ್ರ
ವರಗುರು ರಾಜನೆ ರಾಘವೇಂದ್ರ ...... ||12||
ಚಿಂಚಿತಾರ್ಥಪ್ರದ ರಾಘವೇಂದ್ರ
ಶ್ರೀಕಾಂತ ವಿಠಲನಾಥ ರಾಘವೇಂದ್ರ
ಜಯ ಮಂಗಳ ಗುರು ರಾಘವೇಂದ್ರ
ಜಯ ಶುಭ ಮಂಗಳ ರಾಘವೇಂದ್ರ ..... ||13||
-ಸಂಗ್ರಹ
Friday, July 22, 2011
ತುಳು ನಾಡಿನಲ್ಲಿ..
ದಕ್ಷಿಣ ಕನ್ನಡ ಜಿಲ್ಲೆಗೆ ಹೋದ್ರೆ ಯಾವ್ದೋ ಬೇರೆ ರಾಜ್ಯಕ್ಕೆ ಹೋದಂತೆ ಅನ್ಸುತ್ತೆ. ಯಾಕಂದ್ರೆ ಅಲ್ಲಿ ಎಲ್ರೂ ತುಳು ಭಾಷೆಯಲ್ಲೇ ಮಾತಾಡ್ತಾರೆ. ನಾವಾಗಿಯೇ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ ಮಾತ್ರ ಅವ್ರು ಕನ್ನಡದಲ್ಲಿ ಮಾತಾಡ್ತಾರೆ. ಅದರಲ್ಲೂ ಎಷ್ಟೋ ಜನರಿಗೆ ಕನ್ನಡ ಸರಿಯಾಗಿ ಬರುವುದೇ ಇಲ್ಲ. ನನಗಂತೂ ತುಳು ಸ್ವಲ್ಪವೂ ಬರುವುದಿಲ್ಲ. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಭಾಷೆಯ ತೊಡಕಿನಿಂದ ಸ್ವಲ್ಪ ಇರುಸು ಮುರುಸಾಗಿದ್ದು ನಿಜ. ಆದರೆ ಕನ್ನಡದಲ್ಲಿಯೇ ಮಾತನಾಡಿಸಿದ ವ್ಯಕ್ತಿಗಳೂ ಸಿಕ್ಕರು. ಅವರೇ ಸರ್ಕಾರಿ ಬಸ್ಸಿನ ಕಂಡಕ್ಟರ್‌ಗಳು! ಅಲ್ಲಿಂದ ಹೊರಡುವ ದಿನ ಬಸ್ಸಿನಲ್ಲಿ ಒಬ್ಬ ನನ್ನ ಪಕ್ಕವೇ ಬಂದು ಕುಳಿತುಕೊಂಡ. ಆಮೇಲೆ ನನ್ನ ಜೊತೆ ತುಳುವಿನಲ್ಲಿಯೇ ಮಾತಾಡತೊಡಗಿದ. ನನಗೆ ಏನೂ ಅರ್ಥ ಆಗ್ಲಿಲ್ಲ. ಆದ್ರೂ ಎಲ್ಲದಕ್ಕೂ ಹ್ಞೂಂ.. ಹ್ಞೂಂ.. ಅಂದೆ. ಸುಮಾರು ಹೊತ್ತು ಹಾಗೇ ಮಾತಾಡ್ತಿದ್ದ. ನನಗೂ ಬೇಜಾರಾಗಿ ನಿದ್ದೆ ಬರುತ್ತಿರುವಂತೆ ಕಣ್ಣು ಮುಚ್ಚಿಕೊಂಡು ಕುಳಿತೆ. ಆಮೇಲೆ ಅವನು ಎದ್ದುಹೋಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದವನ ಹತ್ತಿರ ಮಾತನಾಡೋಕೆ ಶುರು ಮಾಡಿದ. ಸಧ್ಯ ಕೊರೆತ ಕಡಿಮೆಯಾಯ್ತಲ್ಲಾ ಅಂತ ಅಂದುಕೊಂಡು ನಿದ್ದೆ ಮಾಡಿದೆ. :)
Thursday, March 24, 2011
ಲಿನಕ್ಸಿನಲ್ಲಿ Force Quitನ ಉಪಯೋಗ
ಲಿನಕ್ಸಿನಲ್ಲಿ ಯಾವುದಾದರೂ ಅಪ್ಲಿಕೇಷನ್ ಹ್ಯಾಂಗ್ ಆಗಿದ್ದರೆ ಅಥವಾ ಆ ತಂತ್ರಾಂಶವನ್ನು ಮುಚ್ಚಲು ಆಗದಿರುವ ಸಂದರ್ಭದಲ್ಲಿ Force Quitನ್ನು ಬಳಸಬಹುದು. ಇದು respond ಮಾಡದಿರುವ ತಂತ್ರಾಂಶಗಳನ್ನು ಬಲವಂತವಾಗಿ ಮುಚ್ಚುತ್ತದೆ. Force Quitನ ಶಾರ್ಟ್ ಕಟ್‌ನ್ನು Panelನಲ್ಲಿ ಇಟ್ಟುಕೊಂಡಿರುವುದು ಒಳ್ಳೆಯದು. ಕೆಲವು ಸಂದರ್ಭದಲ್ಲಿ ಅದು ಉಪಯೋಗಕ್ಕೆ ಬರುತ್ತದೆ. ಅದಕ್ಕಾಗಿ ಮೊದಲು ಮೇಲಿನ Panel ಮೇಲೆ ರೈಟ್ ಕ್ಲಿಕ್ ಮಾಡಿ. [ನಾನು Application, System ಇತ್ಯಾದಿ ಇರುವ ಮೇಲಿನ Panelನ್ನೂ ಕೆಳಗೇ ಇಟ್ಟುಕೊಂಡಿದ್ದೇನೆ. ನಿಮಗೆ ಯಾವ Panelನಲ್ಲಿ Force Quitನ ಶಾರ್ಟ್ ಕಟ್ ಇದ್ದರೆ ಸುಲಭವೆನಿಸುತ್ತದೆಯೋ ಅದರ ಮೇಲೆ ರೈಟ್ ಕ್ಲಿಕ್ ಮಾಡಿ] ನಂತರ Add to Panel.. ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಸ್ವಲ್ಪ ಕೆಳಗೆ Force Quit ಇರುತ್ತದೆ, (ಸಿಗದಿದ್ದರೆ Find an item to add to the panel: ಎನ್ನುವಲ್ಲಿ Force Quit ಎಂದು ಟೈಪ್ ಮಾಡಿ, ಅದು ಹುಡುಕಿಕೊಡುತ್ತದೆ) ಅದರ ಮೇಲೆ ಕ್ಲಿಕ್ ಮಾಡಿ Add ಬಟನ್ ಒತ್ತಿ. ನಂತರ Close ಒತ್ತಿ.
ಈಗ Panelನಲ್ಲಿ Force Quitನ ಶಾರ್ಟ್ ಕಟ್ ಬಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ನಂತರ Click on a windows to force the application to quit. To cancel press <ESC> ಎಂದು ತೋರಿಸುತ್ತದೆ ಮತ್ತು ಕರ್ಸರ್ ಪ್ಲಸ್ ಚಿಹ್ನೆಗೆ ಬದಲಾಗುತ್ತದೆ. ಆಗ ನೀವು ಮುಚ್ಚಲು ಬಯಸುವ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ. (ಅಥವಾ Force Quit ಉಪಯೋಗಿಸುವುದು ಬೇಡ ಅನ್ನಿಸಿದಲ್ಲಿ ಎಸ್ಕೇಪ್ ಬಟನ್ ಒತ್ತಿ.)
ಕೊನೆಯ ಬಾರಿ ದೃಢಪಡಿಸಲು ನಿಮ್ಮ ಅನುಮತಿ ಕೇಳುತ್ತದೆ. ಆಗ Force Quit ಬಟನ್ ಒತ್ತಿ. ಅಲ್ಲಿಗೆ ತೊಂದರೆ ಕೊಡುತ್ತಿರುವ ಅಪ್ಲಿಕೇಶನ್ ಕ್ಲೋಸ್ ಆಗುತ್ತೆ. ಆದರೆ ನೆನಪಿಡಿ, Force Quit ಉಪಯೋಗಿಸಿದರೆ, ಆ ಅಪ್ಲಿಕೇಶನ್‌ನಲ್ಲಿ ನೀವು ಸೇವ್ ಮಾಡಿರದ ಅಷ್ಟೂ ಕಂಟೆಂಟ್‌ನ್ನು ಕಳೆದುಕೊಳ್ಳುತ್ತೀರಿ.

ಉಬುಂಟು,
ಕನ್ನಡ,
ತಂತ್ರಜ್ಞಾನ,
ಲಿನಕ್ಸ್
Monday, March 14, 2011
ನನ್ನ ಕಂಪ್ಯೂಟರ್ ಹಾಳಾಗಿದೆ, ಸ್ವಲ್ಪ ನೋಡ್ತೀಯಾ..?
ಹಲೋ.. ಯಾರು ಪ್ರಸನ್ನನಾ?
ಹೌದು.
ನಾನು ಗೋಪಾಲರಾವ್ ಮಾತಾಡುದು..
ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ?
ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ.
ಯಾಕೆ? ಏನಾಗಿದೆ?
ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ?
ಸರಿ, ನಾಳೆ ಬಂದ್ರೆ ಆಗುತ್ತಾ?
ಆಯ್ತು ಪರ್ವಾಗಿಲ್ಲ, ನಿಂಗೆ ಟೈಮಾದಾಗ ಬಾ.
ಹಾಗಾದ್ರೆ ನಾಳೆ ಸಂಜೆ ಬರ್ತೀನಿ.
ಆಯ್ತು, ಹಂಗಾದ್ರೆ ಫೋನ್ ಇಡ್ತೀನಿ.
*******************
(ಗೋಪಾಲರಾಯರ ಮನೆಯಲ್ಲಿ)
ಪ್ರಸನ್ನ: ಗೋಪಾಲರಾಯರು ಮನೇಲಿದಾರಾ? ಕಂಪ್ಯೂಟರ್ ಹಾಳಾಗಿದೆ ಅಂತಿದ್ರು, ನೋಡೋಣಾಂತ ಬಂದೆ.
