Monday, October 24, 2011

ಉಬುಂಟು 11.10ರಲ್ಲಿ ಕನ್ನಡ ಅಕ್ಷರ ಬರೆಯುವ ತೊಂದರೆ ಮತ್ತು ಪರಿಹಾರ

ಉಬುಂಟು 11.10ರಲ್ಲಿ ಕನ್ನಡ ಅಕ್ಷರಗಳನ್ನು ಬರೆಯಲು ಹೋದರೆ ಸ್ಪೇಸ್ ಇಲ್ಲೆಲ್ಲೋ ಬಂದು ವಾಕ್ಯಗಳು ಓದಲಾಗದಷ್ಟು ಹದಗೆಡುತ್ತದೆ. Unity desktopನಲ್ಲಿರುವ ಏನೋ ಒಂದು ತೊಂದರೆ ಇದಕ್ಕೆ ಕಾರಣ.

ಇದಕ್ಕೆ ಪರಿಹಾರವೂ ಇದೆ. GNOME Desktop ಹಾಕಿಕೊಂಡರೆ ನಂತರ ಕನ್ನಡವನ್ನು ಸರಿಯಾಗಿ ಟೈಪಿಸಲು ಆಗುತ್ತದೆ. GNOMEನ್ನು ಸ್ಥಾಪಿಸಿಕೊಳ್ಳಲು terminal ಓಪನ್ ಮಾಡಿ, ಈ ಕಮ್ಯಾಂಡನ್ನು ಓಡಿಸಿ,

sudo apt-get install gnome-panel

ನಂತರ ಲಾಗ್‌ಔಟ್ ಆಗಿ. ಮತ್ತೊಮ್ಮೆ ಲಾಗಿನ್ ಆಗುವಾಗ ಯೂಸರ್ ನೇಮಿನ ಪಕ್ಕ ಒಂದು ಚಕ್ರ ಕಾಣುತ್ತದೆ. ಅಲ್ಲಿ GNOME ಅಥವಾ GNOME Classic ಆರಿಸಿಕೊಳ್ಳಿ.

ಈಗ ಕನ್ನಡವನ್ನು ಟೈಪಿಸಿದರೆ ಸರಿಯಾಗಿ ಬರುತ್ತದೆ!

-ಪ್ರಸನ್ನ.ಎಸ್.ಪಿ

Saturday, October 22, 2011

ಪದ್ಯ: ಗುಬ್ಬಿ


(ಹಾಡನ್ನು ಕೇಳಲು ಮೇಲೆ Play ಬಟನ್ ಒತ್ತಿ. ವಾಲ್ಯುಮ್ ಸ್ವಲ್ಪ ಜೋರಾಗಿ ಇಡಿ)

ಗುಬ್ಬಿಯೊಂದು
ಹಾರಿಬಂದು
ಮನೆಯ ಮೇಲೆ ಕುಳಿತಿತು ||೧||

ಅತ್ತ ಇತ್ತ
ಸುತ್ತ ಮುತ್ತ
ಕತ್ತುತಿರುಗಿ ನೋಡಿತು ||೨||

ಚೀಂವ್ ಚೀಂವ್
ಚೀಂವ್ ಎಂದು
ಚೆಂದದಿಂದ ಹಾಡಿತು ||೩||

ಅದನು ಕಂಡು
ಪುಟ್ಟ ಪಾಪ
ಅಲ್ಲೆ ನೋಡಿ ನಿಂತಿತು ||೪||

(ಬರೆದವರು ಯಾರು ಅಂತ ಗೊತ್ತಿಲ್ಲ. ಶಾಲೆಯಲ್ಲಿ ಹೇಳಿಕೊಟ್ಟಿದ್ದು.. ಹಾಡಿರುವುದು ಶ್ರೀದೇವಿ)
(ಇದು ಅಂತಃಸ್ಫುರಣದಲ್ಲಿ ನೂರನೆಯ ಬರಹ!!)

Tuesday, October 4, 2011

ಕನ್ನಡ ಟ್ವಿಟರ್ ತಂತ್ರಾಂಶ:

ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ ಕನ್ನಡ ಬಲ್ಲವರಿಗೆ ಟ್ವಿಟರನ್ನು ಬಳಸಲು ಸುಲಭವಾಗುತ್ತದೆ ಎಂದು ನನ್ನ ನಂಬಿಕೆ. ಕನ್ನಡ ಟ್ವಿಟರನ್ನು http://prasannasp.net/twitter ತಾಣಕ್ಕೆ ಹೋಗುವ ಮೂಲಕ ಬಳಸಬಹುದು.

