Friday, July 29, 2011

My Documents ಫೋಲ್ಡರಿನ target ಬದಲಿಸುವುದು

ವಿಂಡೋಸ್ ಉಪಯೋಗಿಸುವ ಕೆಲವರಿಗೆ ತಮ್ಮ ದಾಖಲೆಗಳನ್ನು "My Documents" ಫೋಲ್ಡರಿನಲ್ಲಿ ಸೇವ್ ಮಾಡಿಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ಈ "My Documents" ಫೋಲ್ಡರ್‍ ವಿಂಡೋಸ್ ಇರುವ ಡ್ರೈವ್‌ನಲ್ಲೇ ಇರುವುದರಿಂದ ವಿಂಡೋಸ್‌ಗೆ ಏನಾದರೂ ಹಾನಿಯಾದರೆ "My Documents" ಫೋಲ್ಡರಿನರುವ ದಾಖಲೆಗಳನ್ನೂ ಕಳೆದುಕೊಳ್ಳುವ ಅಪಾಯವಿರುತ್ತದೆ. ಆದ್ದರಿಂದ ನಿಮಗೆ "My Documents"ನಲ್ಲಿ ದಾಖಲೆಗಳನ್ನು ಉಳಿಸಿಕೊಳ್ಳುವ ಅಭ್ಯಾಸವಿದ್ದರೆ, ಅದರ Target ಬದಲಾಯಿಸಿಕೊಳ್ಳುವುದು ಒಳ್ಳೆಯದು.

ಅದಕ್ಕಾಗಿ ಮೊದಲು "My Documents" ಮೇಲೆ ರೈಟ್ ಕ್ಲಿಕ್ ಮಾಡಿ, Properties ಆರಿಸಿ.


ನಂತರ Target ಎಂಬಲ್ಲಿ ಹೊಸ ವಿಳಾಸ ಕೊಡಿ. ಅದು ಕಷ್ಟವಾದರೆ ಅಲ್ಲೇ ಕೆಳಗಿರುವ "Move" ಬಟನ್ ಒತ್ತಿ. ನಂತರ ಬೇರೆ ಡ್ರೈವ್ ಸೆಲೆಕ್ಟ್ ಮಾಡಿ, ಉದಾಹರಣೆಗೆ D: "Make New Folder" ಒತ್ತಿ.


 ಅದಕ್ಕೆ "My Documents" ಅಂತ ಹೆಸರು ಕೊಟ್ಟು "OK" ಬಟನ್ ಒತ್ತಿ.


ಮತ್ತೆ ಕೆಳಗೆ "OK" ಅಥವಾ "Apply" ಬಟನ್ ಒತ್ತಿ. ನಂತರ ಈಗಿರುವ ನಿಮ್ಮ ದಾಖಲೆಗಳನ್ನು ಹೊಸ ಫೋಲ್ಡರಿಗೆ ಕಳುಹಿಸಬೇಕೇ ಎಂದು ಕೇಳುತ್ತದೆ. ಆಗ Yes ಒತ್ತಿ. ನಂತರ ನಿಮ್ಮ ಎಲ್ಲಾ ದಾಖಲೆಗಳನ್ನು ಹೊಸ ಫೋಲ್ಡರಿಗೆ ಸ್ಥಳಾಂತರಿಸುತ್ತದೆ. (ಅಲ್ಲಿರುವ ದಾಖಲೆಗಳ ಗಾತ್ರಕ್ಕನುಗುಣವಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ).

ಈಗ ನೀವು  "My Documents" ಸೇವ್ ಮಾಡುವ ಎಲ್ಲಾ ದಾಖಲೆಗಳೂ ಬೇರೆ ಡ್ರೈವ್‌ನಲ್ಲಿರುತ್ತದೆ. ಆದ್ದರಿಂದ ಒಂದು ವೇಳೆ ವಿಂಡೋಸ್ ಕೈಕೊಟ್ಟರೂ ನಿಮ್ಮ ದಾಖಲೆಗಳು ಸುರಕ್ಷಿತವಾಗಿರುತ್ತದೆ.