ಸುನಂದಮ್ಮ: ರೀ, ಪ್ರಸನ್ನ ಬಂದಿದಾನೆ. ಅದೆಂತದೋ ಕಂಪೀಟ್ರು ಹಾಳಾಗಿದೆ ಅಂತಿದ್ರಲ್ಲ, ನೋಡ್ತಾನಂತೆ.
ರಾಯರು: ನಾನೇ ಬರಕ್ಕೆ ಹೇಳಿದ್ದೆ. ಹೋಗಿ ಕಾಫಿ ಮಾಡ್ಕಂಡ್ ಬಾ.
ಪ್ರ: ಕಂಪ್ಯೂಟರ್ ಎಲ್ಲಿದೆ?
ರಾಯರು: ಒಳ್ಗಿದೆ, ಬಾ.
ಪ್ರ: ಏನು ತೊಂದ್ರೆ ಆಗ್ತಿದೆ?
ರಾ: ಪದೇ ಪದೇ ನಿಂತು ಹೋಗುತ್ತೆ. ಮೌಸು ಅಲ್ಲಾಡ್ಸಿದ್ರೂ ಆ ಬಾಣ ಅಲ್ಲಾಡಲ್ಲ. ಆಮೇಲೆ ಸ್ಟಾರ್ಟ್ ಬಟನ್‌ನಲ್ಲಿರೋ ಸುಮಾರು ಐಕಾನ್ಗಳು ಓಪನ್ನೇ ಆಗಲ್ಲ. ಇನ್ನೂ ಎಂತೆಂತದೋ ಆಗುತ್ತೆ. ಸುಮಾರು ಸಲ ಹಿಂಗೇ ಆಗಿತ್ತು. ಪ್ರತೀ ಸಲ ನಾಗೇಶ ಬಂದು ಸರಿ ಮಾಡಿ ನೂರುಪಾಯಿ ಇಸ್ಕಂಡು ಹೋಗ್ತಿದ್ದ. ಮತ್ತೆ ಇನ್ನೊಂದೆರ್ಡು ತಿಂಗ್ಳು ಆದ್ಮೇಲೆ ಇದೇ ರೀತಿ ಆಗ್ತಿತ್ತು. ಅವ್ನಿಗೆ ನೂರುಪಾಯಿ ಕೊಟ್ಟೂ ಕೊಟ್ಟೂ ಸಾಕಾಯ್ತು ಮಾರಾಯ. ಕೇಳಿದ್ರೆ ಕಂಪ್ಯೂಟ್ರು ಇಟ್ಕಂಡ್ಮೇಲೆ ಹಾಳು ಆಗ್ತನೇ ಇರ್ತದೆ, ಅದಕ್ಕೆಲ್ಲಾ ಏನೂ ಮಾಡಕ್ಕಾಗಲ್ಲ ಅಂತಾನೆ. ನೀನು ಬಿಟ್ಟಿಯಾಗಿ ರಿಪೇರಿ ಮಾಡಿಕೊಡ್ತಿ ಅಂತ ಶ್ರೀಧರ ಹೇಳ್ದ. ಅದ್ಕೇ ನಿಂಗೆ ಬರಕ್ಕೆ ಹೇಳ್ದೆ.
ಪ್ರಸನ್ನ: ಇದು, ವಿಂಡೋಸ್ ಹಾಳಾಗಿದೆ. ರಿಪೇರಿ ಮಾಡ್ಬೇಕು. ವಿಂಡೋಸ್ ಇನ್ಸ್ಟಾಲರ್ ಸಿಡಿ ಕೊಡಿ.
ರಾಯರು: ನನ್ಹತ್ರ ಅದೆಲ್ಲ ಎಂತ ಇಲ್ಲ ಮಾರಾಯ.
ಪ್ರ: ಹಾಗಾದ್ರೆ ನೀವು ದುಡ್ಡು ಕೊಟ್ಟು ವಿಂಡೋಸ್ ತಗೊಳ್ಲಿಲ್ವಾ?
ರಾ: ಇಲ್ಲ, ನಂಗೆ ಅದೆಲ್ಲಾ ಎಂತದೂ ಗೊತ್ತಿಲ್ಲ. ನಾಗೇಶನೇ ಕಂಪ್ಯೂಟ್ರು ತಂದಿಟ್ಟು ಅದನ್ನೆಲ್ಲಾ ಹಾಕಿಟ್ಟು ಹೋಗಿದ್ದ.
ಪ್ರಸನ್ನ: ನಾಗೇಶನ ಹತ್ರ ಇರೋದು ನಕಲಿ ವಿಂಡೋಸ್, ಅಂದ್ರೆ ಕದ್ದ ಮಾಲಿಗೆ ಸಮ. ಪೈರಸಿ ಮಾಡೋದು, ಹಾಗೂ ನಕಲಿ ವಿಂಡೋಸ್ ಬಳ್ಸೋದು ಅಪರಾಧ. ಈ ವಿಷ್ಯ ಅದನ್ನು ತಯಾರು ಮಾಡಿರೋ ಕಂಪ್ನಿಗೆ ಗೊತ್ತಾದ್ರೆ ಅವ್ನ ಜೊತೆ ನಿಮ್ಗೂ ಶಿಕ್ಷೆ ಆಗುತ್ತೆ. ಇದನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಿ. ಒಂದು ಏಳೆಂಟು ಸಾವ್ರ ರೂಪಾಯಿ ಖರ್ಚಾಗ್ಬೋದು. ಅಥ್ವಾ ನನ್ಹತ್ರ ಲಿನಕ್ಸ್ ಇದೆ. ಅದನ್ನು ಬೇಕಾದ್ರೆ ಇನ್ಸ್ಟಾಲ್ ಮಾಡಿ ಕೊಡ್ತೀನಿ. ಅದು ಫ್ರೀಯಾಗಿ ಸಿಗುತ್ತೆ.