ಏನಿದು "ಕನ್ನಡ ಟ್ವಿಟರ್"?
ಅಂತರ್ಜಾಲದಲ್ಲಿ ಸಾಕಷ್ಟು ಕನ್ನಡ ತಾಣಗಳಿದ್ದರೂ ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಬಳಕೆ ಕಡಿಮೆಯೇ. ಇನ್ನು ಸಾಮಾಜಿಕ ತಾಣಗಳೂ ಕೂಡ ಮೊದಲು ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಗೊಂಡು ನಂತರ ಯಾವುದೋ ಕಾಲದಲ್ಲಿ ಕನ್ನಡಕ್ಕೆ ಬರುತ್ತಿವೆ. ಟ್ವಿಟರ್ ಕೂಡಾ ಇದಕ್ಕೆ ಹೊರತಾಗಿಲ್ಲ. ಟ್ವಿಟರ್ ಈಗಾಗಲೇ ಹಿಂದಿಯಲ್ಲಿ ಲಭ್ಯವಿದೆ. ಆದರೆ ಅದು ಕನ್ನಡಕ್ಕೆ ಯಾವಾಗ ಬರುತ್ತದೆಂದು ಹೇಳಲು ಈಗಲೇ ಸಾಧ್ಯವಿಲ್ಲ. ಈ ಬಗ್ಗೆ ಯೋಚಿಸಿದಾಗ ನಾನೇ ಏಕೆ ಟ್ವಿಟರಿಗೆ ಕನ್ನಡದ ಹೊದಿಕೆ ಹೊದಿಸಬಾರದು ಎಂದೆನಿಸಿತು. ಆಗ ಹುಟ್ಟಿದ್ದೇ ಈ ಕನ್ನಡ ಟ್ವಿಟರ್ ತಂತ್ರಾಂಶ

ಉಪಯೋಗಿಸುವುದು ಹೇಗೆ?
ಮೊದಲು http://prasannasp.net/twitter/oauth ತಾಣಕ್ಕೆ ಹೋಗಿ. ನಿಮ್ಮ ಟ್ವಿಟರ್ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಕೊಟ್ಟು, "Authorize app" ಬಟನ್ ಒತ್ತಿ. (ಗಮನಿಸಿ: ನೀವು ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಅಕೌಂಟನ್ನು ಬಳಸಲು ಮಾತ್ರಾ ಅನುಮತಿ ಕೊಡುತ್ತಿದ್ದೀರ. ಈ ತಂತ್ರಾಂಶಕ್ಕೆ ನಿಮ್ಮ ಟ್ವಿಟರ್ ಪಾಸ್‌ವರ್ಡ್ ಗೊತ್ತಾಗುವುದಿಲ್ಲ. ಹಾಗಾಗಿ ಧೈರ್ಯವಾಗಿ ನಿಮ್ಮ ಪಾಸ್‌ವರ್ಡ್ ಕೊಡಬಹುದು!)

ಈಗ ನೀವು ಕನ್ನಡ-ಟ್ವಿಟರನ್ನು ನೇರವಾಗಿ ಬಳಸಬಹುದು. ಇದರ ಒಂದು ದೊಡ್ಡ advantage ಎಂದರೆ ನೀವು ಒಮ್ಮೆ ಕನ್ನಡ-ಟ್ವಿಟರಿಗೆ ಲಾಗಿನ್ ಆಗಿ, ನಂತರ settings (http://prasannasp.net/twitter/settings) ಪುಟದಲ್ಲಿ ಒಂದು ಪಾಸ್‌ವರ್ಡ್ ಕೊಟ್ಟು ನಿಮ್ಮ ಪ್ರೊಫೈಲನ್ನು ಸೇವ್ ಮಾಡಿದರೆ, ಮುಂದಿನ ಸಲದಿಂದ ನೀವು ನೇರವಾಗಿ ಆ ಪಾಸ್‌ವರ್ಡ್ ಮೂಲಕ ಕನ್ನಡ-ಟ್ವಿಟರಿಗೆ ಲಾಗಿನ್ ಆಗಬಹುದು. ಇದರಿಂದ ನೀವು ಕನ್ನಡ-ಟ್ವಿಟರನ್ನು twitter.com ಬ್ಲಾಕ್ ಆಗಿರುವ ಕಡೆಯೂ ಬಳಸಲು ಸಾಧ್ಯವಾಗುತ್ತದೆ.

ಕನ್ನಡ-ಟ್ವಿಟರಿಗೆ ನೇರವಾಗಿ ಲಾಗಿನ್ ಆಗಲು http://prasannasp.net/twitter/login ಪುಟಕ್ಕೆ ಹೋಗಿ, ನಿಮ್ಮ ಟ್ವಿಟರ್ ಯೂಸರ್ ನೇಮ್ ಹಾಗೂ ನೀವು ಕನ್ನಡ-ಟ್ವಿಟರಿಗೆ ಆರಿಸಿಕೊಂಡ ಪಾಸ್‌ವರ್ಡ್‌ ನ್ನು ಕೊಟ್ಟು  ಸೈನ್‌ಇನ್ ಆಗಿ.


