ಉಬುಂಟು 11.10ರಲ್ಲಿ ಕನ್ನಡ ಅಕ್ಷರಗಳನ್ನು ಬರೆಯಲು ಹೋದರೆ ಸ್ಪೇಸ್ ಇಲ್ಲೆಲ್ಲೋ ಬಂದು ವಾಕ್ಯಗಳು ಓದಲಾಗದಷ್ಟು ಹದಗೆಡುತ್ತದೆ. Unity desktopನಲ್ಲಿರುವ ಏನೋ ಒಂದು ತೊಂದರೆ ಇದಕ್ಕೆ ಕಾರಣ.
ಇದಕ್ಕೆ ಪರಿಹಾರವೂ ಇದೆ. GNOME Desktop ಹಾಕಿಕೊಂಡರೆ ನಂತರ ಕನ್ನಡವನ್ನು ಸರಿಯಾಗಿ ಟೈಪಿಸಲು ಆಗುತ್ತದೆ. GNOMEನ್ನು ಸ್ಥಾಪಿಸಿಕೊಳ್ಳಲು terminal ಓಪನ್ ಮಾಡಿ, ಈ ಕಮ್ಯಾಂಡನ್ನು ಓಡಿಸಿ,
sudo apt-get install gnome-panel
ನಂತರ ಲಾಗ್‌ಔಟ್ ಆಗಿ. ಮತ್ತೊಮ್ಮೆ ಲಾಗಿನ್ ಆಗುವಾಗ ಯೂಸರ್ ನೇಮಿನ ಪಕ್ಕ ಒಂದು ಚಕ್ರ ಕಾಣುತ್ತದೆ. ಅಲ್ಲಿ GNOME ಅಥವಾ GNOME Classic ಆರಿಸಿಕೊಳ್ಳಿ.
ಈಗ ಕನ್ನಡವನ್ನು ಟೈಪಿಸಿದರೆ ಸರಿಯಾಗಿ ಬರುತ್ತದೆ!
-ಪ್ರಸನ್ನ.ಎಸ್.ಪಿ

4 Comments:
ಟೈಪ್ ಮಾಡುವಾಗ ಮಾತ್ರ ತೊಂದರೆಯಾ? ಈ ಕೆಳಗಿನ Testಗಳನ್ನು ಮಾಡಿ ಹೇಳುವಿರಾ?
೧. Unity login ನಲ್ಲಿ ಕನ್ನಡ ಬರೆದು ಫೈಲ್ ಸೇವ್ ಮಾಡಿ Gnome ಲಾಗಿನ್ ನಲ್ಲಿ ಓದಲಾಗುತ್ತಾ? (check the reverse case too)
೨. ವೆಬ್ ಪೇಜ್ ಗಳಲ್ಲಿ ಕನ್ನಡ ಓದಲಾಗ್ತಿದ್ಯ? (Unity ನಲ್ಲಿ)
೩. Gedit ನಲ್ಲಿ ಮಾತ್ರವೇ ಈ ತೊಂದರೆಯಾ ಅಥವಾ ಬೇರೆಕಡೆಯೂ ಹಾಗೇ ಇದೆಯಾ? (You can test in mousepad, leafpad or in firefox textarea etc)
ಟೈಪ್ ಮಾಡುವಾಗ ಮಾತ್ರಾ ತೊಂದರೆಯಾಗುತ್ತಿದೆ. Test results ಈ ಕೆಳಗಿನಂತಿದೆ,
1. Unity loginನಲ್ಲಿ ಕನ್ನಡ ಬರೆದು ಸೇವ್ ಮಾಡಿದರೆ GNOME ಲಾಗಿನ್‌ನಲ್ಲಿಯೂ ಓದಲಾಗುವುದಿಲ್ಲ. ಸ್ಪೇಸ್ ಎಲ್ಲೆಲ್ಲೋ ಕಾಣಿಸುವ ತೊಂದರೆ ಹಾಗೇ ಇದೆ. ಆದರೆ GNOME ಲಾಗಿನ್‌ನಲ್ಲಿ ಕನ್ನಡ ಬರೆದು ಸೇವ್ ಮಾಡಿದರೆ Unity ಲಾಗಿನ್‌ನಲ್ಲಿ ಓದಬಹುದು.
2. ವೆಬ್‌ಪೇಜ್‌ಗಳಲ್ಲಿ ಕನ್ನಡವನ್ನು Unityಯಲ್ಲಿಯೂ ಓದುವುದಕ್ಕೆ ಸಾಧ್ಯವಾಗುತ್ತದೆ.
3. Gedit ಮಾತ್ರವಲ್ಲ Libre Office, Tomboy Notesನಲ್ಲಿಯೂ ಇದೇ ತೊಂದರೆ ಇದೆ. ವೆಬ್‌ಪೇಜ್‌ಗಳಲ್ಲಿಯೂ ಕನ್ನಡವನ್ನು ಬರೆಯುವುದಕ್ಕೆ ಆಗುವುದಿಲ್ಲ (firefox ಬ್ರೌಸರಿನಲ್ಲಿ).
ಹಾಗಾಗಿ Unityಯ ತೊಂದರೆ ಎಂದು ಭಾವಿಸಿದ್ದೇನೆ.
ಉತ್ತರ ನೋಡಿದರೆ, ರೆಂಡರಿಂಗ್ ತೊಂದರೆ ಇಲ್ಲ ಅನ್ನಿಸುತ್ತೆ..
ibus application Unityಯ ಜೊತೆ ಕೆಲಸ ಮಾಡುತ್ತಿಲ್ಲವೆನಿಸುತ್ತದೆ.
http://code.google.com/p/ibus/issues/detail?id=1291
Unity 2Dಯಲ್ಲಿ ಈ ತೊಂದರೆ ಇಲ್ಲ!! 3Dಯಲ್ಲಿ ಮಾತ್ರಾ..
Post a Comment