ರಾಯರು: ಅಷ್ಟೆಲ್ಲಾ ಖರ್ಚಾಗುದಾದ್ರೆ ಸಧ್ಯಕ್ಕೆ ಬೇಡ ಮಾರಾಯ. ಇನ್ನೊಂದ್ಸಲ ನೋಡೋಣ. ಆ ಲೀನಕ್ಸೆಲ್ಲಾ ನಂಗೆ ಗೊತ್ತಾಗಲ್ಲ. ನಂಗೆ ಅದೇ ಸುಲಭ ಆಗ್ತಿತ್ತು.
ಪ್ರ: ಇಲ್ಲ ರಾಯರೇ, ಲಿನಕ್ಸ್ ಬಳ್ಸೋದು ಕಷ್ಟ ಏನಲ್ಲಾ. ಸ್ವಲ್ಪ ಅಭ್ಯಾಸ ಆದ್ರೆ ಆಮೇಲೆ ಉಪಯೋಗ್ಸದು ಸುಲಭ ಆಗುತ್ತೆ.
ರಾ: ಪರ್ವಾಗಿಲ್ಲ, ನಂಗೆ ಈಗೇನೂ ಕಂಪ್ಯೂಟ್ರು ಬೇಕೇ ಬೇಕೂಂತ ಇಲ್ಲ. ಹಿಂಗೇ ಇರ್ಲಿ ಇನ್ಯಾವಾಗಾದ್ರೂ ಸರಿ ಮಾಡಿದ್ರಾಯ್ತು.
ಪ್ರಸನ್ನ: ಸರಿ ರಾಯರೇ, ನಾನಿನ್ನು ಬರ್ತೀನಿ. ಕತ್ಲಾದ್ರೆ ಸೈಕಲ್ ಹೊಡ್ಯೋದು ಕಷ್ಟ.
ರಾಯರು: ಆಯ್ತಪ್ಪ, ನಿಧಾನಕ್ಕೆ ಹೋಗು.
**********************
ಸುನಂದಮ್ಮ: ರೀ, ಕಂಪೀಟ್ರು ಸರಿಯಾಯ್ತಾ? ಅದೆಂತದೋ ಪೈರೀಸಿ, ಕದ್ದ ಮಾಲು ಅಂತೆಲ್ಲಾ ಹೇಳ್ತಿದ್ನಲ್ಲಾ, ಎಂತುದದು?
ರಾಯರು: ಅದೆಲ್ಲಾ ಎಂತೂ ಇಲ್ಲ ಕಣೆ, ಅವ್ನಿಗೆ ಕಂಪ್ಯೂಟ್ರು ಸರಿ ಮಾಡುದು ಹೆಂಗೇಂತ ಗೊತ್ತಾಗ್ಲಾಂತ ಕಾಣ್ತದೆ. ಅದ್ಕೇ ಎಂತೆಂತುದೋ ಹೇಳ್ಹೋದ. ಒಂದ್ನೂರುಪಾಯಿ ಹೋದ್ರೂ ಪರ್ವಾಗಿಲ್ಲ, ನಾಳೆ ನಾಗೇಶಂಗೇ ಬರಕ್ಕೆ ಹೇಳ್ತೀನಿ..
********************
:-) :-) :-)

Saturday, March 12, 2011
ಡಿಸ್ಕ್ ನ್ನು defragment ಮಾಡುವುದರ ಮೂಲಕ ಕಂಪ್ಯೂಟರ್ ಚುರುಕುಗೊಳಿಸಿ!