 ವೈಶಿಷ್ಟ್ಯತೆಗಳು: 
  • ಕನ್ನಡ-ಟ್ವಿಟರ್ ಸಂಪೂರ್ಣವಾಗಿ ಯೂನಿಕೋಡ್‌ನಲ್ಲಿದೆ. ಹಾಗಾಗಿ ಇದನ್ನು ಯೂನಿಕೋಡ್ ಬೆಂಬಲಿತ ಎಲ್ಲಾ ಉಪಕರಣಗಳಲ್ಲಿ ಬಳಸಬಹುದು. (ಮೊಬೈಲ್ ಫೋನ್‌ಗಳಲ್ಲಿ ಸಹ ಬಳಸಬಹುದು).
  • ಇದು OAuth ಮೂಲಕ ಕೆಲಸ ಮಾಡುವುದರಿಂದ ತುಂಬಾ ಸುರಕ್ಷಿತ. ನಿಮ್ಮ ಪಾಸ್‌ವರ್ಡ್ ಎಂದಿಗೂ ಬೇರೆಯವರಿಗೆ ತಿಳಿಯುವುದಿಲ್ಲ. ಹಾಗೂ ಯಾವಾಗ ಬೇಕಾದರೂ http://twitter.com/settings/applications ಪುಟಕ್ಕೆ ತೆರಳಿ ಈ ತಂತ್ರಾಂಶಕ್ಕೆ access revoke ಮಾಡಬಹುದು.
  • ಟ್ವಿಟ್‌ಪಿಕ್ ಮೂಲಕ ನೇರವಾಗಿ ಚಿತ್ರಗಳನ್ನು ಸೇರಿಸಬಹುದು.
  • ಇದು open source ತಂತ್ರಾಂಶವಾಗಿರುವುದರಿಂದ ನೀವೂ ಇದರ ಅಭಿವೃದ್ಧಿಯಲ್ಲಿ ಭಾಗವಹಿಸಬಹುದು. ವಿವರಗಳಿಗಾಗಿ ಈ ಪುಟವನ್ನು ನೋಡಿ.
ಇನ್ನೇನು ಮಾಡಬಹುದು:
  • ಸಧ್ಯಕ್ಕೆ ಈ ತಂತ್ರಾಂಶ ನನ್ನ ವೆಬ್‌ಸೈಟ್‌ನಲ್ಲಿದೆ. ಯಾರಾದರೂ ಬೆಂಬಲಕ್ಕೆ ನಿಂತರೆ ಇದಕ್ಕೆ ಒಂದು ಡೊಮೈನ್ ಕೊಂಡು, ಬೇರೆ ತಾಣ ಮಾಡಬಹುದು.
  • Google Transliteration ಬಳಸಿಕೊಂಡು ನೇರವಾಗಿ ಕನ್ನಡದಲ್ಲಿ ಟ್ವೀಟ್ ಮಾಡುವಂತೆ ಮಾಡಬಹುದು.
  • Google Translation ಸೇವೆ ಬಳಸಿಕೊಂಡು ಬೇರೆ ಭಾಷೆಯಲ್ಲಿರುವ (ಉದಾ:English) ಟ್ವೀಟ್‌ಗಳನ್ನು ಕನ್ನಡಕ್ಕೆ ಭಾಷಾಂತರಿಸಿ ತೋರಿಸಬಹುದು.
ನಿಮ್ಮಿಂದೇನು ಸಹಾಯವಾಗಬಹುದು:
  • ಇದನ್ನು ಬಳಸಿ ನೋಡಿ, ಚೆನ್ನಾಗಿದ್ದರೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಆಗ ನಾನು ಹಾಕಿದ ಶ್ರಮ ಸಾರ್ಧಕವಾಗುತ್ತದೆ.
  • ಇದು open source ತಂತ್ರಾಂಶವಾದ್ದರಿಂದ ಯಾರು ಬೇಕಾದರೂ ಇದನ್ನು ಬಳಸಬಹುದು ಹಾಗೂ ಅಭಿವೃದ್ಧಿಪಡಿಸಬಹುದು. ವಿವರಗಳಿಗೆ ಈ ಪುಟ ನೋಡಿ. ನೀವು ಇದರಲ್ಲಿ ಆಸಕ್ತರಾಗಿದ್ದರೆ ನನಗೊಂದು ಸಂದೇಶ ಕಳಿಸಿ.
ಕನ್ನಡ-ಟ್ವಿಟರ್ ತಂತ್ರಾಂಶದ ಒಂದಿಷ್ಟು screen shotಗಳು: (ಚಿತ್ರಗಳನ್ನು ಹಿರಿದಾಗಿಸಲು ಅದರ ಮೇಲೆ ಕ್ಲಿಕ್ಕಿಸಿ)









ಅಪ್ಡೇಟ್‌ಗಳಿಗಾಗಿ ನನ್ನನ್ನು ಟ್ವಿಟರಿನಲ್ಲಿ ಹಿಂಬಾಲಿಸಿ: @prasannasp
Code credits: Dabr

ಧನ್ಯವಾದಗಳೊಂದಿಗೆ,
-ಪ್ರಸನ್ನ. ಎಸ್. ಪಿ