-ಪ್ರಸನ್ನ.ಎಸ್.ಪಿ

Tuesday, July 26, 2011

ಶ್ರೀ ಗುರು ರಾಘವೇಂದ್ರ ಸ್ತೋತ್ರ

ಶ್ರೀ ಗುರು ಜೈ ಗುರು ರಾಘವೇಂದ್ರ
ಶ್ರಿತ ಜನ ಪಾಲಕ ರಾಘವೇಂದ್ರ ..... ||ಪ||

ದೀನ ದಯಾಪರ ರಾಘವೇಂದ್ರ
ಜ್ಞಾನ ನಿಧಿಯೇ ಶ್ರೀ ರಾಘವೇಂದ್ರ
ಗಾನ ಲೋಲ ಶ್ರೀ ರಾಘವೇಂದ್ರ
ಗಾನ ವಿಶಾರದ ಶ್ರೀ ರಾಘವೇಂದ್ರ .... ||1||

ದ್ವಿಜವರ ವಂದಿತ ರಾಘವೇಂದ್ರ
ಸುಜನರ ಪಾಲಕನೆ ರಾಘವೇಂದ್ರ
ಕಮನೀ ಯಾನನ ರಾಘವೇಂದ್ರ
ವಿಮಲ ಮಾನಸನೆ ರಾಘವೇಂದ್ರ ..... ||2||

ವೀಣಾ ಚತುರನೆ ರಾಘವೇಂದ್ರ
ವೇಣುಗಾನ ಪ್ರಿಯ ರಾಘವೇಂದ್ರ
ಪರಿಮಳ ರಚಿಸಿದ ರಾಘವೇಂದ್ರ
ಪರಿಹರಿಸೈಭವ ರಾಘವೇಂದ್ರ ....... ||3||

ಪ್ರಹ್ಲಾದಂಶನೆ ರಾಘವೇಂದ್ರ
ಆಹ್ಲಾದವ ಕೊಡು ರಾಘವೇಂದ್ರ
ವಾಸುಕಿಯೆಂಶನ ರಾಘವೇಂದ್ರ
ವ್ಯಾಸ ಯತಿಯು ನೀನೇ ರಾಘವೇಂದ್ರ ... ||4||

ಶ್ರೀ ಸುಧೀಂದ್ರ ಸುತ ರಾಘವೇಂದ್ರ
ದಾಶರಥಿಯ ಪ್ರಿಯ ರಾಘವೇಂದ್ರ
ಮೂಲ ರಾಮಾರ್ಚಕ ರಾಘವೇಂದ್ರ
ಬಾಲನ ಪೊರೆದೆಯೋ ರಾಘವೇಂದ್ರ    .... ||5||

ಕಾಮಿತ ಫಲದನೆ ರಾಘವೇಂದ್ರ
ಪ್ರೇಮವಿದೆಯೆನ್ನೊಳು ರಾಘವೇಂದ್ರ
ಗಂಧಲೇಪ ಪ್ರಿಯ ರಾಘವೇಂದ್ರ
ಸುಂದರ ಮೂರುತಿ ರಾಘವೇಂದ್ರ ...... ||6||


ತಂದೆ ತಾಯಿ ನೀನೆ ರಾಘವೇಂದ್ರ
ಕಂದನೆಂದು ತಿಳಿ ರಾಘವೇಂದ್ರ
ಮೂಢಗಿತ್ತೆ ಜ್ಞಾನ ರಾಘವೇಂದ್ರ
ಅವನಾದಿಗೊಡೆಯನಾದ ರಾಘವೇಂದ್ರ .... ||7||

ಭಕ್ತ ಜನಾಶ್ರಯ ರಾಘವೇಂದ್ರ
ಶಕ್ತ ನೀನೆ ಸರಿ ರಾಘವೇಂದ್ರ
ಸಾಸಿರ ವಂದ್ಯನೆ ರಾಘವೇಂದ್ರ
ಕ್ಲೇಶದರಿಸಿ ಪೊರೆ ರಾಘವೇಂದ್ರ ....... ||8||

ಮಂತ್ರಾಲಯ ದೊರೆ ರಾಘವೇಂದ್ರ
ಸಂತಾಪವ ಕಳೆ ರಾಘವೇಂದ್ರ
ಸರ್ವಶಕ್ತ ನೀನೆ ರಾಘವೇಂದ್ರ
ಸರ್ವಜನ ಪ್ರಿಯ ರಾಘವೇಂದ್ರ ....... ||9||

ಶಾಂತ ಮೂರ್ತಿ ಶ್ರೀ ರಾಘವೇಂದ್ರ
ಭ್ರಾಂತಿಯ ಬಿಡಿಪುದು ರಾಘವೇಂದ್ರ
ಕೃಷ್ಣಮೂರ್ತಿ ಶ್ರೀ ರಾಘವೇಂದ್ರ
ಸಾಷ್ಠಾಂಗವು ನಿನಗೆ ರಾಘವೇಂದ್ರ ..... ||10||

ಅಗಣಿತ ಮಹಿಮನೆ ರಾಘವೇಂದ್ರ
ಸುಗುಣ ಗುಣಾರ್ಣವ ರಾಘವೇಂದ್ರ
ಶರಣರ ಸುರವರ ರಾಘವೇಂದ್ರ
ಪರಮ ಪುರುಷಪೊರೆ ರಾಘವೇಂದ್ರ ..... ||11||