ನಿಮ್ಮ ಕಂಪ್ಯೂಟರ್ ತುಂಬಾ ನಿಧಾನವಾಗಿ ಕೆಲಸ ಮಾಡುತ್ತಿದೆಯೇ ಹಾಗಾದರೆ ಕೆಲವು ಮುಖ್ಯವಾದ ಡ್ರೈವ್‌ಗಳನ್ನು defragment ಮಾಡುವುದರ ಮೂಲಕ ಕಂಪ್ಯೂಟರ್‌ನ್ನು ಸ್ವಲ್ಪ ಮಟ್ಟಿಗೆ ಚುರುಕುಗೊಳಿಸಬಹುದು. ಅದನ್ನು ಹೇಗೆ ಮಾಡುವುದು ಎಂದು ತಿಳಿದುಕೊಳ್ಳುವ ಮೊದಲು ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ನಿಮ್ಮ ಟೇಬಲ್ ಮೇಲೆ ಕಡತಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಬಿದ್ದಿದೆ. ಆಗ ನಿಮಗೆ ಬೇಕಾದ ಕಡತವನ್ನು ಹುಡುಕಿಕೊಂಡು ತೆಗೆಯಬೇಕಾದರೆ ಹೆಚ್ಚು ಸಮಯ ಬೇಕಾಗುತ್ತದಲ್ಲವೇ? ಅದೇ ಕಡತಗಳು ಒಪ್ಪವಾಗಿ ಜೋಡಿಸಿಟ್ಟಿದ್ದರೆ ನಮಗೆ ಬೇಕಾದ ಕಡತಗಳನ್ನು ಕಡಿಮೆ ಸಮಯದಲ್ಲಿ ಸುಲಭವಾಗಿ ಹುಡುಕಬಹುದು ಮತ್ತು ನೀಟಾಗಿ ಇಟ್ಟಿರುವುದರಿಂದ ಹೆಚ್ಚು ಜಾಗವೂ ಸಿಗುತ್ತದೆ ಅಲ್ಲವೇ? ನಾವು defragment ಮಾಡಿದಾಗಲೂ ಡಿಸ್ಕ್‌ನಲ್ಲಿ ಇದೇ ರೀತಿ ಆಗುತ್ತದೆ. ಅಂದರೆ ಎಲ್ಲೆಲ್ಲೋ ಹಂಚಿ ಹೋಗಿರುವ ಕಡತಗಳೆಲ್ಲಾ ನೀಟಾಗಿ ಜೋಡಿಸಲ್ಪಡುತ್ತದೆ. ಇದರಿಂದ ಬೇಕಾದ ಕಡತಗಳನ್ನು ಹೆಕ್ಕಿ ತೆಗೆಯಲೂ ಕಂಪ್ಯೂಟರಿಗೆ ಸುಲಭವಾಗುತ್ತದೆ ಮತ್ತು ಸಮಯವೂ ಉಳಿಯುವುದರಿಂದ ಕೆಲಸ ಬೇಗನೇ ಆಗುತ್ತದೆ. ಅದೂ ಅಲ್ಲದೇ ಒಮ್ಮೆಲೇ ಹೆಚ್ಚು ಖಾಲಿ ಜಾಗ (free space) ದೊರೆಯುತ್ತದೆ. ಹಾಗಾದರೆ defragment ಮಾಡುವುದು ಹೇಗೆಂದು ನೋಡೋಣವೇ?
(ವಿಂಡೋಸ್ ಬಳಕೆದಾರರಿಗೆ)
ಮೊದಲು Disk Defragmenter ಓಪನ್ ಮಾಡಿ (Start-->Programs-->Accessories-->System Tools-->Disk Defragmenter, ಅಥವಾ Start-->Run ಮೇಲೆ ಕ್ಲಿಕ್ ಮಾಡಿ ಮತ್ತು dfrg.msc ಎಂದು ಟೈಪ್ ಮಾಡಿ OK ಒತ್ತಿ).
ನಂತರ ಮೊದಲನೇ ಡ್ರೈವ್ (ಪಾರ್ಟಿಶನ್) ಆರಿಸಿಕೊಂಡು, ಕೆಳಗಿರುವ Analyze ಬಟನ್ ಒತ್ತಿ.
(ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)
ಒಂದೆರಡು ಸೆಕೆಂಡ್ ನಂತರ Analyze ಮುಗಿದಿದೆ ಎಂದು ಸಂದೇಶ ಬರುತ್ತದೆ. ಅಲ್ಲಿ You need to defragment this volume ಎಂದು ಬಂದರೆ ಅಲ್ಲೇ ಕೆಳಗಿರುವ Defragment ಬಟನ್ ಒತ್ತಿ. ಇಲ್ಲದಿದ್ದರೆ ಬೇಡ.
ನಂತರದಲ್ಲಿ Defragment ಆಗುತ್ತಿರುವುದನ್ನು ನೋಡಬಹುದು. ಅಲ್ಲದೇ ಎಷ್ಟು ಪ್ರತಿಶತ Defragment ಆಗಿದೆ ಎಂದೂ ತೋರಿಸುತ್ತದೆ.
Defragment ಪೂರ್ಣವಾದ ಸಂದೇಶ ಬಂದ ನಂತರ Close ಒತ್ತಿ.
Estimated disk usage before defragmentation: ಹಾಗೂ Estimated disk usage after defragmentation:ನಲ್ಲಿರುವ ಮಾಹಿತಿಯನ್ನು ಗಮನಿಸಿದರೆ ಏನೇನು ಕೆಲಸ ಆಗಿದೆ ಎಂದು ತಿಳಿಯುತ್ತದೆ.
ಇದೇ ರೀತಿ ಉಳಿದ ಪಾರ್ಟಿಶನ್‌ಗಳನ್ನೂ defragment ಮಾಡಬಹುದು.
ನೀವು ಪ್ರತಿದಿನ ಕಂಪ್ಯೂಟರ್‌ನ್ನು ಉಪಯೋಗಿಸುತ್ತಿದ್ದರೆ ಎರಡು ಮೂರು ವಾರಗಳಿಗೊಮ್ಮೆ defragment ಮಾಡುವುದು ಒಳ್ಳೆಯದು. ಇದೂ ಅಲ್ಲದೇ ಇನ್ನೂ ಅನೇಕ ಮಾರ್ಗಗಳನ್ನು ಅನುಸರಿಸುವುದರಿಂದ ನಿಮ್ಮ ಕಂಪ್ಯೂಟರ್ ವೇಗವಾಗಿ ಕೆಲಸ ಮಾಡುವಂತೆ ಮಾಡಬಹುದು.

ತಂತ್ರಜ್ಞಾನ
Saturday, February 5, 2011
ಕಲರ್‌ಫುಲ್ ಗ್ರಬ್ ಲೋಡರ್ ಬೇಕೆ?
ಲೈಫ್‌ನಲ್ಲಿ ಎಲ್ಲವೂ ಕಲರ್‌ಫುಲ್ ಆಗಿದ್ರೇನೆ ಚೆಂದ ಅಲ್ಲವೇ? ನಾವು ಈ ಕಲರ್‌ಫುಲ್ ಯುಗದಲ್ಲಿ black and white ಟಿವಿ ನೋಡಲು ಇಷ್ಟಪಡುವುದಿಲ್ಲ ಅಲ್ವಾ? ಇದೇ ರೀತಿ ಗ್ರಬ್ ಲೋಡರ್‌ನಲ್ಲಿ ಅದೇ ಕಪ್ಪು background ಮತ್ತು ಬಿಳಿ ಅಕ್ಷರಗಳನ್ನು ನೋಡಿ, ನೋಡಿ ಬೇಜಾರಾಗಿದೆಯೇ? ಹಾಗಾದರೆ ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಸ್ವಲ್ಪ ಆಟವಾಡಿ ನೋಡಿ, ಆಮೇಲೆ ಗ್ರಬ್ ಲೋಡರ್‌ನಲ್ಲಿ ಬಣ್ಣ ಬಣ್ಣದ ಅಕ್ಷರಗಳನ್ನು ಕಂಡು ಆನಂದಿಸಿ.
ಮೊದಲಿಗೆ Terminalನಲ್ಲಿ ಕೆಳಗಿನ ಕಮ್ಯಾಂಡ್ ಓಡಿಸಿ,
sudo gedit /boot/grub/grub.cfg
(ಹಳೆಯ ಉಬುಂಟು ಆವೃತ್ತಿ ಇಟ್ಟುಕೊಂಡಿರುವವರು ಇದನ್ನು ರನ್ ಮಾಡಿ,
sudo gedit /boot/grub/menu.lst)
ನಂತರ ಬರುವ ಗ್ರಬ್ ಕಾನ್ಫಿಗರೇಷನ್ ಫೈಲ್‌ನ ಸುಮಾರು 64 ಮತ್ತು 65ನೇ ಸಾಲಿನಲ್ಲಿ
set menu_color_normal=white/black
(ಹಾಗೂ ನಂತರದ ಸಾಲಿನಲ್ಲಿ)
set menu_color_highlighted=black/light-gray ಅಂತ ಇದೆಯೇ ಎಂದು ನೋಡಿ. ಅಲ್ಲಿ ಇಲ್ಲದಿದ್ದರೆ ಸ್ವಲ್ಪ ಮೇಲೆ ಕೆಳಗೆ ಹುಡುಕಿ, ಸಿಗುತ್ತದೆ.
ಇಲ್ಲಿ ಮೊದಲನೆಯ ಸಾಲಿನಲ್ಲಿ (set menu_color_normal=), ಎರಡು ಬಣ್ಣಗಳ ಹೆಸರು ಇದೆಯಲ್ಲ (white/black), ಅದು ಗ್ರಬ್‌ನಲ್ಲಿ ಫಾಂಟ್ ಬಣ್ಣ ಮತ್ತು ಗ್ರಬ್‌ನ ಹಿಂಬದಿ ಬಣ್ಣವನ್ನು ಸೂಚಿಸುತ್ತದೆ. ಅಂದರೆ ಕಪ್ಪು ಹಿನ್ನಲೆಯಲ್ಲಿ ಬಿಳಿ ಅಕ್ಷರಗಳು. ಈಗ ಅದನ್ನು ನಿಮಗೆ ಬೇಕಾದ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: light-blue/black. ಇದು ಕಪ್ಪು ಹಿನ್ನಲೆಯಲ್ಲಿ, ತಿಳಿ ನೀಲಿ ಅಕ್ಷರಗಳನ್ನು ನೂಚಿಸುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನು ಗಮನಿಸಿ. ಬಣ್ಣಗಳನ್ನು ಸೂಚಿಸುವಾಗ ಸಾಮಾನ್ಯ ಬಳಕೆಯಲ್ಲಿರುವ, ಅಂದರೆ ಕಂಪ್ಯೂಟರ್‌ಗೆ ಸುಲಭವಾಗಿ ಗೊತ್ತಾಗುವ ಬಣ್ಣಗಳನ್ನೇ ಕೊಡಿ. ಅಂದರೆ black, white, red, blue, gray, light-blue, green, yellow ಇತ್ಯಾದಿ. ನೀವು violet, purple, brick-red ಅಂತೆಲ್ಲಾ ಕೊಟ್ಟರೆ ಅದಕ್ಕೆ ಗೊತ್ತಾಗಲ್ಲ! ;-)
ಅದರ ನಂತರದ ಸಾಲು ಇದೆಯಲ್ಲ(set menu_color_highlighted=), ಅದು ಹೈಲೈಟ್ ಆದ entryಯ ಬಣ್ಣವನ್ನು(black/light-gray) ಸೂಚಿಸುತ್ತದೆ. ಅಂದರೆ ಹೈಲೈಟ್ ಆದ ಎಂಟ್ರಿಯ ಹಿನ್ನೆಲೆ ಬಣ್ಣ light-gray ಮತ್ತು ಅಕ್ಷರದ ಬಣ್ಣ ಕಪ್ಪನ್ನು ಸೂಚಿಸುತ್ತದೆ. ಇಲ್ಲಿಯೂ ನಿಮಗೆ ಇಷ್ಟವಾಗುವ ಬಣ್ಣಗಳಿಗೆ ಬದಲಾಯಿಸಿ. ಉದಾಹರಣೆಗೆ: red/yellow ಅಂದರೆ ಹೈಲೈಟ್ ಆದ ಎಂಟ್ರಿಯ ಫಾಂಟ್ ಕಲರ್ ಕೆಂಪು, ಮತ್ತು ಹಿನ್ನೆಲೆ ಬಣ್ಣ ಹಳದಿ. ಇಲ್ಲಿಯೂ ಕೂಡ ಬಣ್ಣಗಳನ್ನು ಸೂಚಿಸುವಾಗ ಸ್ವಲ್ಪ ಎಚ್ಚರ ವಹಿಸಿ. ನಂತರ ಫೈಲ್‌ನ್ನು ಸೇವ್ ಮಾಡಿ, ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ. ಈಗ ನೋಡಿದರೆ ಗ್ರಬ್ ಲೋಡರ್ ಬಣ್ಣ ಬಣ್ಣದಿಂದ ಕಂಗೊಳಿಸುತ್ತಿರಬೇಕಲ್ಲವೇ? ಮೇಲೆ ಹೈಲೈಟ್ ಆದ ಎಂಟ್ರಿಯ ಬಣ್ಣ ಹಳದಿ ಕೊಟ್ಟಿರುವುದರಿಂದ ಅದು ಮಿನುಗುತ್ತದೆ ಕೂಡಾ.