ಪತಿತ ಪಾವನನೆ ರಾಘವೇಂದ್ರ
ಸತತ ಭಜಿತಪೊರೆ ರಾಘವೇಂದ್ರ
ಕರುಣಿಗಳರಸನೆ ರಾಘವೇಂದ್ರ
ವರಗುರು ರಾಜನೆ ರಾಘವೇಂದ್ರ ...... ||12||

ಚಿಂಚಿತಾರ್ಥಪ್ರದ ರಾಘವೇಂದ್ರ
ಶ್ರೀಕಾಂತ ವಿಠಲನಾಥ ರಾಘವೇಂದ್ರ
ಜಯ ಮಂಗಳ ಗುರು ರಾಘವೇಂದ್ರ
ಜಯ ಶುಭ ಮಂಗಳ ರಾಘವೇಂದ್ರ ..... ||13||

-ಸಂಗ್ರಹ

Friday, July 22, 2011

ತುಳು ನಾಡಿನಲ್ಲಿ..

ದಕ್ಷಿಣ ಕನ್ನಡ ಜಿಲ್ಲೆಗೆ ಹೋದ್ರೆ ಯಾವ್ದೋ ಬೇರೆ ರಾಜ್ಯಕ್ಕೆ ಹೋದಂತೆ ಅನ್ಸುತ್ತೆ. ಯಾಕಂದ್ರೆ ಅಲ್ಲಿ ಎಲ್ರೂ ತುಳು ಭಾಷೆಯಲ್ಲೇ ಮಾತಾಡ್ತಾರೆ. ನಾವಾಗಿಯೇ ಅವರ ಬಳಿ ಕನ್ನಡದಲ್ಲಿ ಮಾತಾಡಿದರೆ ಮಾತ್ರ ಅವ್ರು ಕನ್ನಡದಲ್ಲಿ ಮಾತಾಡ್ತಾರೆ. ಅದರಲ್ಲೂ ಎಷ್ಟೋ ಜನರಿಗೆ ಕನ್ನಡ ಸರಿಯಾಗಿ ಬರುವುದೇ ಇಲ್ಲ. ನನಗಂತೂ ತುಳು ಸ್ವಲ್ಪವೂ ಬರುವುದಿಲ್ಲ. ಹಾಗಾಗಿ ಅಲ್ಲಿಗೆ ಹೋಗಿದ್ದಾಗ ಭಾಷೆಯ ತೊಡಕಿನಿಂದ ಸ್ವಲ್ಪ ಇರುಸು ಮುರುಸಾಗಿದ್ದು ನಿಜ. ಆದರೆ ಕನ್ನಡದಲ್ಲಿಯೇ ಮಾತನಾಡಿಸಿದ ವ್ಯಕ್ತಿಗಳೂ ಸಿಕ್ಕರು. ಅವರೇ ಸರ್ಕಾರಿ ಬಸ್ಸಿನ ಕಂಡಕ್ಟರ್‌ಗಳು! ಅಲ್ಲಿಂದ ಹೊರಡುವ ದಿನ ಬಸ್ಸಿನಲ್ಲಿ ಒಬ್ಬ ನನ್ನ ಪಕ್ಕವೇ ಬಂದು ಕುಳಿತುಕೊಂಡ. ಆಮೇಲೆ ನನ್ನ ಜೊತೆ ತುಳುವಿನಲ್ಲಿಯೇ ಮಾತಾಡತೊಡಗಿದ. ನನಗೆ ಏನೂ ಅರ್ಥ ಆಗ್ಲಿಲ್ಲ. ಆದ್ರೂ ಎಲ್ಲದಕ್ಕೂ ಹ್ಞೂಂ.. ಹ್ಞೂಂ.. ಅಂದೆ. ಸುಮಾರು ಹೊತ್ತು ಹಾಗೇ ಮಾತಾಡ್ತಿದ್ದ. ನನಗೂ ಬೇಜಾರಾಗಿ ನಿದ್ದೆ ಬರುತ್ತಿರುವಂತೆ ಕಣ್ಣು ಮುಚ್ಚಿಕೊಂಡು ಕುಳಿತೆ. ಆಮೇಲೆ ಅವನು ಎದ್ದುಹೋಗಿ ಪಕ್ಕದ ಸೀಟಿನಲ್ಲಿ ಕುಳಿತಿದ್ದವನ ಹತ್ತಿರ ಮಾತನಾಡೋಕೆ ಶುರು ಮಾಡಿದ. ಸಧ್ಯ ಕೊರೆತ ಕಡಿಮೆಯಾಯ್ತಲ್ಲಾ ಅಂತ ಅಂದುಕೊಂಡು ನಿದ್ದೆ ಮಾಡಿದೆ. :)