ಸೂಚನೆ: ಗ್ರಬ್ ಕಾನ್ಫಿಗರೇಷನ್ ಫೈಲ್‌ನಲ್ಲಿ ಏನೇ ಬದಲಾವಣೆ ಮಾಡುವ ಮೊದಲೂ ಸೂಕ್ತ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಯಡವಟ್ಟಾದರೂ ಆಮೇಲೆ ಲಿನಕ್ಸ್, ವಿಂಡೋಸ್ ಯಾವ್ದೂ ಬೂಟಾಗಲ್ಲ. ಆದ್ರಿಂದ ಮೇಲಿನ ಬದಲಾವಣೆ ಮಾಡುವಾಗ ಸಾಕಷ್ಟು ಎಚ್ಚರಿಕೆ ಅಗತ್ಯ.

(ಚಿತ್ರವನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)

Thursday, January 20, 2011
ತರ್ಲೆ ಸಂಚಿಕೆ.. ಪ್ರಶ್ನೆ-1
ನಿಮಗೆಲ್ಲಾ ತರ್ಲೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯೋಣ ಅಂತ ಅನಿಸಿತು. ಅದಕ್ಕೇ ಈ ಹೊಸ ಅಂಕಣ ಪ್ರಾರಂಭ ಮಾಡಿದ್ದೇನೆ. ನೀವು ಉತ್ರ ಹೇಳ್ತೀರ ಅಲ್ವಾ? ;-)
ತರ್ಲೆ ಪ್ರಶ್ನೆ 1: ಒಂದೂರಲ್ಲಿ ಒಬ್ಬ ಕಳ್ಳ ಇರ್ತಾನೆ. ಅವನು ಮಹಾನ್ ಚಾಣಾಕ್ಷ ಚೋರ. ಯಾವುದೇ ಸಣ್ಣ ಸುಳುಹನ್ನೂ ಬಿಡದಂತೆ ಕಳ್ಳತನ ಮಾಡ್ತಾ ಇರ್ತಾನೆ. ಹಾಗೆಯೇ ಕದ್ದ ವಸ್ತುಗಳನ್ನು ಯಾರಿಗೂ ಗೊತ್ತಾಗದ ಹಾಗೆ ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲೆ ಕೋಣೆಯಲ್ಲಿ ಬಚ್ಚಿಡುತ್ತಿರುತ್ತಾನೆ. ಒಂದು ರಾತ್ರಿ ಕಾವಲುಗಾರರು ನಿದ್ದೆ ಮಾಡುತ್ತಿರುವ ಸಮಯ ನೋಡಿ ಅರಮನೆಯ ತಿಜೋರಿಗೆ ಈತ ಕನ್ನ ಹಾಕ್ತಾನೆ. ಅಲ್ಲಿ ಅವನಿಗೆ ಅತ್ಯಂತ ಬೆಲೆಬಾಳುವ ಮೂರು ವಜ್ರ ಕಾಣುತ್ತದೆ. ಅದರಲ್ಲಿ ಒಂದು ಸಾಮಾನ್ಯ ವಜ್ರ, ಇನ್ನೊಂದು ಸ್ವಲ್ಪ ಕೆಂಪು ಬಣ್ಣದ ವಜ್ರ ಹಾಗೂ ಕೊನೆಯದು ನೀಲಿ ಬಣ್ಣದ ವಜ್ರ. ಸರಿ ಅಂತ ಆ ಮೂರೂ ವಜ್ರಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಅಲ್ಲಿಂದ ಜಾಗ ಖಾಲಿ ಮಾಡ್ತಾನೆ. ಅರಮನೆಯಿಂದ ಕೊರಟವನೇ, ಸೀದಾ ಬಂದು ತನ್ನ ಮನೆಯ ನೆಲಮಾಳಿಗೆಯಲ್ಲಿರುವ ಕತ್ತಲಕೋಣೆಯಲ್ಲಿ ಆ ವಜ್ರದ ಗಂಟನ್ನು ಇಟ್ಟು, ನಿದ್ದೆ ಮಾಡಲು ಹೋಗುತ್ತಾನೆ. ಆದರೆ ಆ ವಜ್ರಗಳು ಎಷ್ಟು ಬೆಲೆಬಾಳಬಹುದು, ಯಾವುದು ಹೆಚ್ಚು ಹೊಳೆಯಬಹುದು ಎಂದು ಯೋಚಿಸಲು ಶುರು ಮಾಡಿದ ಆತನಿಗೆ ಏನು ಮಾಡಿದರೂ ನಿದ್ದೆ ಬರೋಲ್ಲ. ಹಾಗಾಗಿ ಆತ ಎದ್ದು ಮತ್ತೆ ಆ ನೆಲಮಾಳಿಗೆಯ ಕೋಣೆಗೆ ಹೋಗುತ್ತಾನೆ. ಅಲ್ಲಿ ವಜ್ರಗಳಿರುವ ಬಟ್ಟೆಯ ಗಂಟನ್ನು ಬಿಚ್ಚಿ ನೋಡುತ್ತಾನೆ.
ಈಗ ಪ್ರಶ್ನೆ ಇರುವುದು ನಿಮಗೆ. "ಆ ಕಳ್ಳ ಬಟ್ಟೆಯ ಗಂಟನ್ನು ತೆಗೆದು ನೋಡಿದಾಗ ಯಾವ ಬಣ್ಣದ ವಜ್ರ ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ? ಮತ್ತು ಅದಕ್ಕೆ ಕಾರಣವೇನು? ಉತ್ತರ ಹೇಳ್ತೀರ ಅಲ್ವಾ?
ಸರಿಯಾದ ಉತ್ತರ ಮುಂದಿನ ಸಂಚಿಕೆಯಲ್ಲಿ...
[ಈ ಕಥೆ ಸಂಪೂರ್ಣವಾಗಿ ನಾನು ಬರೆದದ್ದು, ಎಲ್ಲಿಂದಲೂ ಕದ್ದಿಲ್ಲ.. :-) ]

Friday, January 14, 2011
How to set Windows as default OS on Ubuntu dual boot
When you install Ubuntu along side the Windows, (i.e. dual boot) you’ll notice that Ubuntu is set as default OS on the GRUB loader. You can set Windows as default OS by changing the default value in Ubuntu’s Grub configuration file. First you’ve to open the Terminal on Ubuntu (Applications --> Accessories --> Terminal), and then run this command,
sudo gedit /boot/grub/grub.cfg
Now you’ll get a configuration file. Around the 13th line, you can see an entry default=”0”.
Here the value “0” represents the 1st entry i.e. Ubuntu. Usually Windows is the 5th entry in grub configuration file. So its value becomes “4”, because counting starts from 0. Now change the number “0” to “4” and save the file (Ctrl+S).
But be careful when editing the above file. Making any mistakes would result in Grub failure. So do not make any other changes on Grub configuration file. Then restart your system. Now you can see that Windows is selected as default OS instead of Ubuntu.
Note: Please note that the value 4 only works when your system has only two operating systems i.e. Windows and Ubuntu. Value of any OS depends on the number of entries on the Grub. If you have more operating systems, then the value of Windows may change. You can know the value of Windows by counting the number of entries on the grub configuration file. Here is an easiest way to know the value of Windows on the grub. When you start your system, look at the position of Windows on grub loader. If it is the 6th one, then the value of Windows becomes 5, because counting starts from 0. That means the value of 6th entry is 5.
There are some other solutions to set the default OS for those who finds it’s difficult to edit the grub file. There is an application called “Startup manager” in which you can set Windows as default using mouse. This is the safest way to change the default OS, but it needs internet connection. If you have internet connection, then run the following command on Terminal to install “Startup manager”.
sudo apt-get install startupmanager
After the successful installation, you’ll find “Startup manager” on System --> Administration --> Startup manager. Now you can set Windows as default OS on few clicks with “Startup manager”!
(Alternately there is another application called “Grub choose default” to change the default OS. You can install it by running
sudo apt-get install grub-choose-default on terminal)

Subscribe to:
Posts (Atom)